ಗುಬ್ಬಿ | ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜೂನ್.29 ಜಾಗೃತಿ ಸಂವಾದ

Date:

ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘ ಹಾಗೂ ಚೇಳೂರಿನ ಸಹಜ ನೈಸರ್ಗಿಕ ಬೇಸಾಯ ತರಬೇತಿ ಕೇಂದ್ರದ ಸಹಯೋಗದಲ್ಲಿ ಜೂನ್ 29 ರಂದು ಹೇರೂರು ಶ್ರೀ ಗುರುಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಆಹಾರ ತಜ್ಞ ಡಾ.ಖಾದರ್ ಅವರ ವಿಶೇಷ ಉಪನ್ಯಾಸ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ದಿ ಸಂಶೋಧನಾ ಸಂಘದ ರಾಜ್ಯಾಧ್ಯಕ್ಷ ಬಿ.ಆರ್.ರಘುರಾವ್ ತಿಳಿಸಿದರು.

- Advertisement -

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನೈಸರ್ಗಿಕ ಕೃಷಿ ಮತ್ತು ದೇಶಿ ಹಸುಗಳ ಪಂಚಗವ್ಯ ಮೂಲಕ ರಾಸಾಯನಿಕ ಮುಕ್ತ ಮಣ್ಣು ಸಿದ್ಧಪಡಿಸಿ ಸಹಜ ಕೃಷಿ ನಡೆಸುವ ಹಾಗೂ ಸಿರಿಧಾನ್ಯಗಳ ಮೂಲಕ ನಮ್ಮ ಆಹಾರ ಪದ್ಧತಿ ರೂಡಿಸಿ ಆರೋಗ್ಯ ಸಮಾಜ ನಿರ್ಮಾಣಕ್ಕೆ ಅವಶ್ಯ ಮಾರ್ಗದರ್ಶನವನ್ನು ಈ ಕಾರ್ಯಕ್ರಮ ನೀಡಲಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಆಹಾರತಜ್ಞ ಡಾ.ಖಾದರ್ ವಿದೇಶದಲ್ಲಿ ಹತ್ತಾರು ಲಕ್ಷ ವೇತನ ಪಡೆಯುವ ಅವಕಾಶ ತೊರೆದು ನಮ್ಮ ನೆಲದ ವಿಷಯುಕ್ತ ಮಣ್ಣು, ಪ್ಲಾಸ್ಟಿಕ್ ಹಾವಳಿ, ಅನಾರೋಗ್ಯಕರ ಆಹಾರ ಪದ್ಧತಿ, ವಿಷಯುಕ್ತ ಆಹಾರ ಈ ಬಗ್ಗೆ ಅಧ್ಯಯನ ನಡೆಸಿ ಉತ್ತಮ ಆರೋಗ್ಯಕ್ಕೆ ಆಹಾರ ಪದ್ಧತಿ ಹಾಗೂ ರಾಸಾಯನಿಕ ಮುಕ್ತ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತಾ ಮನೆ ಮಾತಾಗಿದ್ದಾರೆ. ಬಿಪಿ, ಶುಗರ್, ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಗೆ ಸಿರಿಧಾನ್ಯಗಳ ಮೂಲಕ ರೋಗ ಮುಕ್ತವಾಗುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರ ಮಾರ್ಗದರ್ಶನ ಮೂಲಕ ನಮ್ಮ ಜೀವನ ಆರೋಗ್ಯಕರವಾಗಿ ಇಟ್ಟುಕೊಳ್ಳುವ ಅಭ್ಯಾಸ ಮಾಡೋಣ. ಈ ಸಂವಾದ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಾಲಿಂಗಯ್ಯ, ತುಮಕೂರು ವಿವಿ ಪ್ರಾಂಶುಪಾಲ ಕರಿಯಣ್ಣ ಇನ್ನಿತರ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ. ಜೂನ್.29 ಸೋಮವಾರ ಬೆಳಿಗ್ಗೆ 10 ಗಂಟೆಗೆ ಹೇರೂರು ಸಿದ್ಧರಾಮೇಶ್ವರ ಸಮುದಾಯಭವನಕ್ಕೆ ಜಿಲ್ಲೆಯ ಎಲ್ಲಾ ರೈತರು ಆಗಮಿಸುವಂತೆ ಮನವಿ ಮಾಡಿದರು.

ಸಹಜ ನೈಸರ್ಗಿಕ ಕೃಷಿಕ ಅಮ್ಮನಘಟ್ಟ ಶಂಕರಪ್ಪ ಮಾತನಾಡಿ ಸಿರಿಧಾನ್ಯಗಳ ಬಗ್ಗೆ ಮೂಗು ಮುರಿಯುವವರಿಗೆ ಡಾ.ಖಾದರ್ ಉಪನ್ಯಾಸ ಅವಶ್ಯವಿದೆ. ರೋಗಮುಕ್ತ ಬದುಕು ಕಟ್ಟಿಕೊಳ್ಳಲು ಈ ಸಂವಾದ ತರಬೇತಿ ಕಾರ್ಯಕ್ರಮ ದಾರಿ ದೀಪವಾಗಲಿದೆ. ಹತ್ತು ಹಲವು ರೋಗಗಳಿಂದ ಮುಕ್ತಿ ಪಡೆಯುವ ಜೊತೆಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟುವುದು, ನೈಸರ್ಗಿಕ ಕೃಷಿ ಬಗ್ಗೆ ಅಗತ್ಯ ಮಾಹಿತಿ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ನೈಸರ್ಗಿಕ ಆಹಾರ ಮಹತ್ವ, ಸಿರಿಧಾನ್ಯಗಳ ಪ್ರಯೋಜನ, ದೈನಂದಿನ ಆಹಾರ ಪದ್ಧತಿಗಳ ಬಗ್ಗೆ ಪ್ರಶ್ನೋತ್ತರ ಸಂವಾದ ನಡೆಯಲಿದೆ. ಇದರ ಪ್ರಯೋಜನ ಜಿಲ್ಲೆಯ ಎಲ್ಲಾ ರೈತ ಭಾಂದವರು ಪದ್ದುಕೊಳ್ಳಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಪುಟ್ಟಕಾಮಣ್ಣ ಮಾತನಾಡಿ ಗಾಂಧೀಜಿ ತತ್ವ ಸಿದ್ಧಾಂತಕ್ಕೆ ಹತ್ತಿರವಾದ ಈ ಕಾರ್ಯಕ್ರಮ ನೈಸರ್ಗಿಕ ಕೃಷಿ ಮತ್ತು ಆಹಾರ ಬಗ್ಗೆ ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ರಾಸಾಯನಿಕ ಬಳಕೆ ಅನಿವಾರ್ಯ ಎಂದುಕೊಂಡ ರೈತರು ಈ ಕಾರ್ಯಕ್ರಮ ಪ್ರಯೋಜನ ಪಡೆಯಬೇಕಿದೆ. ಜಾಗೃತಿ ಕಾರ್ಯಕ್ರಮ ಗುಬ್ಬಿಯಿಂದ ಚಾಲನೆ ಸಿಕ್ಕು ರಾಜ್ಯವ್ಯಾಪಿ ನೈಸರ್ಗಿಕ ಕೃಷಿ ಆಹಾರ ಬಗ್ಗೆ ಆಂದೋಲನ ನಡೆಸಲು ಸಂಘ ಸಜ್ಜಾಗಿದೆ. ಈ ಜೊತೆಗೆ ಶ್ರೀಗಂಧ ಕೃಷಿ ಮತ್ತು ಅದರ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆ ತೆರೆಯಲಿದ್ದು, ರೈತರು ಅಗತ್ಯ ಮಾಹಿತಿ ಪಡೆಯಬಹುದಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಈ ಕಾರ್ಯಕ್ರಮ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ಡಿ.ಪಿ.ರಂಗನಾಥ್, ಎಸ್.ಲಿಂಗಪ್ಪ, ಮೋಹನ್ ಕುಮಾರ್, ನಿವೃತ್ತ ವಲಯ ಅರಣ್ಯಾಧಿಕಾರಿ ಶಾಂತರಾಜು, ವಕೀಲ ಬಿ.ವಿ.ರಾಜೀವ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಡದ ವಿದ್ವತ್ ಲೋಕದ ದಿಗ್ಗಜ ಕೆ.ವಿ. ನಾರಾಯಣರಿಗೆ ತುಮಕೂರು ವಿವಿಯ ನುಡಿನಮನ

ಹಿರಿಯ ವಿದ್ವಾಂಸ, ಚಿಂತಕ ಹಾಗೂ ಕನ್ನಡ ಭಾಷಾ ತಜ್ಞ ಪ್ರೊ. ಕೆ.ವಿ....

ತುಮಕೂರು | ವೈದ್ಯಕೀಯ ಶಿಕ್ಷಣಕ್ಕೆ ಜಾಗತಿಕ ಸಹಯೋಗದ ಅಗತ್ಯವಿದೆ: ಡಾ. ಜಿ. ಪರಮೇಶ್ವರ್

 ವಿಶ್ವಮಟ್ಟದಲ್ಲಿ ಭಾರತೀಯ ವೈದ್ಯರಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ...

ತುಮಕೂರು | ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರು ಬದಲಾವಣೆ ಇಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ತುಮಕೂರು ನಗರದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮಹಾನಗರಪಾಲಿಕೆ...