ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರುನಾಡಿನ ಕನ್ನಡಿಗರು ಸಹಿಷ್ಣುತಾ ಮನೋಭಾವ ಹೊಂದಿದ್ದಾರೆ. ಎಲ್ಲ ದೇಶದ, ರಾಜ್ಯದ ಜನರನ್ನು ಒಳಗೊಳ್ಳುವವರಾಗಿದ್ದಾರೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ತಿಳಿಸಿದರು.
ತಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಇವತ್ತಿನ ಕರ್ನಾಟಕಕ್ಕೆ ಸಾಮರಸ್ಯ ಬೇಕು. ಜಾತಿ, ಧರ್ಮ, ಲಿಂಗ ತಾರತಮ್ಯಗಳನ್ನು ಮೀರಿದ ಸಾಮರಸ್ಯದ ಜೀವನದ ಅಗತ್ಯವಿದೆ. ಕನ್ನಡದಲ್ಲಿ ವಿಶ್ವದ ಎಲ್ಲ ಜ್ಞಾನವನ್ನೂ ಸೃಷ್ಟಿಸಬಹುದು. ಕನ್ನಡ ಭಾಷೆ ಅಂತಹ ವೈವಿಧ್ಯತೆ ಹೊಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ ಬಿ.ಎಸ್ ಲತಾ, ಸಹಾಯ ಪ್ರಾಧ್ಯಾಪಕ ಡಾ. ಸಿದ್ದರಾಜು ಕೆ.ಎಸ್, ಡಾ ಮಾರುತಿ ಎನ್ ಎನ್, ಹೇಮಲತಾ.ಜಿ , ಡಾ ಅಶ್ವಥ್.ಕೆ, ಕನ್ಯಾಕುಮಾರಿ, ಲಲಿತಾ ಕೆ.ಆರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಡಾ.ಮಾರುತಿ, ಸಿಟಿಜನ್ ಜರ್ನಲಿಸ್ಟ್