ಬೆಂಗಳೂರಿನ ಹೊರ ವಲಯದಲ್ಲಿರುವ ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ಅ.29ರ ರಾತ್ರಿ ಕಾಣಿಸಿಕೊಂಡಿದ್ದ ಚಿರತೆ, ನಗರಕ್ಕೆ ಬಂದು ಮೂರು ದಿನ ಕಳೆದರೂ ಇನ್ನೂ ಬೋನಿಗೆ ಚಿರತೆ ಬಿದ್ದಿಲ್ಲ. ಇದರಿಂದ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಹೆಚ್.ಎಸ್.ಆರ್ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ.
ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾಗಿದೆ. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಸತತವಾಗಿ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೂ, ಚಿರತೆಯ ಕುರುಹು ಪತ್ತೆಯಾಗಿರಲಿಲ್ಲ.
ಅ.31ರಂದು ಅರಣ್ಯಾಧಿಕಾರಿಗಳು ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಗೆ ಅರವಳಿಕೆ ಮದ್ದನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಅರವಳಿಕೆ ಚುಚ್ಚುಮದ್ದು ನೀಡುವ ಸಮಯದಲ್ಲಿ ವೈದ್ಯ ಕಿರಣ್ ಮೇಲೆ ಚಿರತೆ ದಾಳಿ ಮಾಡಿ ಅವರ ಕುತ್ತಿಗೆಗೆ ಪರಚಿ ಪರಾರಿಯಾಗಿದೆ. ಇದೇ ವೇಳೆ, ಚಿರತೆ ಶಾರ್ಪ್ ಶೂಟರ್ ಧನ್‌ರಾಜ್ ಎಂಬುವವರ ಮೇಲೂ ದಾಳಿ ಮಾಡಿ ಅವರ ಕಾಲು ಮತ್ತು ಭುಜಕ್ಕೆ ಗಾಯಗೊಳಿಸಿದೆ. ಕಾರ್ಯಾಚರಣೆಯಲ್ಲಿದ್ದ ಇನ್ನೊರ್ವ ಬಿಬಿಎಂಪಿ ಸಿಬ್ಬಂದಿ ಮಹೇಶ್ ಎಂಬವರ ಮೇಲೆ ದಾಳಿ ಮಾಡಿ, ಅವರ ಕಾಲಿಗೆ ಗಾಯಗೊಳಿಸಿದೆ.
ಕೂಡಲೇ ಅಂಬ್ಯುಲೆನ್ಸ್ ಮೂಲಕ ವೈದ್ಯ ಕಿರಣ್ ಸೇರಿದಂತೆ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
Our big cat cannot understand why there is so much man and machinery pursuing him in the urban forest! Why can’t he belong here? His fight continued on day four in Kudlu! Footage from last night’s chase! 🐆 #leopard #LeopardOnLoose #Bengaluru #UrbanForestpic.twitter.com/G2ncn5Cc02 https://t.co/1SEaRDDubI
— Citizens Movement, East Bengaluru (@east_bengaluru) November 1, 2023
ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಗಿದೆ. ಆದರೆ, ಅರವಳಿಕೆ ನೀಡಿದ 15 ನಿಮಿಷ ಮಾತ್ರ ಅದರ ಪರಿಣಾಮ ಇರುತ್ತದೆ. ಚಿರತೆ ಕಣ್ಣಿಗೆ ಕಾಣದಂತೆ ತಪ್ಪಿಸಿಕೊಳ್ಳುತ್ತಿದ್ದು, ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಚಿರತೆಗೆ ‘ಹೈಡೋಸ್’ ಇರುವ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ದತೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶದ ಬ್ಯಾಂಕ್‌ಗಳಿಗೆ ನವೆಂಬರ್ ತಿಂಗಳಲ್ಲಿ 15 ದಿನ ರಜೆ; ಯಾಕೆ? ಇಲ್ಲಿದೆ ಮಾಹಿತಿ
ಅ.29ರಂದು ತಡರಾತ್ರಿ ಕೃಷ್ಣಾರೆಡ್ಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ 11 ಗಂಟೆ ವೇಳೆ ಕಾಂಪೌಂಡ್ ಜಿಗಿದು ಚಿರತೆ ಓಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಥರ್ಮಲ್ ಡ್ರೋಣ್‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿತ್ತು. ಸದ್ಯ, ಹುಣಸೂರು ವನ್ಯಜೀವಿ ವಿಭಾಗದಿಂದ ಆಗಮಿಸಿದ್ದ ತಂಡ ಕಾರ್ಯಾಚರಣೆ ನಡೆಸುತ್ತಿದೆ.