ಮಧುಗಿರಿಯಲ್ಲಿ ಲೋಕಾಯುಕ್ತ ಬೇಟೆ : ₹30 ಸಾವಿರ ಲಂಚ ಪಡೆಯುವಾಗ ಆರ್‌ಐ ಬಂಧನ

Date:

 ಪೌತಿ ಖಾತೆ ಮಾಡಿಕೊಡಲು ರೈತನಿಂದ ₹1 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಕಸಬಾ ಕಂದಾಯ ನಿರೀಕ್ಷಕ (ಆರ್‌ಐ) ನಾಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಸ್ವೀಕರಿಸುವಾಗ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

- Advertisement -

ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ರೇಣುಕೇಶ್ ಎಂಬುವವರು ತಮ್ಮ ತಾತನ ಹೆಸರಿನಲ್ಲಿದ್ದ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕೆ ಆರ್‌ಐ ನಾಗೇಶ್ ಅವರು ₹1 ಲಕ್ಷ ಲಂಚ ಕೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

11 ವರ್ಷಗಳ ಬಳಿಕ ಅಮೆರಿಕಕ್ಕೆ ಜಿನ್‌ಪಿಂಗ್‌; ಸ್ವಾಗತಕ್ಕೆ ಖುದ್ದು...

ಬರೋಬ್ಬರಿ 11 ವರ್ಷಗಳ ಬಳಿಕ ಅಮೆರಿಕಕ್ಕೆ ಕಾಲಿಟ್ಟಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಖುದ್ದು ತೆರಳಿ ಸ್ವಾಗತಿಸಿದ ಟ್ರಂಪ್‌, ಶ್ವೇತಭವನದಲ್ಲಿ ಅದ್ದೂರಿ ಸರ್ಕಾರಿ ಔತಣ ಆಯೋಜಿಸಿದ್ದಾರೆ. AI, ಅತ್ಯಾಧುನಿಕ ಚಿಪ್‌ಗಳು, ರೇರ್‌...

ದೆಹಲಿಯಲ್ಲಿ ಮತದಾರರ ಪಟ್ಟಿಯಿಂದ 47 ಲಕ್ಷ ಜನರ ಕೈಬಿಟ್ಟ...

ದೇಶದ ರಾಜಧಾನಿ ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುತ್ತಿರುವ ಅತ್ಯಂತ ಆಘಾತಕಾರಿ ಸತ್ಯವೊಂದು ಇದೀಗ ಬಯಲಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಈ ಗಂಭೀರವಾದ ವಿಷಯವನ್ನು...

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ದೂರುದಾರರ ಪ್ರಕಾರ, ಮೊದಲ ಕಂತಿನಲ್ಲಿ ₹35 ಸಾವಿರ ನೀಡಲಾಗಿತ್ತು. ಆದರೆ, ಪೌತಿ ಖಾತೆ ಪ್ರಕ್ರಿಯೆ ಪೂರ್ಣಗೊಳಿಸದೆ ಉಳಿದ ಹಣಕ್ಕಾಗಿ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ರೇಣುಕೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ಎರಡನೇ ಕಂತಿನ ₹30 ಸಾವಿರ ಹಣವನ್ನು ರೇಣುಕೇಶ್ ಅವರಿಂದ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರ್‌ಐ ನಾಗೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಐಗಳಾದ ರಾಜು, ನಿರ್ಮಲಾದೇವಿ ಹಾಗೂ ಶಾಂತಿನಾಥ್ ಹೊನ್ನೂರು ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಆರ್‌ಐ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆಗೆ ಸ್ಥಳೀಯ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರೈತರಿಂದಲೇ ₹1 ಲಕ್ಷ ಲಂಚ ಕೇಳುವುದು ಅಮಾನವೀಯ. ಹಣ ನೀಡಿದರೆ ಮಾತ್ರ ಸರ್ಕಾರಿ ಕಚೇರಿಗಳಲ್ಲಿ ಕೆಲಸವಾಗುತ್ತದೆ ಎಂಬ ಆರೋಪಗಳಿಗೆ ಇಂತಹ ಪ್ರಕರಣಗಳು ಪ್ರಶ್ನೆ ಎತ್ತುತ್ತವೆ” ಎಂದು ರಫೀಕ್ ಪಾಷ ಹೇಳಿದ್ದಾರೆ 

“ಪೌತಿ ಖಾತೆ ಸೇರಿದಂತೆ ರೈತರಿಗೆ ಸಂಬಂಧಿಸಿದ ಕಂದಾಯ ಸೇವೆಗಳನ್ನು ಸರಳವಾಗಿ ಒದಗಿಸಬೇಕಿದೆ. ಲಂಚದ ಆರೋಪದಲ್ಲಿ ಅಧಿಕಾರಿ ಲೋಕಾಯುಕ್ತ ಬಲೆಗೆ ಬೀಳಿರುವುದು ಗಂಭೀರ ವಿಷಯ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹೇಶ್ ಮಧುಗಿರಿ ಒತ್ತಾಯಿಸಿದ್ದಾರೆ

“ಒಂದೇ ಸ್ಥಳದಲ್ಲಿ ವರ್ಷಗಟ್ಟಲೆ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ನಿರಂತರವಾಗಿ ಆರೋಪಗಳು ಕೇಳಿಬರುತ್ತಿವೆ. ಕಂದಾಯ ದಾಖಲೆ, ರಾಜಕಾಲುವೆ, ಕೆರೆ-ಕಟ್ಟೆ ಹಾಗೂ ಸರ್ಕಾರಿ ಜಮೀನುಗಳ ವಿಚಾರಗಳಲ್ಲಿ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಆಡಳಿತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಲೋಕಾಯುಕ್ತ ದಾಳಿಯಿಂದ ಮಧುಗಿರಿ ತಾಲೂಕು ಕಚೇರಿ ವಲಯದಲ್ಲಿ ಚರ್ಚೆ ಜೋರಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಪಾರಂಪರಿಕ ಮೌಲ್ಯಗಳು ಜೀವನದ ಆದರ್ಶಗಳು : ಡಿ. ಕೃಷ್ಣ

 ಐತಿಹಾಸಿಕ ಸ್ಮಾರಕಗಳು ಹಾಗೂ ಪಾರಂಪರಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸುವ ಜವಾಬ್ದಾರಿ...

ತುರುವೇಕೆರೆ | ಪರಂಪರೆ ಪೂರ್ವಜರ ಉಡುಗೊರೆಯಲ್ಲ, ಮುಂದಿನ ಪೀಳಿಗೆಗೆ ನೀಡುವ ಸಾಲ : ಡಾ. ಮಹೇಶ್ ಕುಮಾರ್

ಪರಂಪರೆ ಎಂಬುದು ಪೂರ್ವಜರಿಂದ ಪಡೆದ ಉಡುಗೊರೆಯಲ್ಲ; ಮುಂದಿನ ಪೀಳಿಗೆಗೆ ಉಳಿಸಿ ನೀಡಲು...

ಮಧುಗಿರಿ | ಸ್ವಾವಲಂಬನೆ, ಆತ್ಮವಿಶ್ವಾಸದೊಂದಿಗೆ ಪದವಿ ಪಡೆಯಿರಿ: ಡಾ. ಎಂ. ಗೋವಿಂದರಾಯ

ಪದವಿ ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗಿರದೆ, ಸ್ವಾವಲಂಬನೆ, ವೃತ್ತಿಪರತೆ ಹಾಗೂ...

ತಿಪಟೂರು | ಬೋಧಕ ವರ್ಗದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಶಶಿಕುಮಾರ್

 ಕಾಲೇಜಿನ ಗ್ರಂಥಾಲಯದಲ್ಲಿರುವ ಸುಮಾರು 50 ಸಾವಿರ ಪುಸ್ತಕಗಳ ಜ್ಞಾನ ಸಂಪನ್ಮೂಲ ಹಾಗೂ...