ತುಮಕೂರು | ಯುವಜನರ ಹಕ್ಕುಗಳಿಗಾಗಿ ಯುವ ಆಯೋಗ ಅಗತ್ಯ: ಕಿರು ಅಧ್ಯಯನ

Date:

ಕರ್ನಾಟಕದಲ್ಲಿ ಯುವಜನರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಸ್ವತಂತ್ರ ಹಾಗೂ ಕಾನೂನುಬದ್ಧ ಯುವ ಆಯೋಗ ರಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯ 17 ಜಿಲ್ಲೆಗಳ 107 ಯುವಜನರ ಅಭಿಪ್ರಾಯ ಆಧರಿಸಿದ ಕಿರು ಅಧ್ಯಯನದಲ್ಲಿ ವ್ಯಕ್ತವಾಗಿದೆ.

- Advertisement -

ಸಾಮಾಜಿಕ ಕಾರ್ಯಕರ್ತ ಜಿ.ಎಸ್. ಶರಣು ಅವರು ನಡೆಸಿದ ಅಧ್ಯಯನದಲ್ಲಿ 15ರಿಂದ 35 ವರ್ಷದೊಳಗಿನ ಯುವಜನರ ಪ್ರಮುಖ ಸಮಸ್ಯೆಗಳು ಹಾಗೂ ಯುವ ಆಯೋಗದ ಕುರಿತ ಅವರ ನಿರೀಕ್ಷೆಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಸುಮಾರು 2.1 ಕೋಟಿಗೂ ಹೆಚ್ಚು ಯುವಜನರಿದ್ದು, ಉದ್ಯೋಗ, ಕೌಶಲ್ಯಾಭಿವೃದ್ಧಿ, ಶಿಕ್ಷಣ, ಮಾನಸಿಕ ಆರೋಗ್ಯ, ಉದ್ಯಮಶೀಲತೆ, ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುವಜನರು ಸವಾಲುಗಳನ್ನು ಎದುರಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ.88ರಷ್ಟು ಯುವಜನರು ಕರ್ನಾಟಕದಲ್ಲಿ ಯುವ ಆಯೋಗ ಸ್ಥಾಪನೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೇ.91ರಷ್ಟು ಮಂದಿ ಆಯೋಗಕ್ಕೆ ಕಾನೂನಾತ್ಮಕ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದರಿಂದ ಯುವಜನರು ಕೇವಲ ಸಲಹೆ ನೀಡುವ ಸಂಸ್ಥೆಯ ಬದಲಾಗಿ, ತಮ್ಮ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಸ್ವಾಯತ್ತ ಮತ್ತು ಅಧಿಕಾರಯುತ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಅಧ್ಯಯನದ ಪ್ರಕಾರ ಯುವಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಉದ್ಯೋಗದ ಕೊರತೆ ಪ್ರಮುಖವಾಗಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣದ ಕೊರತೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸರ್ಕಾರಿ ಯೋಜನೆಗಳ ಕುರಿತು ಸಮರ್ಪಕ ಮಾಹಿತಿ ಇಲ್ಲದಿರುವುದು ಹಾಗೂ ಉದ್ಯಮ ಆರಂಭಿಸಲು ಅಗತ್ಯವಾದ ಆರ್ಥಿಕ ನೆರವಿನ ಕೊರತೆ ಪ್ರಮುಖ ಸವಾಲುಗಳಾಗಿವೆ.

ಯುವ ಆಯೋಗದಿಂದ ಯಾವ ಕ್ಷೇತ್ರಗಳಿಗೆ ಆದ್ಯತೆ?

ಯುವ ಆಯೋಗ ರಚನೆಯಾದರೆ ಮೊದಲ ಆದ್ಯತೆ ನೀಡಬೇಕಾದ ಕ್ಷೇತ್ರಗಳ ಬಗ್ಗೆಯೂ ಯುವಜನರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವ ಭತ್ಯೆ, ದೂರು ಪರಿಹಾರ ವ್ಯವಸ್ಥೆ, ಗ್ರಾಮೀಣ ಯುವಜನರ ಸಬಲೀಕರಣ ಹಾಗೂ ಯುವ ನಾಯಕತ್ವ ಅಭಿವೃದ್ಧಿ ಪ್ರಮುಖವಾಗಿ ಹೊರಹೊಮ್ಮಿವೆ.

ಯುವಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾತ್ರವಲ್ಲದೆ, ಆಡಳಿತ ಮತ್ತು ನೀತಿ ರೂಪಿಸುವ ಪ್ರಕ್ರಿಯೆಯಲ್ಲೂ ತಮ್ಮ ಪಾಲ್ಗೊಳ್ಳುವಿಕೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಅಧ್ಯಯನದ ಫಲಿತಾಂಶಗಳು ಸೂಚಿಸುತ್ತವೆ.

ಯುವಜನರ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ರಾಜ್ಯದಲ್ಲಿ ಪರಿಣಾಮಕಾರಿ ಯುವಜನ ನೀತಿ ಅಗತ್ಯವಿದ್ದು, ಅದನ್ನು ಅನುಷ್ಠಾನಗೊಳಿಸಲು ಕಾನೂನುಬದ್ಧ ಯುವ ಆಯೋಗ ಪ್ರಮುಖ ಪಾತ್ರ ವಹಿಸಬಹುದು ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ.

ದೇಶದ ಹಲವು ರಾಜ್ಯಗಳಲ್ಲಿ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿಯೂ ಯುವಜನರ ಹಕ್ಕುಗಳು, ಅವಕಾಶಗಳು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಸ್ವತಂತ್ರ ವ್ಯವಸ್ಥೆ ರೂಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಯುವಜನರ ಅಭಿಪ್ರಾಯ, ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ದಾಖಲಿಸಿರುವ ಈ ಕಿರು ಅಧ್ಯಯನವು ರಾಜ್ಯದ ಯುವಜನ ನೀತಿ ರೂಪಿಸುವ ಸಂದರ್ಭದಲ್ಲಿ ಪ್ರಮುಖ ಉಲ್ಲೇಖವಾಗಲಿದೆ. ಯುವಜನರ ಧ್ವನಿಗೆ ಆಡಳಿತ ವ್ಯವಸ್ಥೆಯಲ್ಲಿ ಸೂಕ್ತ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಯುವ ಆಯೋಗದ ಸ್ಥಾಪನೆ ಸಮಯೋಚಿತ ಹೆಜ್ಜೆಯಾಗಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುರುವೇಕೆರೆ | ಪರಂಪರೆ ಪೂರ್ವಜರ ಉಡುಗೊರೆಯಲ್ಲ, ಮುಂದಿನ ಪೀಳಿಗೆಗೆ ನೀಡುವ ಸಾಲ : ಡಾ. ಮಹೇಶ್ ಕುಮಾರ್

ಪರಂಪರೆ ಎಂಬುದು ಪೂರ್ವಜರಿಂದ ಪಡೆದ ಉಡುಗೊರೆಯಲ್ಲ; ಮುಂದಿನ ಪೀಳಿಗೆಗೆ ಉಳಿಸಿ ನೀಡಲು...

ಮಧುಗಿರಿ | ಸ್ವಾವಲಂಬನೆ, ಆತ್ಮವಿಶ್ವಾಸದೊಂದಿಗೆ ಪದವಿ ಪಡೆಯಿರಿ: ಡಾ. ಎಂ. ಗೋವಿಂದರಾಯ

ಪದವಿ ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗಿರದೆ, ಸ್ವಾವಲಂಬನೆ, ವೃತ್ತಿಪರತೆ ಹಾಗೂ...

ತಿಪಟೂರು | ಬೋಧಕ ವರ್ಗದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ: ಡಾ. ಶಶಿಕುಮಾರ್

 ಕಾಲೇಜಿನ ಗ್ರಂಥಾಲಯದಲ್ಲಿರುವ ಸುಮಾರು 50 ಸಾವಿರ ಪುಸ್ತಕಗಳ ಜ್ಞಾನ ಸಂಪನ್ಮೂಲ ಹಾಗೂ...

ತುಮಕೂರು | ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಆಲೋಚನೆ, ಆವಿಷ್ಕಾರದ ಮನೋಭಾವ ಬೆಳೆಸಿಕೊಳ್ಳಲಿ : ಡಾ.ಜಿ. ಪರಮೇಶ್ವರ

 ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರಂತರ...