ತುಮಕೂರು | ಇಂಪ್ರೆಶನ್ 2026 ಮಾಧ್ಯಮ ಹಬ್ಬ:ಮೈಸೂರು – ಧಾರವಾಡ ವಿವಿಗಳಿಗೆ ಚಾಂಪಿಯನ್ ಶಿಪ್

Date:

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮ ಹಬ್ಬ ಇಂಪ್ರೆಶನ್ 2026 ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಪ್ರತಿಷ್ಠಿತ ಮಾಧ್ಯಮ ಹಬ್ಬದ ಸಮಗ್ರ ಚಾಂಪಿಯನ್ ಶಿಪ್ ಅನ್ನು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಜಂಟಿಯಾಗಿ ತಮ್ಮ ಮುಡಿಗೇರಿಸಿಕೊಂಡಿವೆ. ರನ್ನರ್ ಆಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಶ್ವವಿದ್ಯಾನಿಲಯ ಹೊರಹೋಮ್ಮಿದೆ. 

- Advertisement -

ವಿಜೇತ ತಂಡಗಳಿಗೆ ಚಾಂಪಿಯನ್ ಟ್ರೋಫಿ ವಿತರಿಸಿ ಮಾತನಾಡಿದ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್‌ನ ಇನ್ಫೋಸಿಸ್ ಸ್ಪಿಂಗ್‌ಬೋರ್ಡ್ ಇಂಡಿಯಾ & ಸರ್ಕಾರಿ ಪಾಲುದಾರಿಕೆಗಳ ಸಹ ಉಪಾಧ್ಯಕ್ಷ ಹಾಗೂ ಮುಖ್ಯಸ್ಥ ಸಂತೋಷ್ ಅನಂತಪುರ,  ನಾವು ನಮ್ಮನ್ನು ಈ ಜಗತ್ತಿಗೆ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದ್ದೇವೆ ಎಂಬುದು ಅತ್ಯಂತ ಪ್ರಮುಖವಾದದ್ದು ಎಂದು ನುಡಿದ ಅವರು, ಮಾಧ್ಯಮ ಕ್ಷೇತ್ರಕ್ಕೆ ಸಂವಹನವೇ ಜೀವಾಳ ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇಂದಿನ ಬದಲಾದ ಚಿಕ್ಕ ಜಗತ್ತಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ಕೇವಲ ಕೌಶಲ್ಯವಿದ್ದರೆ ಸಾಲದು, ಅದರ ಜೊತೆಗೆ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿಯಬೇಕು ಮತ್ತು ವ್ಯವಹಾರದ ದೃಷ್ಟಿಕೋನದತ್ತಲೂ ನಿಮ್ಮ ಚಿತ್ತವಿರಬೇಕು ಎಂದರು.

1003323110

ತುಮಕೂರು ವಿವಿ ಕ್ಯಾಂಪಸ್ ಪತ್ರಿಕೆಯಾದ ಕಲ್ಪತರು ಟೈಮ್ಸ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಚಲನ ಶಕ್ತಿ, ಕಲ್ಪನಾ ಶಕ್ತಿ ಹಾಗೂ ಅಂತಃಕರಣ ಅತ್ಯಂತ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾವುದೇ ಕಾರಣಕ್ಕೂ ಹಿಂಜರಿಕೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು ಎಂದರು. 

ಕೇವಲ ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮವನ್ನು ಮಾಡಬೇಡಿ, ಪತ್ರಿಕೆಗಳಲ್ಲಿ ನಿಷ್ಠೆ ಮತ್ತು ಕ್ರಿಯಾಶೀಲತೆ ತುಂಬಾ ಮುಖ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. ಪ್ರಸ್ತುತ ಮಾಧ್ಯಮ ರಂಗದಲ್ಲಿ ಮೌಲ್ಯಗಳು ಕಳೆದುಹೋಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮಾಧ್ಯಮವನ್ನು ಉಳಿಸಿ ಬೆಳೆಸುವ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ ಎಂದರು.

 ವಿದ್ಯಾರ್ಥಿಗಳು ಕೇವಲ ಭ್ರಮೆಯಿಂದ ಈ ಕ್ಷೇತ್ರಕ್ಕೆ ಬರದೆ, ನಿಜವಾದ ಆಸಕ್ತಿ ಇದ್ದರೆ ಮಾತ್ರ ಮಾಧ್ಯಮದತ್ತ ಹೆಜ್ಜೆ ಇಡಬೇಕು ಎಂದರು. 

ಪರೀಕ್ಷಾ ಕುಲ ಸಚಿವರಾದ ಪ್ರೊ. ಹೆಚ್. ಎಸ್. ಮೋಹನ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.¥. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಷ್ಣುಧರನ್ ನಿರೂಪಿಸಿದರೆ, ಡಾ. ಪೃಥ್ವಿರಾಜ್ ಟಿ. ವಂದಿಸಿದರು.

ಮೈಸೂರು, ಧಾರವಾಡ, ಹಾವೇರಿ, ರಾಯಚೂರು, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಬೆಂಗಳೂರು, ತುಮಕೂರು – ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಮಾಧ್ಯಮ ಹಬ್ಬದಲ್ಲಿ ಭಾಗವಹಿಸಿ ಅರ್ಥಪೂರ್ಣಗೊಳಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದಾಖಲೆ ತೋರಿಸಿ, ಜಮೀನನ್ನು ನಿಮ್ಮ ಕುಟುಂಬಕ್ಕೇ ಬರೆದುಕೊಡ್ತೀನಿ!’: ಹೆಚ್‌ಡಿಕೆಗೆ ಬಾಲಕೃಷ್ಣ ಸವಾಲು

"ನನ್ನ ಹೆಸರಿನಲ್ಲಿ ನೈಸ್ ರಸ್ತೆ ಯೋಜನಾ ವ್ಯಾಪ್ತಿಯಲ್ಲಿ ಜಮೀನಿದ್ದರೆ ದಾಖಲೆ ಬಿಡುಗಡೆ...

ದೇಹದ ಅಪಹಾಸ್ಯ, ನಿಂದನೆ ಮಾತ್ರವೇ ಮಹಿಳೆಯ ಮರ್ಯಾದೆ ಭಂಗದ ಅಪರಾಧವಲ್ಲ: ಹೈಕೋರ್ಟ್

ಕೇವಲ ದೇಹದ ಅಪಹಾಸ್ಯ (ಬಾಡಿ ಶೇಮಿಂಗ್‌) ಮತ್ತು ಅವಾಚ್ಯವಾಗಿ ನಿಂದಿಸುವುದು ಐಪಿಸಿ...

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ತುಮಕೂರು | ಅ.5ರಿಂದ ಮೂರು ದಿನಗಳ ಮಾಧ್ಯಮ ಕಾರ್ಯಾಗಾರ : ‘ರೇಡಿಯೋ ಬರವಣಿಗೆಯಿಂದ ಛಾಯಾಗ್ರಹಣದವರೆಗೆ’ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠ

 ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮ ಲೋಕದ ಪ್ರಾಯೋಗಿಕ ಅನುಭವ ಕಟ್ಟಿಕೊಡಲು ಶ್ರೀ ಸಿದ್ಧಾರ್ಥ...