ತುಮಕೂರು | ಕೆ.ಬಿ.ನೇತ್ರಾವತಿ ಅವರ ‘ಬ್ರೋಕನ್ ಫ್ಯಾಮಿಲಿ’ ಕೃತಿ ಜನಾರ್ಪಣೆ

Date:

ಲೇಖಕಿ ಕೆ.ಬಿ.ನೇತ್ರಾವತಿ ಅವರು ಅನುಭವಿಸಿದ ನಂತರ ಬರೆದಿದ್ದಾರೆ. ಮುಂದಿನ ಪೀಳಿಗೆ ಅನುಭವಿಸಬೇಕಾಗಿರುವ ಸನ್ನಿವೇಶದೊಳಗೆ ನಾವು ಸಂಕೀರ್ಣ ಸ್ಥಿತಿಯಲ್ಲಿದ್ದೇವೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ತಿಳಿಸಿದರು.

- Advertisement -

ಬೆವರ ಹನಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಸಹಯೋಗದಲ್ಲಿ ಭಾನುವಾರ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿರುವ ಐಎಂಎ ಸಭಾಂಗಣದಲ್ಲಿ ಬೆವರಹನಿ ಪ್ರಕಾಶನ ಹೊರತಂದಿರುವ ಲೇಖಕಿ ಕೆ.ಬಿ.ನೇತ್ರಾವತಿ ಅವರ ಬ್ರೋಕನ್ ಫ್ಯಾಮಿಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ವಿಧಾನ ಪರಿಷತ್‌ನಲ್ಲಿ ಬಸವರಾಜ ಹೊರಟ್ಟಿಯವರು ನಡೆದುಕೊಂಡ ರೀತಿ, ಆಡಿದಂತಹ ಮಾತುಗಳು ಸರಿಯಾಗಿರಲಿಲ್ಲ. ಅರಸಿಕೆರೆ ಶಾಸಕರೊಬ್ಬರು ಆಡಿದ ಮಾತುಗಳು ಉಚಿತವಾಗಿರಲಿಲ್ಲ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಗೌರವವಿತ್ತು. ಅವರ ಹಿನ್ನೆಲೆ ಏನೇ ಇದ್ದರೂ, ಕೆಟ್ಟ ವ್ಯಕ್ತಿತ್ವ ಇದ್ದರೂ ಕೂಡ ಬಹಿರಂಗವಾಗಿ ಹೇಳದೇನೆ ಅವರಿಗೆ ತೋರಿಕೆಗಾದರೂ ಗೌರವ ಕೊಡುವ ಪರಿಸ್ಥಿತಿ ಇತ್ತು. ಆದರೆ ಇವತ್ತು ಅವಹೇಳನ ಮಾಡುವುದನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿರುವುದನ್ನೆಲ್ಲ ನೋಡಿದರೆ ಖಂಡನ ನಿರ್ಣಯ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸೃಜನಶೀಲತೆಯನ್ನು ದಮನಗೊಳಿಸುವ ಯತ್ನ ನಡೆಯುತ್ತಿದೆ. ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂದು ನಮ್ಮನ್ನು ನಿಯಂತ್ರಿಸುವಂತಹ ಶಕ್ತಿ ಕೇಂದ್ರದಿಂದ ಹಿಡಿದುಕೊಂಡು ಎಲ್ಲಾ ಕಡೆ ಹರಡುತ್ತಿದೆ. ಇದರಿಂದ ನಾಗರಿಕ ಶಕ್ತಿ ಹುದುಗಿ ಹೋಗಿರುವುದನ್ನು ನೋಡುತ್ತಿದ್ದೇವೆ. ಇದನ್ನು ಖಂಡಿಸದೆ ನಮ್ಮಷ್ಟಕ್ಕೆ ನಾವೇ ಬೈದುಕೊಂಡು ಸುಮ್ಮನಾಗುವಂತಹ ಮನಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳಿದರು.

ನಮ್ಮ ನಾಗರಿಕ ಹಕ್ಕನ್ನು ಮರೆತಿರುವಂತಹ ಈ ಕಾಲಘಟ್ಟದಲ್ಲಿ ಬ್ರೋಕನ್ ಫ್ಯಾಮಿಲಿಯಂತಹ ಪುಸ್ತಕಗಳ ಓದು ತಮ್ಮನ್ನು ಎಚ್ಚರಿಸಬೇಕು ಮತ್ತು ಪ್ರೇರೇಪಿಸಬೇಕು. ಬ್ರೋಕನ್ ಫ್ಯಾಮಿಲಿ ಕರ್ತೃ ಬಹಳ ಧೈರ್ಯವಾಗಿ ಮತ್ತು ಮುಕ್ತವಾಗಿ ಎಲ್ಲವನ್ನೂ ಬರೆದಿದ್ದಾರೆ. ಆ ಕಾಲಘಟ್ಟದಲ್ಲಿ ಓದುತ್ತಿದ್ದ ಸಂದರ್ಭದಲ್ಲಿನ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿಯಲ್ಲಿ ಬರುವ ಸನ್ನಿವೇಶಗಳು ಎಲ್ಲಾ ಜಾತಿಯಲ್ಲಿ ಕಾಣಬಹುದು. ಆದರೆ ಅದನ್ನೇ ಶೋಷಣೆಯನ್ನಾಗಿ ಮಾಡಿಕೊಳ್ಳುವುದನ್ನು ಅವರ ಸಮುದಾಯದಲ್ಲಿ ಕಾಣಬಹುದು. ಇದು ಮಾನಸಿಕತೆಯನ್ನು ಕುಗ್ಗಿಸುವ ರೀತಿ ಇದೆ. ಆದರೆ ಲೇಖಕಿ ಅದನ್ನು ಮೀರುವ ಶಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಹೋರಾಟಗಾರ್ತಿ ಅನುರಾಧ ಕೆ.ದೊರೈರಾಜ್ ಮಾತನಾಡಿ, ನಾವು ಚಿಕ್ಕನಾಯಕನಹಳ್ಳಿಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ದೊರೈರಾಜ್ ಪ್ರಿನ್ಸಿಪಾಲರಾಗಿದ್ದರು. ಆಗ ನಾವಿದ್ದ ಮನೆಗೆ ನೇತ್ರಾವತಿ ಬರುತ್ತಿದ್ದರು. ಒಂದು ಸಾರಿ ನೇತ್ರಾ ಮನೆಯಲ್ಲಿ ದೊಡ್ಡ ಗಲಾಟೆ ಆಗಿತ್ತು ಅನಿಸುತ್ತದೆ. ಮನೆಯಲ್ಲಿ ನೇತ್ರಾವತಿ ಕೈ ಕುಯ್ಯಿಕೊಂಡು ಬೆಡ್ ಮೇಲೆ ಮಲಗಿದ್ದಳು. ರಕ್ತ ನೆಲದ ಮೇಲೆ ಬಿದ್ದು ಹೆಪ್ಪುಗಟ್ಟಿತ್ತು. ಕೂಡಲೇ ನೇತ್ರಾಳನ್ನು ಚಿಕ್ಕನಾಯಕನಹಳ್ಳಿ ಕರೆತಂದಿದ್ದರು. ಅಷ್ಟೆಲ್ಲ ಆಗಿದ್ದರೂ ಏನಿಲ್ಲ ಬಿಡಕ್ಕ ಅಂದಿದ್ದು ಈಗಲೂ ನೆನಪಿದೆ. ಈಗಲೂ ಹಾಗೆಯೇ ಇದ್ದಾರೆ. ನೇತ್ರಾ ಗಟ್ಟಿಗಿತ್ತಿ. ಮುಂದಿನ ದಿನಗಳಲ್ಲಿ ನೆಮ್ಮದಿಯಾಗಿ ಇರಲಿ. ನೇತ್ರಾರಂಥ ಧೈರ್ಯವಂತ ಹೆಣ್ಣು ಮಕ್ಕಳು ಎಲ್ಲರ ಮನೆಯಲ್ಲಿ ಹುಟ್ಟಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಶಾಖೆಯ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು ಮಾತನಾಡಿ, ಬ್ರೋಕನ್ ಫ್ಯಾಮಿಲಿ ಕೃತಿ ತುಮಕೂರು ಭಾಗದಲ್ಲಿ ಬಂದಿರುವಂತಹ ಮೊಟ್ಟಮೊದಲ ಮಹಿಳಾ, ದಲಿತ ಆತ್ಮಕಥೆ ಇದಾಗಿದೆ. ಹೀಗಾಗಿ ಈ ಕೃತಿಗೆ ಬಹಳ ಮಹತ್ವವಿದೆ ಮತ್ತು ಈ ಕಾರಣಕ್ಕಾಗಿ ಲೇಖಕಿಯನ್ನು ಅಭಿನಂದಿಸುತ್ತೇನೆ ಎಂದರು.

ಭಾರತ ದೇಶದಲ್ಲಿ ಬಹಳಷ್ಟು ಜಾತಿಗಳು, ಸಮುದಾಯಗಳು, ಸಂಸ್ಕೃತಿಗಳು ಇರುವಂತಹ ಈ ನೆಲದಲ್ಲಿ ಒಂದೇ ರೀತಿಯಾದ ಅನುಭವಗಳು ಎಲ್ಲಾ ಜಾತಿ ಹೆಣ್ಣು ಮಕ್ಕಳದ್ದಾಗಿದೆ. ಇಲ್ಲಿ ಬೇರೆ ಬೇರೆ ಜಾತಿ, ಸಮುದಾಯದ ಅನುಭವ, ಸಂಕಟಗಳು ಬೇರೆ ಬೇರೆ ಇದ್ದಾಗ ಅದನ್ನು ನಾವು ಅದೇ ರೀತಿಯಲ್ಲಿ ಹೇಳಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಾಗ ಅವರೇನೋ ಬೇರೆ ಯೋಚನೆ ಮಾಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ನೇತ್ರಾವತಿ ಮಾಡಿರುವುದು ಇದನ್ನೇ ಎಂದು ಹೇಳಿದರು.

ಲೇಖಕಿ ಕೆ.ಬಿ.ನೇತ್ರಾವತಿ ಮಾತನಾಡಿದರು. ಹೆಸರಾಂತ ಲೇಖಕಿ, ವಿಮರ್ಶಕಿ ದಯಾ ಗಂಗನಘಟ್ಟ ಅವರ ಭಾಷಣವನ್ನು ಚೈತ್ರಾ ಓದಿದರು. ಬೆವರ ಹನಿ ಪ್ರಕಾಶನದ ಪ್ರಕಾಶಕ ಕುಚ್ಚಂಗಿ ಪ್ರಸನ್ನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮರಿಯಂಬಿ ನಿರೂಪಿಸಿ, ಗಂಗಲಕ್ಷ್ಮಿ ವಂದಿಸಿದರು.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ

ಮಧುಗಿರಿ ತಾಲ್ಲೂಕಿನ ಕಸಾಪುರ ಗ್ರಾಮದ ದಲಿತ ಯುವಕ ಸಿಂಹಾದ್ರಿ ಹತ್ಯೆಯನ್ನು ಖಂಡಿಸಿರುವ...

ತುಮಕೂರು | ಹೊಸ ಪಿಎಫ್ ನೀತಿಯ ವಿರುದ್ಧ ಗಾರ್ಮೆಂಟ್ಸ್ ಕಾರ್ಮಿಕರ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರದ ಹೊಸ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿನ ಕಾರ್ಮಿಕ ವಿರೋಧಿ...

ಗುಬ್ಬಿ | ಬರಗಾಲ ಕಾಮಗಾರಿ ಆರಂಭಕ್ಕೆ ಒತ್ತಾಯ: ಸೆ.28ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತಸಂಘ ಪ್ರತಿಭಟನೆ

ಬರಪೀಡಿತ ಪ್ರದೇಶಗಳನ್ನು ಘೋಷಿಸಿದ್ದರೂ ಸರ್ಕಾರ ಈವರೆಗೆ ಯಾವುದೇ ಬರಗಾಲ ಪರಿಹಾರ ಕಾಮಗಾರಿಗಳನ್ನು...