ತುರುವೇಕೆರೆ | ಚಿರತೆ ದಾಳಿ : ಕುಟುಂಬದವರಿಗೆ ಒಂದು ಲಕ್ಷ ನೀಡಿದ ದೊಡ್ಡಾಘಟ್ಟ ಚಂದ್ರೇಶ್‌

Date:

 ಚಿರತೆ ದಾಳಿಯಿಂದ ಮೃತಪಟ್ಟ ಅರೇಮಲ್ಲೇನಹಳ್ಳಿಯ ಸುಜಾಳ ರವರ ಕುಟುಂಬಕ್ಕೆ ರಾಜ್ಯ ಯುವ ಜೆಡಿಎಸ್‌ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್‌ ಒಂದು ಲಕ್ಷ ರೂಗಳ ನೆರವು ನೀಡಿದ್ದಾರೆ.

- Advertisement -

 ಮೃತಪಟ್ಟ ಸುಜಾತಾರ ಮನೆಗೆ ಧಾವಿಸಿ ಸಾಂತ್ವನ ಹೇಳಿದ ಅವರು ತಾಲೂಕಿನಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಅರೇಮಲ್ಲೆನಹಳ್ಳಿಯಲ್ಲಿ ಆಗಿರುವ ಪ್ರಾಣ ಹಾನಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರ್ನಾಲ್ಕು ಬಾರಿ ಚಿರತೆ ಕಾಟದ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಈ ಅನಾಹುತ ಸಂಭವಿಸಿದೆ. ಇದಕ್ಕೆ ಅರಣ್ಯ ಇಲಾಖೆಯೇ ಜವಾಬ್ದಾರಿ ಹೊರಬೇಕು ಎಂದು ದೂರಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

 ಸುಜಾತಾ ರವರು ಬಲಿಯಾದ ನಂತರ ಎಚ್ಚೆತ್ತು ಕೊಂಡಿರುವ ಅರಣ್ಯ ಇಲಾಖೆ ಮೊದಲೇ ಜಾಗೃತರಾಗಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ. ಈಗ ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಇದು ಸ್ವಾಗತಾರ್ಹವೇ . ಆದರೂ ಸಹ ಇನ್ನೂ ಮೂರ್ನಾಲ್ಕು ಚಿರತೆಗಳು ಇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯವರು ಹೆಚ್ಚು ಬೋನುಗಳನ್ನು ಇಟ್ಟು ಚಿರತೆಗಳನ್ನು ಸೆರೆಹಿಡಿಯಬೇಕೆಂದು ದೊಡ್ಡಾಘಟ್ಟ ಚಂದ್ರೇಶ್‌ ಆಗ್ರಹಿಸಿದ್ದಾರೆ. 

ಸದ್ಯ ಸರ್ಕಾರದಿಂದ 20 ಲಕ್ಷ ಪರಿಹಾರ ಘೋಷಣೆಯಾಗಿದೆ. ಇದರಲ್ಲಿ 5 ಲಕ್ಷದ ಚೆಕ್‌ ನೀಡಲಾಗಿದೆ. ಉಳಿದ 15 ಲಕ್ಷದ ಪರಿಹಾರವನ್ನು ತಡಮಾಡದೇ ವಿತರಿಸಬೇಕು. ಸುಜಾತಾರ ಕುಟುಂಬ ಅತ್ಯಂತ ಕಡುಬಡತನದಲ್ಲಿದೆ. ಅಲ್ಲದೇ ಇಬ್ಬರು ಮಕ್ಕಳು ಇದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

 ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಬಿ.ಜಗದೀಶ್‌, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ, ಪಿ ಎಲ್‌ ಡಿ ಬ್ಯಾಂಕ್‌ ನಿರ್ದೇಶಕ ಜಗದೀಶ್‌, ಮಾಜಿ ಅಧ್ಯಕ್ಷ ಹೇಮಚಂದ್ರು, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ಲಕ್ಷ್ಮಣ ಗೌಡ, ರವಿಗೌಡ ಸೇರಿದಂತೆ ಹಲವರು ಇದ್ದರು. 

ವರದಿ – ಎಸ್ ನಾಗಭೂಷಣ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದೇವರು ಬಂದಂತೆ ನಟಿಸಿ ದಲಿತ ನವದಂಪತಿಗೆ ಅವಮಾನ; ಆರೋಪಿ ಬಂಧನ

ದಲಿತ ಮುಖ್ಯಮಂತ್ರಿ ಕನಸನ್ನು ಹೊತ್ತಿರುವ ಡಾ. ಜಿ. ಪರಮೇಶ್ವರ್ ಅವರ ಜಿಲ್ಲೆಯಲ್ಲೇ...

ತುರುವೇಕೆರೆ ಪಟ್ಟಣದಲ್ಲಿ ಕಾಣಿಸಿಕೊಂಡ ಚಿರತೆ : ಮನೆ ಮಾಡಿದ ಆತಂಕ

 ತುರುವೇಕೆರೆ  ತಾಲೂಕಿನಲ್ಲಿ ಚಿರತೆ ಕಾಟ ಅತಿಯಾಗಿದೆ. ಗುರುವಾರ ರಾತ್ರಿ ಪಟ್ಟಣದ ಎಪಿಎಂಸಿ...

ತುರುವೇಕೆರೆ | ಹೆಚ್ಚಿದ ಚಿರತೆ ಕಾಟ : ಭಯಭೀತರಾಗಿರುವ ಜನರು

ತುರುವೇಕೆರೆ ತಾಲೂಕಿನ ವಿವಿಧೆಡೆ ಚಿರತೆಯ ಕಾಟ ಅತಿಯಾಗಿದೆ. ಚಿರತೆ, ಕುರಿಗಳು ಮತ್ತು...

ತುರುವೇಕೆರೆ | ನೀರಗುಂದ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಅಲ್ಲಪ್ಪ ಒತ್ತಾಯ

ತುರುವೇಕೆರೆ ತಾಲೂಕಿನ ನೀರಗುಂದ ಗ್ರಾಮದಲ್ಲಿ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು...