ತುರುವೇಕೆರೆ | ಹಿಂಜರಿಯದೇ ಹೊಲೆಯ, ಮಾದಿಗ ಎಂದು ಸಮೀಕ್ಷೆ ವೇಳೆ ಹೇಳಿ : ನೆಮ್ಮದಿಗ್ರಾಮ ಮೂರ್ತಿ

Date:

 ಒಳ ಮೀಸಲಾತಿ ನೀಡುವಲ್ಲಿ ಉದ್ಭವವಾಗಿರುವ ಅನುಮಾನವನ್ನು ಪರಿಹರಿಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರಾಜ್ಯದಲ್ಲಿರುವ ಪ್ರತಿ ದಲಿತ ಸಮುದಾಯದ ಮನೆಗಳಿಗೆ ತೆರಳಿ ಜಾತಿ ಸಮೀಕ್ಷೆ ಮಾಡಲಿದೆ. ಆ ವೇಳೆ ದಲಿತ ಸಮುದಾಯಕ್ಕೆ ಸೇರಿರುವವರು ತಮ್ಮ ಮೂಲ ಜಾತಿಯಾಗಿರುವ ಹೊಲೆಯ ಅಥವಾ ಮಾದಿಗ ಎಂಬ ಜಾತಿಯನ್ನು ಮಾತ್ರ ಸಮೀಕ್ಷೆದಾರರಿಗೆ ತಿಳಿಸಬೇಕೆಂದು ತಾಲೂಕು ಭೀಮೋತ್ಸವ ಸಮಿತಿಯ ಅಧ್ಯಕ್ಷ ನೆಮ್ಮದಿಗ್ರಾಮ ಮೂರ್ತಿ ಮನವಿ ಮಾಡಿದರು.

- Advertisement -

 ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ಎರಡು ಭೇದಗಳಿವೆ. ಅವುಗಳಲ್ಲೂ ಹಲವಾರು ಉಪ ಜಾತಿಗಳು ಇವೆ. ಅವೆಲ್ಲವನ್ನೂ ಬದಿಗೊತ್ತಿ ತಮ್ಮ ಮೂಲ ಜಾತಿಯಾಗಿರುವ ಮಾದಿಗ ಅಥವಾ ಹೊಲೆಯ ಎಂಬ ಎರಡೇ ಜಾತಿಗಳನ್ನು ನಮೂದಿಸಬೇಕು. ಯಾರೂ ಸಹ ಹಿಂಜರಿಕೆ ಮಾಡದೇ ತಮ್ಮ ಜಾತಿಯನ್ನು ನಮೂದಿಸುವ ಮೂಲಕ ಒಳ ಮೀಸಲಾತಿಯಲ್ಲಿ ಉದ್ಭವಿಸಿರುವ ಗೊಂದಲವನ್ನು ನಿವಾರಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರಾವತಿ | ಕಲುಷಿತ ಕುಡಿಯುವ ನೀರು ಸರಬರಾಜು; ರೋಗಭೀತಿಯಲ್ಲಿ...

ಭದ್ರಾವತಿ ತಾಲೂಕಿನ ಶಿವರಾಮನಗರ ಗ್ರಾಮದಲ್ಲಿ ನಗರಸಭೆ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ನಗರಸಭೆ ಆಡಳಿತ ಮತ್ತು ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿರುವುದಾಗಿ ಸ್ಥಳೀಯರು...

15 ವರ್ಷಗಳಿಂದ ಪ್ಲಾಸ್ಟಿಕ್‌ ದೂರವಿಟ್ಟ ಗ್ರಾಮ; ನಮ್ಮೂರಿಗೂ ಇದು...

ಒಂದು ಗ್ರಾಮವೆಂದರೆ, ಇಂದಿಗೂ ಮಣ್ಣಿನ ರಸ್ತೆಗಳು, ಕಚ್ಚಾ ಮನೆಗಳು, ಹೊಲ-ಗದ್ದೆಗಳು ಮಾತ್ರ ನೆನಪಾಗುತ್ತವೆ. ಅಲ್ಲಿನ ಜನರ ಬದುಕಿನ ಶಿಸ್ತು, ಸಾರ್ವಜನಿಕ ಸ್ಥಳಗಳ ಮೇಲಿನ ಅವರ ಹೊಣೆಗಾರಿಕೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಇರುವ...

ʼಹಿಂದೆ ಸರಿಯುವ ಮಾತೇ ಇಲ್ಲʼ; ದೆಹಲಿ ಬೀದಿಗಳಲ್ಲಿ ಅಬ್ಬರಿಸುತ್ತಿರುವ...

ಚುನಾವಣಾ ಆಯೋಗದ (ECI) ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಮತ್ತು CEC ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ INDIA ಬ್ಲಾಕ್ ಸಂಸತ್ ಸದಸ್ಯರು ದೆಹಲಿ ಬೀದಿಗಳಲ್ಲಿ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕರು...

 ಈ ದೇಶದ ಮೂಲಜರಾಗಿರುವ ನಾವು ನಮ್ಮ ಜಾತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದರಲ್ಲಿ ಮುಜುಗರ ಪಡುವ ಅವಶ್ಯಕತೆ ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಎಸ್ ಸಿ ಗಳದ್ದೇ ಒಂದೊಂದು ಕಾಲೋನಿಗಳಿರುತ್ತವೆ. ಸಮೀಕ್ಷೆ ಮಾಡುವವರಿಗೆ ಗೊಂದಲ ಆಗದು. ಆದರೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ಬಡಾವಣೆಗಳಲ್ಲಿ ನಮ್ಮ ಸಮುದಾಯದವರು ವಾಸವಿದ್ದಾರೆ. ಅವರಿಗೆ ತಮ್ಮ ಜಾತಿ ಹೇಳಿಕೊಳ್ಳುವುದು ಮುಜುಗರ ಉಂಟು ಆಗಬಹುದು. ಅಲ್ಲದೇ ಸಮೀಕ್ಷೆದಾರರಿಗೂ ಮನೆಗಳನ್ನು ಪತ್ತೆ ಹಚ್ಚಲು ತೊಂದರೆಯಾಗಬಹುದು. ಅಂತಹ ಸಂಧರ್ಭದಲ್ಲಿ ಗ್ರಾಮ ಸಹಾಯಕರ ಅಥವಾ ನಮ್ಮ ಸಮುದಾಯದ ಮುಖಂಡರನ್ನು ಭೇಟಿಯಾಗಿ ವಿವರ ನೀಡಬೇಕೆಂದು ನೆಮ್ಮದಿಗ್ರಾಮ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ. 

  ಕಳೆದ ಮೂವತ್ತು ವರ್ಷಗಳಿಂದಲೂ ನಮ್ಮ ಹಕ್ಕನ್ನು ಪಡೆಯಲು ಹೋರಾಡುತ್ತಿದ್ದೇವೆ. ಇಂದು ಅಂತಿಮ ಹಂತ ತಲುಪಿದೆ. ನಮ್ಮ ಹಕ್ಕನ್ನು ಪಡೆಯಲು ಎಲ್ಲಾ ದಲಿತ ಸಮುದಾಯದ ಎಲ್ಲಾ ಉಪಜಾತಿಗಳೆಲ್ಲರೂ ಒಂದಾಗಿ ಹೋರಾಡಬೇಕಿದೆ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.

 ರಾಜ್ಯದಲ್ಲಿ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ಪಂಗಡಗಳಿವೆ. ಅವುಗಳು ಕೆಲವು ಪ್ರಾಂತ್ಯಗಳಲ್ಲಿ ಬದಲಾಗಿವೆ. ತುಮಕೂರು, ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಒಂದು ರೀತಿ ಇದ್ದರೆ, ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ವ್ಯತ್ಯಾಸ ಇದೆ. ಇದು ಜಾತಿ ಸಮೀಕರಣ ವೇಳೆ ಸಮೀಕ್ಷೆದಾರರಿಗೆ ಗೊಂದಲ ಉಂಟಾಗಲಿದೆ. ಅಲ್ಲದೇ ಅಂತಿಮವಾಗಿ ಒಟ್ಟಾರೆ ಜನಸಂಖ್ಯೆ ಕ್ರೋಢೀಕರಣ ವೇಳೆ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಕಷ್ಟವಾಗಲಿದೆ. ಹಾಗಾಗಿ ಎಲ್ಲರೂ ತಮ್ಮ ಮೂಲ ಜಾತಿಯಾಗಿರುವ ಮಾದಿಗ ಮತ್ತು ಹೊಲೆಯ ಎಂಬ ಎರಡೇ ಜಾತಿಗಳನ್ನು ಮಾತ್ರ ನಮೂದಿಸಬೇಕೆಂದು ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡೊಂಕಿಹಳ್ಳಿ ರಾಮಯ್ಯ, ಮಲ್ಲೂರು ತಿಮ್ಮೇಶ್, ಕುಣಿಕೇನಹಳ್ಳಿ ಜಗದೀಶ್, ಶ್ರೀನಿವಾಸ್, ಹೊನ್ನೇನಹಳ್ಳಿ ಕೃಷ್ಣ, ಪುಟ್ಟರಾಜು, ಹೆಗ್ಗೆರೆ ನರಸಿಂಹಯ್ಯ, ರಾಯ, ಮಹದೇವಯ್ಯ, ಮುನಿಯೂರು ರಂಗಸ್ವಾಮಿ, ಡಾ.ಚಂದ್ರಯ್ಯ, ಪ್ರಸನ್ನ ಕುಮಾರ್, ಶಂಕರಪ್ಪ, ಸಾಸಲು ಕೃಷ್ಣಮೂರ್ತಿ, ಗುಡ್ಡೇನಹಳ್ಳಿ ಶಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...