ಚಂದ್ರಯಾನ ಕುರಿತ ಟ್ವೀಟ್ : ನಟ ಪ್ರಕಾಶ್ ರಾಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು

Date:

  • ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಬಾಗಲಕೋಟೆಯಲ್ಲಿ ದೂರು
  • ಚಂದ್ರಯಾನ-3 ಕುರಿತು ಅಪಹಾಸ್ಯ ಮಾಡಿದ್ದಾರೆಂದು ಆರೋಪ

ಚಂದ್ರಯಾನ -3 ಕುರಿತು ಅಪಹಾಸ್ಯದ ರೀತಿಯ ಫೋಟೋ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್‌ ಠಾಣೆಗೆ ಶ್ರೀರಾಮ ಸೇನೆಯ ಮುಖಂಡ ಶಿವಾನಂದ ಗಾಯಕ್‌ವಾಡ್ ಎಂಬವರು ದೂರು ನೀಡಿದ್ದು, ಇಸ್ರೋ ವಿಜ್ಞಾನಿಗಳನ್ನು ಅಪಹಾಸ್ಯ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬನಹಟ್ಟಿ ಠಾಣೆಯ ಸಬ್ ಇನ್ಸ್‌ಪೆಕ್ಟರ್, ‘ಟ್ವಿಟರ್‌ನಲ್ಲಿ ಚಂದ್ರಯಾನ -3 ಕುರಿತು ಅಪಹಾಸ್ಯ ಮಾಡಿದ್ದಾರೆಂದು ಮನವಿ ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇವೆ. ಎಫ್‌ಐಆರ್ ದಾಖಲಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಚಂದ್ರಯಾನ – 3 ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆಗಸ್ಟ್ 23 ರ ಸಂಜೆ 06:04ಕ್ಕೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್‌ ಲ್ಯಾಂಡ್ ಆಗಲಿದೆ. ಇದು ಯಶಸ್ಸಿಯಾಗಲೆಂದು ಹಲವೆಡೆ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ.

ಈ ನಡುವೆ, ಚಂದ್ರಯಾನ – 3 ಬಗ್ಗೆ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್‌ ಸೋಷಿಯಲ್‌ ಮೀಡಿಯಾದಲ್ಲಿ ವಿವಾದಕ್ಕೆಡೆ ಮಾಡಿಕೊಟ್ಟಿತ್ತು.

‘ಬ್ರೇಕಿಂಗ್ ನ್ಯೂಸ್: ಚಂದ್ರನ ಅಂಗಳದಿಂದ ವಿಕ್ರಮ್‌ಲ್ಯಾಂಡರ್‌ನಿಂದ ಬಂದ ಮೊದಲ ಫೋಟೋ.. ವಾವ್’ ಎಂದು ಟ್ವೀಟ್ ಮಾಡುವುದರ ಜೊತೆಗೆ ವ್ಯಕ್ತಿಯೊಬ್ಬರು ಎರಡು ಮಗ್‌ಗಳ ನಡುವೆ ಚಹಾವನ್ನು ಸುರಿಯುವ ವ್ಯಂಗ್ಯಚಿತ್ರ ಹಂಚಿಕೊಂಡಿದ್ದರು. ಇದು ಹಲವರ ಕಣ್ಣು ಕೆಂಪಗಾಗಿಸಿತ್ತು.

ವಿವಾದಿತ ಟ್ವೀಟ್ ಮೂಲಕ ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆಂದು ಆರೋಪಿಸಿದರೆ, ಇದಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ದ್ವೇಷಿಸುವವರಿಗೆ ದ್ವೇಷ ಮಾತ್ರ ಕಾಣ ಸಿಗುತ್ತದೆ’ ಎಂದು ಹೇಳಿದ್ದರು.

‘ದ್ವೇಷಿಸುವವರಿಗೆ ದ್ವೇಷ ಮಾತ್ರ ಕಾಣುತ್ತದೆ. ನಾನು ಆರ್ಮ್‌ಸ್ಟ್ರಾಂಗ್ ಸಮಯದ ಹಾಸ್ಯವನ್ನು ಉಲ್ಲೇಖಿಸುತ್ತಿದ್ದೆ. ಕೇರಳದ ಚಾಯ್‌ವಾಲಾಗಳ ಬಗ್ಗೆ ತಿಳಿಸಿದ್ದೇನೆ. ಟ್ರೋಲ್‌ ಮಾಡುವವರು ಯಾವ ಚಾಯ್‌ವಾಲಾ ಎಂದು ತಿಳಿದುಕೊಂಡಿದ್ದಾರೆ? ನಿಮಗೆ ಜೋಕ್ ಸಿಗದಿದ್ದರೆ, ಜೋಕ್ ನಿಮ್ಮ ಬಗ್ಗೆಯೇ ಇರುತ್ತದೆ. ಅಭಿವೃದ್ಧಿ ಹೊಂದಿ’ ಎಂದು ಟ್ವೀಟ್ ಬಗ್ಗೆ ವಿವಾದ ಉಂಟು ಮಾಡಿದವರಿಗೆ ಪ್ರಕಾಶ್​ ರಾಜ್​ ತಿಳಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೂ, ನಮ್ಮ ಪೊಲೀಸರು ಮನುವಾದಿಗಳಿಗೆ ಮಣೆ ಹಾಕುತ್ತಿರುವುದು ಕಂಡನಾರ್ಹ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಸತಿ ಯೋಜನೆಯ ಕಾಮಗಾರಿ ನಿಲ್ಲಿಸುವಂತಿಲ್ಲ; ಗುತ್ತಿಗೆದಾರರಿಗೆ ಸಚಿವ ಜಮೀರ್‌ ಸೂಚನೆ

ಬಿಲ್ ಪಾವತಿ ಬಾಕಿ ನೆಪವೊಡ್ಡಿ ಗುತ್ತಿಗೆ ಸಂಸ್ಥೆಗಳು ವಸತಿ ಯೋಜನೆಗಳ ಕಾಮಗಾರಿ...

ಸುವರ್ಣಸೌಧದ ಅಂಗಳದಲ್ಲಿ ಡಿ.12ರಂದು ‘ಕರ್ನಾಟಕ ಸಂಭ್ರಮ’ ವಿಶೇಷ ಕಾರ್ಯಕ್ರಮ

ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 2023ಕ್ಕೆ 50 ವರ್ಷಗಳು ತುಂಬುತ್ತಿರುವ...

ವಿಜಯನಗರ | ಮದ್ಯಮುಕ್ತ ಗ್ರಾಮವನ್ನಾಗಿಸಲು ಒತ್ತಾಯಿಸಿ ಗ್ರಾಕೂಸ್‌ ಪ್ರತಿಭಟನೆ

ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣವನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕು ಮತ್ತು...

ಧಾರವಾಡ | ‘ಸಾರಾಯಿ‌ ಮುಕ್ತ ಗ್ರಾಮ’ ಎಂದು ನಾಮಫಲಕ ಅನಾವರಣ

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಕೂಡಲಗಿ ಗ್ರಾಮದಲ್ಲಿ ಗ್ರಾಮಸ್ಥರು, ಮಹಿಳೆಯರು, ಯುವಜನತೆ...