ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಬಗ್ಗೆ ದಿನ ಕಳೆದಂತೆ ಅನೇಕ ಸಂಶಯಗಳು ಹುಟ್ಟಿಕೊಂಡಿದ್ದು ಅಡಗಿರುವ ಸತ್ಯಾಸತ್ಯತೆಯನ್ನು ತಿಳಿಯಬೇಕಾದರೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ನಾವೂ ಬಯಸಿದ್ದೆವು ಹಾಗಾಗಿ ತನಿಖೆಯನ್ನು ಸಿಐಡಿಗೆ ನೀಡಿದ ಕ್ರಮವನ್ನು ಸ್ವಾಗತಿಸುತ್ತೇನೆ. ಮತ್ತು ಘಟನೆಯ ಬಗ್ಗೆ ಪೋಲಿಸರಿಗೆ ಮಹಿತಿ ನೀಡಿದವರಿಗೆ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಿರುವುದರಿಂದ ನಿರಪರಾದಿಗಳಿಗೆ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಪ್ರದೀಪ್ ಪೂಜಾರಿ ಆತ್ಮಹತ್ಯೆಯ ಹಿಂದೆ ಅನೇಕ ಮುಚ್ಚಿಟ್ಟಿರುವ ಸತ್ಯಗಳು ಬಹಿರಂಗವಾಗಬೇಕಿದೆ ಪ್ರತಿಭಟನೆ ಮತ್ತು ಭಾಷಣದ ಮೂಲಕ ಒತ್ತಡ ಹಾಕಿ ಅದನ್ನು ಮುಚ್ಚಿಡುವ ಪ್ರಯತ್ನಗಳು ನಡೆಯುತ್ತಿವೆ ಅದನ್ನು ಸಹಿಸಲು ಸಾಧ್ಯವಿಲ್ಲ ಪ್ರದೀಪ್ ಸಂತ್ರಸ್ಥೆಯ ಮನೆಗೆ ಬೇಟಿ ನೀಡಿ ಕೇಸು ಹಿಂದಕ್ಕೆ ಪಡೆಯಲು ಮನವೊಲಿಸುವಂತೆ ಆತನನ್ನು ಪ್ರೇರೇಪಿದವರು ಯಾರು? ಮತ್ತು ಒಂದು ವೇಳೆ ಅವನ ಜಾಮೀನು ರದ್ದಾದರೆ 14 ವರ್ಷ ಜೈಲು ಸೇರಬೇಕಾಗುತ್ತದೆ ಎಂದು ಅವನ್ನು ಮಾನಸಿಕವಾಗಿ ಕುಗ್ಗಿಸಿ ಆತ್ಮಹತ್ಯೆಗೆ ಪ್ರಮುಖ ಕಾರಣರಾದವರು ಯಾರು? ಎನ್ನುವುದು ಬಹಿರಂಗವಾಗಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯ ಇದೆ ಎಂದರು.
ಪ್ರಕರಣ ನಡೆದ ನಂತರ ಸ್ಥಳಕ್ಕೆ ಬೇಟಿ ನೀಡಿ ಪೋಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಗಳನ್ನೇ ಪ್ರಕರಣದಲ್ಲಿ ಸಿಲುಕಿಸಿ ಕ್ರಿಮಿನಲ್ ಪಟ್ಟ ಕಟ್ಟಲಾಗಿದೆ ಇದು ನ್ಯಾಯವಲ್ಲ, ಸಂತ್ರಸ್ಥೆಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾನೆ ಎಂದು ಪ್ರದೀಪನ ಮೇಲೆ ಹಲ್ಲೆ ನಡೆದಿದ್ದು ಅದಾದ ಮೂರು ದಿನಗಳ ನಂತರ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಸಂತ್ರಸ್ಥೆಯ ಮನೆಗೆ ನುಗ್ಗುವ ಧೈರ್ಯ ಮಾಡಿದವನು ಆತ್ಮಹತ್ಯೆ ಮಾಡಿಕೊಳ್ಳಲು ಹೇಗೆ ಸಾದ್ಯ? ಆತ್ಮಹತ್ಯೆಯ ಮೊದಲು ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾನೆ ಎನ್ನುವ ಅಭಿಪ್ರಾಯವಿದೆ ಅದ್ದರಿಂದ ಸಾವಿಗೆ ಜವಾಬ್ದಾರಿ ಯಾರು? ಇಂತಹ ಅನೇಕ ಪ್ರಶ್ನೆಗಳು ಸಹಜವಾಗಿಯೆ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಸಿಐಡಿ ತನಿಖೆ ಉತ್ತಮ ಕ್ರಮ ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿ ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣಕ್ಕೆ ಸಿಲುಕಿರುವ ನಿರಪರಾಧಿಗಳಿಗೂ ನ್ಯಾಯ ಸಿಗಲಿ ಎಂದರು
ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಸಮಾಜವನ್ನು ಪಕ್ಷದ ವಿರುದ್ದ ಎತ್ತಿಕಟ್ಟುವ ಪ್ರಯತ್ನಗಳು ನಡಿತಿದೆ ಇದನ್ನು ಸಹಿಸಲು ಸಾದ್ಯವಿಲ್ಲ. ಒತ್ತಡಕ್ಕೆ ಮಣಿದು ಅಮಾಯಕರನ್ನು ಗುರಿಯಾಗಿಸಿದರೆ ನಾವು ಮೌನ ಮುರಿಯಬೇಕಾಗುತ್ತದೆ ಎಂದರು
ಅದ್ದರಿಂದ ನ್ಯಾಯದ ಬೇಡಿಕೆಗೆ ಫಲ ಸಿಗಬೇಕಾದರೆ ಉನ್ನತ ಮಟ್ಟದ ತನಿಖೆ ಅಗತ್ಯವಿತ್ತು ಸರಕಾರದ ಈ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







