ಮೂಡಬಿದ್ರೆ | ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

Date:

ಜಮೀಯ್ಯತುಲ್ ಫಲಾಹ್ ಮೂಡಬಿದ್ರೆ ತಾಲೂಕು ಘಟಕದ ವತಿಯಿಂದ 23 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮವು ಶನಿವಾರ ತಾಲೂಕಿನ ಸಮಾಜ ಮಂದಿರದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಕೇಂದ್ರ ಸಮಿತಿ ಅಧ್ಯಕ್ಷರಾದ ಅಶ್ಫಾಕ್ ಅಹ್ಮದ್ ವಹಿಸಿ ಮಾತನಾಡಿ, “ಶಿಕ್ಷಣ ಕ್ಷೇತ್ರದಲ್ಲಿ ಜಮೀಯ್ಯತುಲ್ ಫಲಾಹ್ ಹಲವು ಹಲವು ವರ್ಷಗಳಿಂದ ಮಾಡುತ್ತಿರುವ ಸೇವೆಯ ಕುರಿತು ವಿವರಿಸಿದರು. ಆರ್ಥಿಕವಾಗಿ ಹಿಂದುಳಿದವರಿಗಾಗಿ ಶಾಲೆಗಳು ಹಾಗೂ ವಿದ್ಯಾರ್ಥಿ ವಸತಿ ನಿಲಯಗಳನ್ನು ನಿರ್ಮಿಸು ವುದು ಸೇರಿದಂತೆ ಶೈಕ್ಷಣಿಕ ನೆರವು ನೀಡುವ ವಿವಿಧ ಕಾರ್ಯಗಳನ್ನು ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಕಾರ್ಯಕ್ರಮದಲ್ಲಿ ಮಾತನಾಡಿದ ಜೈನ್ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ನಿತೇಶ್ ಬಲ್ಲಾಳ್ ಅವರು, “ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಜಮೀಯ್ಯತುಲ್ ಫಲಾಹ್ ಮಾಡುತ್ತಿರುವ ಸೇವೆಯು ಶ್ಲಾಘನೀಯ. ಇಂದು ನೆರವು ಪಡೆಯುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾವು ಸಬಲರಾದಾಗ, ತಮಗೆ ದೊರೆತ ಸಹಾಯದ ಮನೋಭಾವವನ್ನು ಮುಂದುವರಿಸಿ ಇತರ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ಜಮೀಯ್ಯತುಲ್ ಫಲಾಹ್ ಎನ್‌ಆರ್‌ಯು ಮಾಜಿ ಅಧ್ಯಕ್ಷ ಮುಹಮ್ಮದ್ ರಫೀಖ್ ಅವರು ಮಾತನಾಡಿ, ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳ ಶಿಕ್ಷಣ, ಶಿಸ್ತು, ಉತ್ತಮ ಮೌಲ್ಯಗಳು ಹಾಗೂ ವೃತ್ತಿ ಆಯ್ಕೆಯ ಬಗ್ಗೆ ಪೋಷಕರು ನಿರಂತರವಾಗಿ ಮಾರ್ಗದರ್ಶನ ನೀಡಬೇಕು” ಎಂದು ಹೇಳಿದರು.

ಇದೇ ವೇಳೆ 23ಅರ್ಹ ವಿದ್ಯಾರ್ಥಿಗಳಿಗೆ ಗಣ್ಯ ಅತಿಥಿಗಳ ಮೂಲಕ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಮೀಯ್ಯತುಲ್ ಫಲಾಹ್‌ದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಅಜೀವ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ ಆಗ್ರಹ

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ...

ಹಾವೇರಿ | ರಸ್ತೆ ದುರಸ್ತಿ ಕಾಮಗಾರಿ ವೇಳೆ ಭೀಕರ ಅಪಘಾತ: ಇಬ್ಬರು ಮಹಿಳಾ ಕಾರ್ಮಿಕರ ಮೃತ

ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಕೂಲಿ...

ಸಿಂಧನೂರು | ಹಂಚಿನಾಳ ಕ್ಯಾಂಪ್‌ನಲ್ಲಿ 25 ಬೀದಿ ನಾಯಿಗಳ ಸೆರೆ

ತಾಲ್ಲೂಕಿನ ಹಂಚಿನಾಳ ಕ್ಯಾಂಪ್‌ನಲ್ಲಿ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ ನಡೆದ...

ಗದಗ | ಕಲಾವಿದರ ಸೃಜನಶೀಲತೆ, ಪ್ರತಿಭೆಯನ್ನು ಗುರುತಿಸಬೇಕು: ಕಲಾವಿದ ಅಶೋಕ ಟಿ.ಅಕ್ಕಿ

"ಕಲಾವಿದರ ಸೃಜನಶೀಲತೆ, ಪ್ರತಿಭೆ, ಸಾಧನೆಗಳನ್ನು ಗುರುತಿಸಿ, ಗೌರವಿಸುವುದರಿಂದ ಕಲಾ ಕ್ಷೇತ್ರದ ಬೆಳವಣಿಗೆಗೆ...