ದಕ್ಷಿಣ ಕನ್ನಡ | ಶತಮಾನದಷ್ಟು ಹಳೆಯ ಹಾಸ್ಟೆಲ್ ಕಟ್ಟಡ ನೆಲಸಮ

Date:

ಶತಮಾನ ಕಂಡ ಪಾರಂಪರಿಕ ಕಟ್ಟಡವೊಂದು ಇದೀಗ ಕಲ್ಲು-ಮಣ್ಣಿನ ರಾಶಿಯಾಗಿ ಮಾರ್ಪಟ್ಟಿದೆ. ನಗರದ ಹೃದಯಭಾಗದ ಮಣ್ಣಗುಡ್ಡೆಯಲ್ಲಿರುವ ಗೋಕರ್ಣನಾಥೇಶ್ವರ ಕಾಲೇಜಿನ ಆವರಣದಲ್ಲಿ ಸೂಟರ್ ಹಾಸ್ಟೆಲ್ ಕಟ್ಟಡವನ್ನು ನೆಲಸಮ ಮಾಡುವ ಮೂಲಕ ಪಾರಂಪರಿಕ ಕಟ್ಟಡವೊಂದು ಧರಾಶಾಹಿಯಾಗಿದೆ.

- Advertisement -

ಪಾರಂಪರಿಕ ತಾಣವಾಗಿ ಉಳಿಸಬೇಕಾಗಿದ್ದ ಐತಿಹಾಸಿಕ ಕುರುಹು ಇದೀಗ ಅವಶೇಷವಾಗಿ ಉಳಿದಿದೆ. ಬ್ರಿಟಿಷರ ಅವಧಿಯ ಈ ಹಾಸ್ಟೆಲ್ 70ರ ದಶಕದಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಆದರೆ ಆ ಭವ್ಯ ಕಟ್ಟಡವು ಗತಕಾಲದ ವೈಭವಕ್ಕೆ ಮೂಕ ಸಾಕ್ಷಿಯಾಗಿತ್ತು. ಕುಂದಾಪುರದಿಂದ ಕಾಸರಗೋಡು ಅಥವಾ ಬೆಳ್ತಂಗಡಿವರೆಗಿನ ದೂರದ ಊರುಗಳಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದ ನೂರಾರು ಬಿಲ್ಲವ ಯುವಕರಿಗೆ ಆಶ್ರಯ ಮತ್ತು ಸರ್ವತೋಮುಖ ಪೋಷಣೆ ನೀಡಲು 1926ರಲ್ಲಿ ಸೂಟರ್ ಹೆಸರಲ್ಲಿ ಈ ಹಾಸ್ಟೆಲ್ ನಿರ್ಮಾಣವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಸ್ರೇಲ್ ಚುಕ್ಕಾಣಿ ಹಿಡಿಯಲು ಮುಂದಾದ ‘ಗಾಡಿ ಐಸೆನ್‌ಕೋಟ್’; ಗಾಜಾ...

ಇಡೀ ಜಗತ್ತು ಕಾತರದಿಂದ ಕೇಳುತ್ತಿರುವ ಅತಿದೊಡ್ಡ ಪ್ರಶ್ನೆಯೆಂದರೆ, ಐಸೆನ್‌ಕೋಟ್‌ ಆಡಳಿತದಲ್ಲಿ ಗಾಜಾ ಬಿಕ್ಕಟ್ಟು ಶಾಶ್ವತವಾಗಿ ಪರಿಹಾರವಾಗುತ್ತದೆಯೇ ಎಂಬುದು. ಆದರೆ, ಇದು ವಾಸ್ತವಕ್ಕೆ ತೀರಾ ದೂರವಾದ ನಿರೀಕ್ಷೆಯಾಗಿದೆ. ಐಸೆನ್‌ಕೋಟ್‌ ಅವರು ವಾಸ್ತವಿಕವಾದಿ ನಾಯಕನೇ ಹೊರತು,...

50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ...

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿದೆ. ಸಾರ್ಥಕ 49 ವರ್ಷಗಳನ್ನು ಪೂರೈಸಿ, ಈಗ 50ನೇ ವರ್ಷಕ್ಕೆ...

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ...

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ ಇದಾಗಿದೆ,ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಮಂಡ್ಯ, ಮೈಸೂರು ಸೇರಿದಂತೆ 10 ರಿಂದ 15 ಜಿಲ್ಲೆಗಳಲ್ಲಿ...

ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಸಂಸ್ಥಾಪಕ ಅಧ್ಯಕ್ಷ ಸೌಕಾರ್ ಧೂಮಪ್ಪ ಕಾಂಟ್ರಾಕ್ಟರ್ ಅವರ ವಂಶಸ್ಥರು ಈ ಪಾರಂಪರಿಕ ಕಟ್ಟಡದ ಧ್ವಂಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂಘದ ಆಡಳಿತ ಮಂಡಳಿಯು ಹಳೆಯ ಕಟ್ಟಡವನ್ನು ಪುನಃಸ್ಥಾಪಿಸಿ, ಸಂಸ್ಥಾಪಕರು ಮತ್ತು ಸಂಸ್ಥಾಪಕ ಪಿತಾಮಹರ ಹೆಸರಿನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿದ್ದರೆ ಅದೊಂದು ಸೂಕ್ತ ಗೌರವವಾಗುತ್ತಿತ್ತು ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisements

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಧೂಮಪ್ಪ ಕಾಂಟ್ರಾಕ್ಟರ್ ಅವರ ಮೊಮ್ಮಕ್ಕಳಾದ ನರೇಂದ್ರ ಕುಮಾರ್ ಮತ್ತು ವಾಣಿ ಭವಿಶಿ ಅವರು, ನೂರು ವರ್ಷಗಳ ಹಿಂದೆ ಸೂಟರ್ ಹಾಸ್ಟೆಲ್ ಸ್ಥಾಪನೆಯ ಕನಸು ಕಂಡ ಹತ್ತು ಟ್ರಸ್ಟಿಗಳ ಗೌರವಾರ್ಥವಾಗಿ ಯಾವುದಾದರೂ ಸಾರ್ವಜನಿಕ ಬಳಕೆಯ ಸಂಸ್ಥೆಯನ್ನು ಪುನರ್ ನಿರ್ಮಿಸುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.

ಸೂಟರ್ ಹಾಸ್ಟೆಲ್‌ಗಾಗಿ ಜಮೀನನ್ನು ಅಂದಿನ ಕಲೆಕ್ಟರ್ ಸಿ. ಎಸ್. ಸೂಟರ್ ಅವರು ಮಂಜೂರು ಮಾಡಿದ್ದರು ಮತ್ತು ಅದು ಧೂಮಪ್ಪ ಕಾಂಟ್ರಾಕ್ಟರ್ ಅವರ ಪತ್ನಿ ಕಮಲಾ ಬಾಯಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿತ್ತು. ಅಧಿಕೃತ ದಾಖಲೆಗಳು ಇನ್ನೂ ಅವರ ಹೆಸರಿನಲ್ಲಿಯೇ ಇದ್ದರೂ, ಕುಟುಂಬವು ಆ ಆಸ್ತಿಯ ಮೇಲೆ ಯಾವುದೇ ಹಕ್ಕು ಮಂಡಿಸಿಲ್ಲ. ಸಂಘದ ಬ್ಯಾನರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತ ಮಂಡಳಿಯು ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಯಾವಾಗ ಬೇಕಾದರೂ ಕುಸಿಯಬಹುದಿತ್ತು ಎಂದು ಹೇಳಿ ಧ್ವಂಸವನ್ನು ಸಮರ್ಥಿಸಿಕೊಂಡಿದೆ.

IMG 20261108 WA0147

“ಕಟ್ಟಡ ಮತ್ತು ಅದರ ಪಕ್ಕದ ಕಟ್ಟಡವನ್ನು ಕೆಡವಿ ಸಾರ್ವಜನಿಕ ಬಳಕೆಗೆ ಫೂರಕವಾಗಿ ಏನಾದರೂ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ. ಸಂಘದ ಸಂಸ್ಥಾಪಕ ಪಿತಾಮಹರ ಕೊಡುಗೆಗಳನ್ನು ಸೂಕ್ತವಾಗಿ ಸ್ಮರಿಸಲಾಗುವುದು” ಎಂದು ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಡಾ. ಬಿ.ಜಿ ಸುವರ್ಣ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಹಾಲು, ಬಸ್ ಪ್ರಯಾಣ ದರ ಏರಿಕೆ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ; ಎಸ್ಎಫ್ಐ ಡಿವೈಎಫ್ಐ ಖಂಡನೆ

ಹಾಲಿನ, ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ...

ಸಿಂಧನೂರು | ಪೊಲೀಸರಂತೆ ನಟಿಸಿ ಬೈಕ್ ಸವಾರನಿಂದ ಚಿನ್ನಾಭರಣ ಕಳವು

ಸಿಂಧನೂರು ಪೊಲೀಸರೆಂದು ನಂಬಿಸಿ ಬೈಕ್ ಸವಾರನನ್ನು ಅಡ್ಡಗಟ್ಟಿದ ಇಬ್ಬರು ಅಪರಿಚಿತರು, ಆತನ...

ಶಿವಮೊಗ್ಗ | ಹುಲಿ ದತ್ತು ಪಡೆದು ವಿಭಿನ್ನವಾಗಿ ಬಿ.ವಿ ಶ್ರೀನಿವಾಸ್ ಜನ್ಮದಿನಾಚರಣೆ!

ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ...

ದಕ್ಷಿಣ ಕನ್ನಡ | ಹೊಸ ಕಾರ್ಮಿಕ ಸಂಹಿತೆಗಳು ಕಟ್ಟಡ ಕಾರ್ಮಿಕರ ಹಕ್ಕುಗಳಿಗೆ ಮಾರಕ: ಯೋಗೀಶ್ ಜಪ್ಪಿನಮೊಗರು

ಕೇಂದ್ರ ಸರ್ಕಾರದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರು ದಶಕಗಳ ಹೋರಾಟದ...