ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ ಆಗ್ರಹ

Date:

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ ಇದಾಗಿದೆ,ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಮಂಡ್ಯ, ಮೈಸೂರು ಸೇರಿದಂತೆ 10 ರಿಂದ 15 ಜಿಲ್ಲೆಗಳಲ್ಲಿ ರೈತರು ರಸ್ತೆ ತಡೆ, ಹೆದ್ದಾರಿ ಬಂದ್ ಮಾಡಿ ತಮ್ಮ ನ್ಯಾಯಯುತ ಹೋರಾಟವನ್ನು ಶಶಿಕಾಂತ ಗುರೂಜಿ, ರೈತ ನಾಯಕ ಚೂನಪ್ಪ ಪೂಜೇರಿ ಅವರ ಮುಂದಾಳತ್ವದಲ್ಲಿ ನಡೆದ ಹೋರಾಟ ಇದಾಗಿದೆ

ಕೇಂದ್ರ ಸರ್ಕಾರ ನಿಗದಿ ಮಾಡಿರುವ FRP (Fair and Remunerative Price) ಪ್ರತಿ ಟನ್‌ಗೆ ₹3,650 ಇದೆ. ಆದರೆ ರೈತರು ₹5,500 ಪ್ರತಿ ಟನ್‌ಗೆ ಕೇಳುತ್ತಿದ್ದಾರೆ. ಇದರಲ್ಲಿ ₹4,500 ಕಾರ್ಖಾನೆಯಿಂದ ಮತ್ತು ₹1,000 ರಾಜ್ಯ ಸರ್ಕಾರದಿಂದ SAP (State Advisory Price) ಆಗಿ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು 2019 ರಿಂದ ₹31 ಕೆ.ಜಿ ಇದೆ, ಅದನ್ನು ₹60 ಕೆ.ಜಿಗೆ ಏರಿಸಬೇಕು.
ಸ್ವಾಮಿನಾಥನ್ ವರದಿ ಜಾರಿ: C2+50 ಸೂತ್ರದಂತೆ ವೈಜ್ಞಾನಿಕ ಬೆಲೆ, ಕಬ್ಬು ಕಟಾವು ಸಾಗಣೆ ವೆಚ್ಚ ಕಾರ್ಖಾನೆಯೇ ಭರಿಸಬೇಕು, 14 ದಿನದೊಳಗೆ ಹಣ ಪಾವತಿ, ಎಥೆನಾಲ್ ಲಾಭದಲ್ಲಿ ಪಾಲುದಾರಿಕೆ ಬೇಕು ಎಂಬ ನಿಲುವು ರೈತರದ್ದು.

- Advertisement -

ರೈತರ ವಾದ: ಒಂದು ಟನ್ ಕಬ್ಬು ಬೆಳೆಯಲು ₹4,500 ಖರ್ಚಾಗುತ್ತಿದೆ, ಗೊಬ್ಬರ, ಕೂಲಿ, ಕಟಾವು ದುಬಾರಿಯಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ...

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿದೆ. ಸಾರ್ಥಕ 49 ವರ್ಷಗಳನ್ನು ಪೂರೈಸಿ, ಈಗ 50ನೇ ವರ್ಷಕ್ಕೆ...

ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’:...

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ 'ವೋಟ್‌ ಚೋರಿ' ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಗಾಗಿ ನಡೆದ ಮತದಾರರ ಹಕ್ಕು ಹರಣ, ಮತಗಳತನದ ಎಸ್‌ಐಆರ್‌ ರದ್ದಾಗಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ...

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಹೋರಾಟದ ಹಾದಿ

ರೈತರ ಹೋರಾಟಕ್ಕೆ ಬಾರಿ ಜನಮನ್ನಣೆ ಸಿಕ್ಕಿದೆ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ 31 ಜಿಲ್ಲೆಗಳ ರೈತರು ಸೇರಿ ಬೃಹತ್ ಪ್ರತಿಭಟನೆ ನಡೆಸಿರುವದು ಅಕ್ಟೋಬರ್: NH48, ಧಾರವಾಡ ಬೈಪಾಸ್, ಕಲಬುರಗಿ-ಅಫಜಲಪುರದಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್ ನಿಲ್ಲಿಸಿ ಹೆದ್ದಾರಿ ಬಂದ್, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ.

ಆಗಸ್ಟ್ 18-19: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆ ಹುಬ್ಬಳ್ಳಿಯಲ್ಲಿ ರಾತ್ರಿ 3 ಗಂಟೆವರೆಗೆ ಮಾತುಕತೆ, ನವಂಬರ್ .26 ರವರೆಗೆ ಗಡುವು ನೀಡಿ ಹೋರಾಟ ತಾತ್ಕಾಲಿಕ ಸ್ಥಗಿತಗೊಳಿಸಿದ್ದರು

Advertisements

ನವಂಬರ್ 2-3: ಕಲಬುರಗಿ ಚೌಡಾಪುರದಲ್ಲಿ ಮತ್ತೆ ಹೆದ್ದಾರಿ ತಡೆ, ಮೈಸೂರು, ಮಂಡ್ಯದಲ್ಲಿ DC ಕಚೇರಿ ಎದುರು ಪ್ರತಿಭಟನೆ.

ನವಂಬರ್ 5: ಬೆಳಗಾವಿಯಲ್ಲಿ ‘ಜೈಲ್ ಭರೋ’ ಚಳವಳಿ – 100ಕ್ಕೂ ಹೆಚ್ಚು ರೈತರು ಬಂಧನ, BNSS 163 ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು

ನವಂಬರ್ 5,6ರಂದು ಬೆಳಗಾವಿ ಜಿಲ್ಲೆಯಲ್ಲಿ ಒಪ್ಪಂದ:


ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಖಾನೆ ಮಾಲೀಕರು ₹3,600 ಪ್ರತಿ ಟನ್ (₹3,500 ಮೊದಲ ಕಂತು + ₹100 ನಂತರ) ನೀಡಲು ಒಪ್ಪಿದ್ದಾರೆ. ಇದರ ಜೊತೆಗೆ ಸಕ್ಕರೆ ಬೆಲೆ ₹45ರಿಂದ ₹55ಕ್ಕೆ ಏರಿದರೆ ಹೆಚ್ಚುವರಿ ಲಾಭದಲ್ಲಿ ರೈತರಿಗೆ 75%, ಕಾರ್ಖಾನೆಗೆ 25% ಹಂಚಿಕೆ ಸೂತ್ರ ಒಪ್ಪಿಕೊಳ್ಳಲಾಗಿದೆ. ಈ ಬೆಲೆ ಆಧಾರದಲ್ಲಿ ರೈತರಿಗೆ ಕೊನೆಗೆ ₹4,350 ವರೆಗೆ ಸಿಗಬಹುದು ಎಂದು ನಿರೀಕ್ಷೆ ಹೊಂದಿದ್ದಾರೆ ಇದರಿಂದಾಗಿ ಬೆಳಗಾವಿಯ 29 ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆ ಶುರುವಾಗಿದೆ.

ಆದರೆ ಮಂಡ್ಯ-ಮೈಸೂರು ಭಾಗದ ಸಮನ್ವಯ ಸಮಿತಿಯ ರೈತರು ಇದನ್ನು ವೈಜ್ಞಾನಿಕವಲ್ಲ ಎಂದು ತಿರಸ್ಕರಿಸಿ, ಕನಿಷ್ಠ ₹4,500 ಮತ್ತು ರಾಜ್ಯ SAP ಬೇಕು ಎಂದು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ

ಸರ್ಕಾರದ ನಿಲುವು- ಕೇಂದ್ರ: 2026-27ರ ಉತ್ಪಾದನಾ ವೆಚ್ಚ ₹182/ಕ್ವಿಂಟಾಲ್, FRP ₹365/ಕ್ವಿಂಟಾಲ್ – ಅಂದರೆ ವೆಚ್ಚಕ್ಕಿಂತ 100% ಹೆಚ್ಚು ಎಂದು ವಾದವಾಗಿದೆ ರಮೇಶ್ ಚಂದ್ ಸಮಿತಿ ರಚನೆ ಮಾಡಿ ಪರಿಶೀಲನೆ ನಡೆಯುತ್ತಿದೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಧಾನಿಗೆ ಪತ್ರ ಬರೆದು, ಕೇಂದ್ರವೇ ಬೆಲೆ ನಿಗದಿ ಮಾಡಬೇಕು, ಸಕ್ಕರೆ MSP ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸದ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಹೋರಾಟ ತಣ್ಣಗಾಗಿದೆ, ಆದರೆ ರಾಜ್ಯಾದ್ಯಂತ ಏಕರೂಪದ ₹3,600 ಬೆಲೆ ಮತ್ತು ಕೇಂದ್ರದ ₹60 MSP ಬೇಡಿಕೆ ಈಡೇರುವವರೆಗೆ ನ.26ರ ಗಡುವಿನ ಹೋರಾಟ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಈ ಒಂದು ಮಾನದಂಡ ಕೇವಲ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತ ಬೇರೆ ಜಿಲ್ಲೆಗಳಿಗೆ ಅನ್ವಯಿಸಿಲ್ಲ ಈಗ ನಿಗದಿಯಾದ ಬೆಲೆಗೆ ನಮ್ಮ ಪ್ರತಿರೋದ ಇದೆ ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯಲ್ಲಿ ತೀರ್ಮಾನಿಸಿದ ದರವನ್ನುನಾವು ಒಪ್ಪುವುದಿಲ್ಲ ಎಂದು ಸಾವಿರಾರು ರೈತರು ಮುಧೋಳ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇವತ್ತಿಗೂ ಪ್ರತಿಭಟನೆಯಲ್ಲಿ ತೊಡಗಿದ್ದಾರೆ, ಒಟ್ಟಾರೆಯಾಗಿ ರಾಜ್ಯಕ್ಕೆ ಅನ್ವಯವಾಗುವ ಒಂದು ಬೆಲೆ ಜಾರಿಯಾಗಬೇಕಿದೆ ಅನ್ನದಾತರ ಬದುಕನ್ನು ಅತಂತ್ರ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ ಕಿರಣವಗಬೇಕಿವೆ.

IMG 20261105 WA0004
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಹಾಲು, ಬಸ್ ಪ್ರಯಾಣ ದರ ಏರಿಕೆ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ; ಎಸ್ಎಫ್ಐ ಡಿವೈಎಫ್ಐ ಖಂಡನೆ

ಹಾಲಿನ, ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ...

ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ‘ಚಾಕು ರಾಜಕಾರಣ’; ಎಎಪಿ ಕಿಡಿ

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ನಡೆಯುತ್ತಿರುವ ಪರಸ್ಪರ...

ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ 'ವೋಟ್‌ ಚೋರಿ' ವಿರುದ್ಧ ಬೃಹತ್ ಪ್ರತಿಭಟನೆಗಳು...