ಉಡುಪಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಅತೀ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಬುಧವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿ ಮಾಡಿ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ನೂತನ ಬಿಷಪ್‌ರವರ ಸೇವಾ ಜೀವನವು ಸಮಾಜಕ್ಕೆ ಬೆಳಕಾಗಲಿ ಹಾಗೂ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿಷಪ್ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರು, ಪ್ರೀತಿ ಹಾಗೂ ಗೌರವದಿಂದ ಅಭಿನಂದಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಎಲ್ಲರ ಮೇಲೂ ದೇವರ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದ ಅವರು, ಮಾನವೀಯ ಧರ್ಮ ಎಲ್ಲಕ್ಕಿಂತಲೂ ಶ್ರೇಷ್ಠವಾಗಿದ್ದು, ಪರಸ್ಪರ ಶಾಂತಿ ಹಾಗೂ ಸೌಹಾರ್ದತೆಯಿಂದ ಬದುಕಿ ಶೋಷಿತರು ಮತ್ತು ಅಶಕ್ತರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳಗಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ್ ಪೂಜಾರಿ, ನಾಯಕರಾದ ಮ್ಯಾಕ್ಸಿಮ್ ಡಿ’ಸೋಜಾ, ಮಾಜಿ ನಗರಸಭಾ ಸದಸ್ಯರಾದ ಪ್ರಕಾಶ್ ಅಂದ್ರಾದೆ, ಸಂಧ್ಯಾ ತಿಲಕ್‌ರಾಜ್, ಶಶಿರಾಜ್ ಕುಂದರ್, ಸುಕೇಶ್ ಕುಂದರ್, ಹೇಮಲತಾ ಹಿಲಾರಿ ಜತ್ತನ್ನ, ಗಣೇಶ್ ನೆರ್ಗಿ, ಲತಾ ಆನಂದ್ ಶೇರಿಗಾರ್, ಬ್ಲಾಕ್ ಕಾಂಗ್ರೆಸ್‌ನ ನಾಯಕರಾದ ಚಂದ್ರಮೋಹನ್, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಜಯವೀರ್ ಫೆಡ್ರಿಕ್ಸ್, ಶರತ್ ಶೆಟ್ಟಿ, ಮನೋಜ್ ಕರ್ಕೇರ, ವಿಲ್ಸನ್ ಸಿಕ್ವೇರಾ, ವನಿತಾ ಫೆರ್ನಾಂಡಿಸ್, ರಮೇಶ್ ಪಾಲ್, ಪ್ರೇಮಲತಾ ಸೋನ್ಸ್, ಜೋಸೆಫ್ ಪಿಂಟೋ, ಅನಿಲ್ ಗೊನ್ಸಾಲ್ವಿಸ್, ಲ್ಯಾನ್ಸಿ ಡಿ’ಸೋಜಾ, ದಯಾನಂದ್ ಡಿ ಕಿದಿಯೂರು, ವಿವಾನ್ ಫೆರ್ನಾಂಡಿಸ್, ಐರಿನ್ ಮೆನೆಜಸ್, ರಿಚಾರ್ಡ್ ಡಿ’ಸಿಲ್ವಾ, ರೋಸ್ಟನ್ ಡಿ’ಸಿಲ್ವಾ, ಪ್ರವೀಣ್ ಮಸ್ಕರೇನಸ್, ಜೇಮ್ಸ್ ಡೇನಿಸ್ ಡಿ’ಸೋಜಾ, ಸಾಯಿರಾಜ್ ಕಿದಿಯೂರು, ಸುಧಾಕರ್ ಪೂಜಾರಿ, ಅರುಣ್ ಡಿ’ಸೋಜಾ, ಸಂಜಯ್ ಆಚಾರ್ಯ, ಸುದೇಶ್ ಭಂಡಾರಿ ಹಾಗೂ ಕಿರಣ್ ಉಪಸ್ಥಿತರಿದ್ದರು.





