ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಸ್ಎಫ್ಐ ಸಹಿ ಸಂಗ್ರಹ ಆಂದೋಲನಕ್ಕೆ ರಾಜ್ಯಧ್ಯಕ್ಷ ಗಣೇಶ ರಾಠೋಡ್ ಅವರು ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಚಾಲನೆ ನೀಡಿದರು.
ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ನೇತೃತ್ವದಲ್ಲಿ ರಾಜ್ಯ ಸರ್ಕಾರದ ಎರಡು ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ಕಾರ್ಪೊರೇಟ್ ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವುದನ್ನು ಖಂಡಿಸಿ ಹಾಗೂ ಕೆ ಪಿ ಎಸ್ ಮ್ಯಾಗನೇಟ್ ಶಾಲೆಗಳನ್ನು ವಿರೋಧಿಸಿ ಇಂದು ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕಡಬಿನ್ ಅವರು ಚಾಲನೆ ನೀಡಿದರು.
ಸಹಿ ಸಂಗ್ರಹ ಆಂದೋಲನ ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ರಾಜ್ಯಾಧ್ಯಕ್ಷ ಗಣೇಶ್ ರಾಠೋಡ ಮಾತನಾಡಿ, “ಎರಡು ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಖಾಸಗಿಕರಣ ಗೋಳಸಿವುದರಲ್ಲಿ ಮುಂದಾಗಿದೆ. ವಿದ್ಯಾರ್ಥಿ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಪದೆ ಪದೆ ಕೇಂದ್ರ ಸರ್ಕಾರದ ಇನ್ನೋಂದು ಮುಖವಾಗಿ ತೋರಿಸುತ್ತಿದೆ. ರಾಜ್ಯದ ಶಿಕ್ಷಣ ತಜ್ಞರು, ಚಿಂತಕರು , ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವಿರೋಧಿ ನೀತಿಯನ್ನು ವಿರೋಧಿ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಜನಾಂಧೋಲನ ರೂಪಿಸುವ ಅಗತ್ಯತೆ ಇದೆ” ಎಂದು ಹೇಳಿದರು.
ನಂತರ ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆ ಗಜೇಂದ್ರಗಡ ಹಾಗೂ ಮೌಲಾನ ಆಜಾದ್ ಪ್ರೌಢಶಾಲೆ ಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಮಧ್ಯೆ ಹೋಗಿ ಸಹಿಸಂಗ್ರಹ ಮಾಡಿ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಖಂಡಿಸಿದರು.
ಈ ಸಹಿ ಸಂಗ್ರಹ ಆಂದೋಲನದಲ್ಲಿ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್, ಮುಖ್ಯೋಪಾಧ್ಯಯ ಬಸವರಾಜ ಕಡಬಿನ, ತಾಲೂಕು ಅಧ್ಯಕ್ಷರು ಅನಿಲ್ ಆರ್, ತಾಲೂಕು ಕಾರ್ಯದರ್ಶಿ ಶರಣು ಮಟರಂಗಿ, ರವಿತೇಜ, ತನುಜಾ ರಾಯಬಾಗಿ, ರೇಣುಕಾ ಜೋಗಿನ, ಪ್ರೀತಮ್, ಮತ್ತು ಶಾಲೆಯ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



