ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ. ಮತ್ತು ಡಾ. ಅರುಣ್ ಜಿ. ಮೈಯಾ ಅವರ ಸಹ-ಮಾರ್ಗದರ್ಶನದಲ್ಲಿ ಡಾ. ಮೆಹೆವಿಶ್ ಮುಶೀರ್ ಶೇಖ್ ಅವರು ‘ಸಾಫ್ಟ್ ಕಂಪ್ಯೂಟಿಂಗ್ ಟೆಕ್ನಿಕ್ ಫಾರ್ ಪ್ರೆಡಿಕ್ಷನ್ ಆಫ್ ಫುಟ್ ರಿಸ್ಕ್ ಕ್ಲಾಸಿಫಿಕೇಶನ್ ಫಾರ್ ಟೈಪ್-2 ಡಯಾಬಿಟಿಕ್ ವಿದ್ ಡಯಾಬಿಟಿಕ್ ಫುಟ್ ಸಿಂಡ್ರೋಮ್’ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಡಾ. ಮೆಹೆವಿಶ್ ಮುಶೀರ್ ಶೇಖ್ ಅವರು ಉಡುಪಿ ಇಂದ್ರಾಳಿಯ ರಮೀಝ್ ಅಹ್ಮದ್ ಅವರ ಪತ್ನಿ ಹಾಗೂ ಉಡುಪಿಯ ಮುಶೀರ್ ಶೇಖ್ ಮತ್ತು ಇಶ್ರತ್ ಶೇಖ್ ದಂಪತಿಯ ಪುತ್ರಿಯಾಗಿದ್ದಾರೆ.





