ಉಡುಪಿ | ಸುಸ್ಥಿರ ಮೀನುಗಾರಿಕೆಗೆ ಒತ್ತು: ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ

Date:

ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ(ಎಫ್‌ಐಪಿ)ಯಡಿ ಸ್ಮಾಲ್ ಪೆಲಾಜಿಕ್ ಪರ್ಸ್ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಸೋಮವಾರ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್‌ನಲ್ಲಿ ನಡೆಯಿತು.

- Advertisement -

ಅವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಲ್ಲೂರಿ ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಸ್ಥಿರ ಮೀನುಗಾರಿಕೆ ಹಾಗೂ ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿಗಳ ಅನುಸರಣೆ ಇಂದಿನ ಅಗತ್ಯವಾಗಿದ್ದು, ಸಮುದ್ರ ಆಹಾರದ ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ಕರ್ನಾಟಕ ರಾಜ್ಯ ಎಫ್‌ಐಪಿಯ ಮುಖ್ಯಸ್ಥ ಉದಯಕುಮಾರ್ ಸಾಲ್ಯಾನ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಯೋಜನೆಯಡಿ ಅಪಾಯದಲ್ಲಿರುವ, ಅಪರೂಪದ ಹಾಗೂ ಸಂರಕ್ಷಿತ (ಇಟಿಪಿ) ಜಾತಿಗಳ ಸಂರಕ್ಷಣೆ, ಜವಾಬ್ದಾರಿಯುತ ಮೀನುಗಾರಿಕೆ, ಸ್ವಚ್ಛತೆ, ಕಾರ್ಮಿಕರ ಕಲ್ಯಾಣ ಹಾಗೂ ಅನೈತಿಕ ಮೀನುಗಾರಿಕೆ ಪದ್ಧತಿಗಳ ತಡೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮೀನುಗಾರರು ಹಾಗೂ ಮೀನುಗಾರಿಕಾ ದೋಣಿಗಳಿಗೆ ಸಂರಕ್ಷಿತ ಜಾತಿಗಳ ಕುರಿತು ಜಾಗೃತಿ ಫಲಕಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

1010821347

ಸಭೆಯಲ್ಲಿ ಯೋಜನಾ ಸಂಯೋಜಕಿ ಡಾ. ನಿಮ್ನುವಲ್ ಪೀವ್ರೋಂಗ್ಗಾಮ್, ಐಸಿಎಆರ್-ಸಿಎಮ್‌ಎಫ್‌ಆರ್‌ಐ ಮಂಗಳೂರು ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಸುಜಿತಾ ಥಾಮಸ್, ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಗಣೇಶ್ ನಖವಾ, ದಕ್ಷಿಣ್ ಫೌಂಡೇಶನ್‌ನ ಡಾ. ನವೀನ್ ನಂಬೂದ್ರಿ, ದೇವಿ ಸೀಫುಡ್ಸ್ ಲಿಮಿಟೆಡ್‌ನ ಸರಬ್ಪ್ರೀತ್ ಸಿಂಗ್, ಅವಂತಿ ಫೀಡ್ಸ್ ಲಿಮಿಟೆಡ್‌ನ ನಂದ ಕಿಶೋರ್ ಹಾಗೂ ಸೀಫುಡ್ ಟಾಸ್ಕ್ ಫೋರ್ಸ್‌ನ ಎ.ಬಿ. ಜೈನ್ ವಿವಿಧ ವಿಷಯಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಫಿಶ್‌ಮಿಲ್ ಮತ್ತು ಮೀನು ಎಣ್ಣೆ ರಫ್ತುದಾರರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹೇಶ್ ಕುಮಾರ್ ಯು., ಎಂಪಿಇಡಿಎ ಉಪನಿರ್ದೇಶಕ ಮನೋಜ್ ಕುಮಾರ್ ಟಿ.ಜಿ. ಹಾಗೂ ಜನತಾ ಗ್ರೂಪ್‌ನ ಅಧ್ಯಕ್ಷ ಆನಂದ್ ಸಿ. ಕುಂದರ್ ಉಪಸ್ಥಿತರಿದ್ದರು.

ರಮೇಶ್ ಎಂ.ಆರ್. ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಚೇತನ್ ಕುಮಾರ್ ಸುವರ್ಣ ವಂದಿಸಿದರು. ಡಾ. ಶಿವರಕುಮಾರ್ ಮಗದ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಸರಕಾರದ ವಿವಿಧ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಮುದ್ರ ಆಹಾರ ಕೈಗಾರಿಕೆ, ರಫ್ತುದಾರರು, ಸುಸ್ಥಿರ ಮೀನುಗಾರಿಕೆಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಹಾಗೂ ಮೀನುಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು.

ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಉಡುಪಿ, ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಎಸ್‌ಇಝೆಡ್ ಮಂಗಳೂರು, ಆಕಾಶ್ ಫಿಶ್‌ಮಿಲ್ ಅಂಡ್ ಫಿಶ್ ಆಯಿಲ್ ಕಂಪನಿ ಪ್ರೈವೇಟ್ ಲಿಮಿಟೆಡ್, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್, ರಾಜ್ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ, ಜನತಾ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಹಾಗೂ ಬ್ಲೂ ಲೈನ್ಸ್ ಫುಡ್ಸ್(ಇಂಡಿಯಾ) ಲಿಮಿಟೆಡ್ ಸಂಸ್ಥೆಗಳು ಎಫ್‌ಐಪಿಯ ಸದಸ್ಯ ಸಂಸ್ಥೆಗಳಾಗಿ ಭಾಗವಹಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಪೊಲೀಸ್ ಪೇದೆ

ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ...

ಉಡುಪಿ | ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ : ಸಚಿವ ಬಸವಂತಪ್ಪ

ಸರ್ವಋತು ಮಲ್ಪೆ ಮೀನುಗಾರಿಕಾ ಬಂದರಿನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಆಧುನೀಕರಣಕ್ಕೆ ಮೊದಲ...

ಕರಾವಳಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳಿಂದ ಮಾಹಿತಿ ಸಂಗ್ರಹ : ಸಚಿವ ಬಸವಂತಪ್ಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಂತೆ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ...

ಬಾಗಲಕೋಟೆ | ಕೆಲಸ ಮಾಡದೇ ಸಂಬಳ; ಶಾಸಕ ಮೇಟಿ ಸೊಸೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ

ಸರ್ಕಾರಿ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಬಾಗಲಕೋಟೆ ಕಾಂಗ್ರೆಸ್ ಶಾಸಕ ಉಮೇಶ್...