ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಅನಧಿಕೃತ ಜೆಪಿ ಅಕಾಡೆಮಿ : ಎ.ವಿ ವೆಂಕಟರಾಮ

Date:

ಚಿಂತಾಮಣಿ :ಚಿಂತಾಮಣಿ ನಗರದ ಅಂಜನಿ ಬಡಾವಣೆ ಪ್ರಭಾಕರ್ ಲೇಔಟ್ ಮೋರ್ ಸೂಪರ್ ಮಾರ್ಕೆಟ್ ಎದುರುಗಡೆ ಇರುವ ಎನ್‌ ಎನ್ ಕೆ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ಜೆಪಿ ಅಕಾಡೆಮಿ ಎಂಬ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಪಡೆಯದೆ ಶಿಕ್ಷಣ ಇಲಾಖೆಯ ವತಿಯಿಂದಲೂ ಅನುಮತಿ ಪಡೆಯದೆ ಪಿಯು ಕಾಲೇಜನ್ನು ನಡೆಸಲಾಗುತ್ತಿದೆ ಇದರ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಡಿ ಡಿ ಪಿ ಐ ರವರಿಗೆ ದೂರು ನೀಡಿದರು ಯಾವುದೇ ಕ್ರಮ ವಹಿಸದೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ ಎಂದು ಸಾಮಾಜಿಕ ಪರಿವರ್ತನಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎವಿ ವೆಂಕಟರಾಮ, ಜಿಲ್ಲಾ ಕಾರ್ಯದರ್ಶಿ ಮದುಲತಾ,ರೈತ ಸಂಘದ ತಾಲೂಕು ಅಧ್ಯಕ್ಷರಾದ ರವಿಪ್ರಕಾಶ್,ಟಿಪ್ಪು ಸೆಕ್ಯುಲರ್ ಸೇನೆಯ ಜಿಲ್ಲಾಧ್ಯಕ್ಷ ಮೊಹಿಯುದ್ದಿನ್ ಪಾಷಾ ರವರು ಗಂಭೀರ ಆರೋಪ ಮಾಡಿದರು.

ಇದನ್ನು ಓದಿದ್ದೀರಾ..? ಅರಹಳ್ಳಿ ಸೊಸೈಟಿ ಚುನಾವಣೆ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಪ್ರಚಾರಕ್ಕೆ ಚಾಲನೆ

- Advertisement -

ಇಂದು ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರುಗಳು ಈಗಾಗಲೇ ಪ್ರವೇಶ ದಾಖಲಾತಿ ಪ್ರಾರಂಭವಾಗಿದೆ ಎಂದು ನಿಯಮಗಳನ್ನು ಉಲ್ಲಂಸಿ ಜೆಪಿ ಅಕಾಡೆಮಿ ವಂಚನೆ ಮಾಡುತ್ತಿರುವ ಬಗ್ಗೆ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ರವರಿಗೆ ಮನವಿ ನೀಡಲಾಗಿದೆ.ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಹೇಳಿದವರು ನಾವು ಕಚೇರಿಯಲ್ಲಿ ಬಂದು ಖುದ್ದಾಗಿ ವಿಚಾರಿಸಲಾಗಿ ಅಕ್ರಮವಾಗಿ ನಡೆಸುತ್ತಿರುವ ಜೆಪಿ ಅಕಾಡೆಮಿ ಶಿಕ್ಷಣ ಸಂಸ್ಥೆಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಉಪ ನಿರ್ದೇಶಕರು ಹಾರಿಕೆಯ ಉತ್ತರ ನೀಡಿದ್ದಾರೆ.ಇವರ ನಡೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಉಂಟಾಗಿದೆ,ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮವಾಗಿ ಪಿಯು ಕಾಲೇಜು ಮತ್ತು JEE NEET ಕೋಚಿಂಗ್ ನಡೆಸುತ್ತಿರುವ ಚಿಂತಾಮಣಿ ಜೆಪಿ ಅಕಾಡೆಮಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಶೀಲಿಸಿ ವಂಚನೆ ನಡೆಯುತ್ತಿರುವ ಬಗ್ಗೆ ಹಾಗೂ ಶಿಕ್ಷಣ ವ್ಯಾಪಾರಿಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೈದಿಗಳ ಕುಟುಂಬದ ಕತೆ: ವೃದ್ಧಾಪ್ಯ ಎಂದರೆ ಭಯ, ಸಾಲ, ನಿರ್ಲಕ್ಷ್ಯದ ಬದುಕು

“ವಿಚಾರಣಾಧೀನ ಕೈದಿಗಳ ಕುಟುಂಬಗಳಲ್ಲಿರುವ ಹಿರಿಯ ನಾಗರಿಕರು” ಎಂಬ ವಿಷಯದ ಕುರಿತು ಬೆಂಗಳೂರು...

ಬಾಗಲಕೋಟೆ |6 ಪಟ್ಟಣ ಪಂಚಾಯಿತಿಗಳ ಮೇಲೆ ಲೋಕಾಯುಕ್ತ ದಾಳಿ

ಇ-ಸ್ವತ್ತು, ಎನ್‌ಓಸಿ, ಕಟ್ಟಡ ಪರವಾನಗಿ ಸೇರಿದಂತೆ ವಿವಿಧ ಅಕ್ರಮಗಳ ಆರೋಪ, 41...

ಕೋಲಾರ | ಅಬಕಾರಿ ಇಲಾಖೆಯ ಅಕ್ರಮಗಳ ತನಿಖೆಗೆ ಆಗ್ರಹ: ಕ್ರಮ ಕೈಗೊಳ್ಳದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ

ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅಕ್ರಮಗಳ ಕುರಿತು...