ಮಂಗಳೂರು | ನಿರುದ್ಯೋಗ, ಹಸಿವು, ಬಡತನವೇ ಮೋದಿ ಸರ್ಕಾರದ ಸಾಧನೆ: ರೈತ ಮುಖಂಡ ನವೀನ್ ಕುಮಾರ್

Date:

ನಿರುದ್ಯೋಗ, ಹಸಿವು, ಬಡತನವೇ ಮೋದಿ ಸರಕಾರದ ಸಾಧನೆ. ವಿದ್ಯಾರ್ಥಿ ಯುವಜನರ ಉದ್ಯೋಗ ಮತ್ತು ಶಿಕ್ಷಣದ ಬೇಡಿಕೆಗಳನ್ನು ಕಡೆಗಣಿಸುವ ಯಾವ ಸರ್ಕಾರವು ಉಳಿಯಲು ಸಾಧ್ಯವಿಲ್ಲ. ಮೋದಿ ಸರಕಾರ ಕಟ್ಟಿರುವ ಸುಳ್ಳು ಮತ್ತು ಭ್ರಮೆಗಳ ಗೋಪುರ ಕುಸಿಯುತ್ತಿದೆ. ಪೊಲೀಸ್ ಕ್ರಮಗಳಿಂದ ವಿದ್ಯಾರ್ಥಿ ಯುವಜನರ ಧ್ವನಿ ಮತ್ತು ಅವರ ಕನಸುಗಳನ್ನು ಭಗ್ನಗೊಳಿಸಲು ಸಾಧ್ಯವಾಗದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಎಚ್ ಆರ್ ನವೀನ್ ಕುಮಾರ್ ಹೇಳಿದರು.

- Advertisement -

ಭಾನುವಾರ ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ನಡೆದ ಡಿವೈಎಫ್‌ಐನ 14ನೇ ಮಂಗಳೂರು ನಗರ ಯುವಜನ ಸಮ್ಮೇಳನವನ್ನು ಉದ್ಘಾಟಿಸಿ ನವೀನ್ ಕುಮಾರ್ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಇದನ್ನೂ ಓದಿ: ಹಾಸನ | ಗಸ್ತು ಅರಣ್ಯ ಪಾಲಕ ನವೀನ್ ಕುಮಾರ್ ಹೃದಯಾಘಾತದಿಂದ ನಿಧನ

“ನಿರುದ್ಯೋಗ ಸಮಸ್ಯೆ ವಿರಾಟ ಸ್ವರೂಪ ಪಡೆದುಕೊಂಡಿದೆ ಇದರಿಂದಾಗಿ ಹಸಿವು, ಬಡತನದ ಪ್ರಮಾಣ ತಾರಕಕ್ಕೆ ಏರಿದೆ. ಯುವಜನರ ಭಾವನೆಗಳು ನಿರ್ಲಕ್ಷಿಸಲ್ಪಡುತ್ತಿದೆ ಮತ್ತು ಯುವಜನರನ್ನು ಜಾತಿ, ಧರ್ಮದ ಗಲಾಟೆಗೆ ದುರ್ಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ಯುವಜನರ ಹಕ್ಕುಗಳ ಪ್ರಾಪ್ತಿಗಾಗಿ ಯುವಜನ ಚಳವಳಿ ತೀವ್ರಗೊಳ್ಳಬೇಕು” ಆಗ್ರಹಿಸಿದರು.

naveen1

ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದು, “ಜಿಲ್ಲೆಯಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಅಪರಾಧಗಳನ್ನು ಧರ್ಮದ ಆಧಾರದಲ್ಲಿ ನೋಡಿ ಪ್ರತಿಕ್ರಿಯಿಸುವ ಮನೋಭಾವನೆಯನ್ನು ಸೋಲಿಸಬೇಕಿದೆ. ಸ್ವಧರ್ಮ ಜನರೊಳಗೆ ನೈತಿಕ ಪೊಲೀಸ್ ಗಿರಿ ಅಥವಾ ಸಂಘರ್ಷ ನಡೆದಾಗ ರಾಜಿ ಪಂಚಾಯತಿಕೆ ನಡೆಸುವ ಮನಸ್ಥಿತಿ ಅನ್ಯಕೋಮಿನ ಜನರೊಡನೆ ಸಂಘರ್ಷ ನಡೆದಾಗ ರಾಜಿ ಸೂತ್ರ ಯಾಕೆ ಫಲಿಸುವುದಿಲ್ಲ” ಎಂದು ಪ್ರಶ್ನಿಸಿದರು. ಹಾಗೆಯೇ ಜಿಲ್ಲೆಯಲ್ಲಿ ಕೋಮು ಪ್ರಚೋದಿತ ರಾಜಕಾರಣವನ್ನು ವಿಫಲಗೊಳಿಸಬೇಕು ಎಂದು ಹೇಳಿದರು.

naveen2

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರತಿನಿಧಿ ಅಧಿವೇಶನ ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಸಮಾರೋಪ ಭಾಷಣಗೈದರು. ಮಂಗಳೂರು ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಮುಖಂಡರಾದ ಆಜ್ಲಾನ್, ವಿನಾಯಕ ಉಪಸ್ಥಿತರಿದ್ದರು. ಡಿವೈಎಫ್‌ಐ ನೂತನ ಮಂಗಳೂರು ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಸ್ವಾಗತಿಸಿ, ನೂತನ ಜಿಲ್ಲಾ ಕೋಶಾಧಿಕಾರಿ ಮಾಧುರಿ ಬೋಳಾರ ಕಾರ್ಯಕ್ರಮ ನಿರೂಪಿಸಿದರು. ನೂತನ ಮಂಗಳೂರು ನಗರ ಡಿವೈಎಫ್‌ಐ ಅಧ್ಯಕ್ಷರಾಗಿ ವಕೀಲ ಚರಣ್ ಶೆಟ್ಟಿ ಪಂಜಿಮೊಗರು ಆಯ್ಕೆಯಾದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸರ್ಕಾರಿ ಜಮೀನುಗಳ ಸದ್ಬಳಕೆಗೆ ಪೀಸ್ ಆರ್ಗನೈಸೇಷನ್ ಆಗ್ರಹ

ಸರ್ಕಾರಿ ಜಮೀನುಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಸದುಪಯೋಗಪಡಿಸಿಕೊಂಡು, ಶಿಕ್ಷಣ ಹಾಗೂ ವಸತಿ...

ಶಿವಮೊಗ್ಗ | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಕರವೇ ಸಿಂಹ ಸೇನೆ ಆಗ್ರಹ

ರಾಜ್ಯದ 40 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ...

ಹಾಸನ | ಆರ್.ಡಿ ವೀರಪ್ಪ ಸಾವು ನಿರ್ಲಕ್ಷ್ಯ: ಡಿ. 3ರಂದು ಬೃಹತ್ ಹೋರಾಟ; ಎಸ್.ಪಿ ಕಛೇರಿ ಮುತ್ತಿಗೆ

ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಡಿ.3 ರಂದು ರಾಜನಹಳ್ಳಿಯಿಂದ ಹಾಸನ ಎಸ್.ಪಿ. ಕಚೇರಿಯವರೆಗೆ...