ಉತ್ತರ ಕನ್ನಡ | ಯಾವುದೇ ಧರ್ಮವು ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ: ರಿಯಾಝ್ ಅಹ್ಮದ್ ರೋಣ

Date:

ಧರ್ಮವು ಮನುಷ್ಯನಲ್ಲಿ ಪ್ರೀತಿಯ ಗುಣ ಬೆಳೆಸುತ್ತದೆ. ಅದೇ ವೇಳೆ ಅಧರ್ಮವು ಪರಸ್ಪರ ದ್ವೇಷಿಸುವಂತೆ ಮಾಡುತ್ತದೆ. ನಾವು ಎಲ್ಲ ಮನುಷ್ಯರನ್ನು ಪ್ರೀತಿಸುವವರಾಗಬೇಕು, ಇತರರನ್ನು ದ್ವೇಷಿಸುವವರಿಗೆ ಎಂದೂ ಪ್ರೀತಿ ಸಿಗಲಾರದು. ನಾವು ದ್ವೇಷವನ್ನು ದ್ವೇಷಿಸಬೇಕೇ ಹೊರತು ದ್ವೇಷ ಹರಡುವವರನ್ನಲ್ಲ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಇತ್ತೀಚಿಗೆ ಸ್ಥಳೀಯ ಜಾಮಿಯಾ ಮಸೀದಿ ನೂರ್ ಮೊಹಲ್ಲಾದಿಂದ ಹಮ್ಮಿಕೊಂಡಂತಹ ಸೌಹಾರ್ದ ಇಫ್ತಾರ್ ಕೂಟ ಉದ್ದೇಶಿಸಿ ಮಾತನಾಡಿದರು.

ಹೊನ್ನಾವರ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಕಿಣ್ಣಿ ಮಾತನಾಡಿ “ಯಾವ ಧರ್ಮವೂ ಕೂಡಾ ಕೆಟ್ಟ ಕಾರ್ಯವನ್ನು ಮಾಡಲು ಹೇಳುವುದಿಲ್ಲ. ಎಲ್ಲ ಧರ್ಮಗಳು ಸನ್ಮಾರ್ಗದ ಹಾದಿಯನ್ನೇ ತೋರಿಸುತ್ತವೆ. ಸರ್ವ ಧರ್ಮಗಳ ಸಾರ ಎಲ್ಲರಿಗೂ ತಲುಪುವಂತಾಗಬೇಕು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉಪನ್ಯಾಸಕ ಅಬ್ದುರ್‌ ರವೂಫ್ ಸವಣೂರ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಯೇಸು ಆರಾಧನೆ; ಸಾಮೂಹಿಕ ಪ್ರಾರ್ಥನೆ ಮೂಲಕ ಗುಡ್‌ ಫ್ರೈಡೇ ಆಚರಣೆ

ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದಿರ್ ಅಹ್ಮದ್ ಜಿ, ಜಮಾಅತೆ ಇಸ್ಲಾಮೀ ಹಿಂದ್ ಭಟ್ಕಳ ಸ್ಥಾನೀಯ ಅಧ್ಯಕ್ಷ ಮೌಲಾನಾ ಝುಬೇರ್ ಅಹ್ಮದ್ ನದ್ವಿ, ಮೌಲಾನಾ ಝಿಯಾವು‌ರ್‌ ರೆಹಮಾನ್‌ ನದ್ವಿ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌.ಡಿ ಪಾಟೀಲ್ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಉಮೇಶ್ ಜಾಧವ್ ಭೇಟಿ

ಪೊಲೀಸ್‌ ಅಧಿಕಾರಿ ಆಗಬೇಕೆಂಬ ರಾಜ್ಯದ ಯುವಜನರ ಭವಿಷ್ಯವನ್ನೇ ಹಾಳು ಮಾಡಿದ್ದ ಪಿಎಸ್‌ಐ...

ಗೈರು ಹಾಜರಾದ ಮತಗಟ್ಟೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ: ಬಿಬಿಎಂಪಿ ಮುಖ್ಯ ಆಯುಕ್ತ

ಲೋಕಸಭಾ ಚುನಾವಣೆ ಹಿನ್ನೆಲೆ, ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ...

ರಾಯಚೂರು | ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ ನಾಮಪತ್ರ ಸಲ್ಲಿಕೆ

ರಾಯಚೂರು-ಯಾದಗಿರಿ ಒಳಗೊಂಡ ರಾಯಚೂರು ಲೋಕಸಭಾ (ಪ.ಪಂ) ಕ್ಷೇತ್ರದ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ...

ಗದಗ | ತಾಲೂಕು ಆಡಳಿತದಿಂದ ‘ಮೇವು ಬ್ಯಾಂಕ್’ ಆರಂಭ; ಕೆ.ಜಿಗೆ 2 ರೂ. ದರ ನಿಗದಿ

ಕೊಣ್ಣೂರು : ಜಾನುವಾರುಗಳಿಗೆ ಮೇವು ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವು...