ಉತ್ತರ ಕನ್ನಡ | ತಹಶೀಲ್ದಾರ್‌ಗಳ ಹೆಗಲಿಗೆ ಉಪವಿಭಾಗಗಳ ಹೊಣೆ; ಖಾಯಂ ಅಧಿಕಾರಿಗಳ ಕೊರತೆಯಿಂದ ಅಭಿವೃದ್ಧಿಗೆ ಅಡ್ಡಿ

Date:

ಉತ್ತರ ಕನ್ನಡ ಜಿಲ್ಲೆಯ ಆಡಳಿತಕ್ಕೆ ಬೇಕಿದೆ ‘ಖಾಯಂ’ ಅಧಿಕಾರಿಗಳ ಭಾಗ್ಯ, ಒಂದು ಜಿಲ್ಲೆಯ ಅಭಿವೃದ್ಧಿಯ ರಥ ಸಾಗಬೇಕಾದರೆ ಅದರ ಆಡಳಿತಾತ್ಮಕ ಚಕ್ರಗಳು ಸುಸ್ಥಿತಿಯಲ್ಲಿರಬೇಕು. ಆದರೆ, ಪ್ರಕೃತಿ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಜಿಲ್ಲೆಯಲ್ಲಿ ಇಂದು ಆಡಳಿತ ಯಂತ್ರವೇ ಹಳಿ ತಪ್ಪಿದಂತಿದೆ.

- Advertisement -

ನಾಲ್ಕು ಪ್ರಮುಖ ಉಪವಿಭಾಗಗಳ ಪೈಕಿ ಮೂರು ವಿಭಾಗಗಳಾದ ಶಿರಸಿ, ಭಟ್ಕಳ, ಕಾರವಾರ ಉಪವಿಭಾಗ ಗಳು’ಪ್ರಭಾರ’ ಅಧಿಕಾರಿಗಳ ನಂಬಿಕೆಯಲ್ಲಿ ನಡೆಯುತ್ತಿರುವುದು ಜಿಲ್ಲೆಯ ದುರ್ದೈವವೇ ಸರಿ. ಕೇವಲ ಕುಮಟಾ ಉಪವಿಭಾಗದಲ್ಲಿ ಮಾತ್ರ ಖಾಯಂ ಉಪವಿಭಾಗಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಒಬ್ಬರೆ ಖಾಯಂ ಅಧಿಕಾರಿಗಳು ಇರುವುದನ್ನು ಗಮನಿಸಿದರೆ ಜಿಲ್ಲೆಯ ಆಡಳಿತಾತ್ಮಕ ಯಾವ ಸ್ಥಾನದಲ್ಲಿ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಉಪವಿಭಾಗಾಧಿಕಾರಿ (AC) ಎನ್ನುವ ಹುದ್ದೆ ಕೇವಲ ಕಚೇರಿಯ ಒಂದು ಕುರ್ಚಿಯಲ್ಲ ಅದು ಹತ್ತಾರು ಇಲಾಖೆಗಳ ಸಮನ್ವಯಕಾರ, ಸಾವಿರಾರು ರೈತರ ಕಂದಾಯ ಸಮಸ್ಯೆಗಳ ಪರಿಹಾರ ಮತ್ತು ಭೂ ಸ್ವಾಧೀನದಂತಹ ಸಂಕೀರ್ಣ ಪ್ರಕ್ರಿಯೆಗಳ ಬಗೆಹರಿಸುವ ಅಧಿಕಾರಿ ವಾಗಿದೆ.

ಕಾರವಾರ,ಮತ್ತು ಭಟ್ಕಳದಂತಹ ಪ್ರದೇಶಗಳಲ್ಲಿ ಒಂದೂವರೆ ವರ್ಷದಿಂದ ಖಾಯಂ ಅಧಿಕಾರಿಗಳಿಲ್ಲ ಶಿರಸಿಯಲ್ಲಿ ಇದ್ದ ಉಪವಿಭಾಗಾಧಿಕಾರಿ ಕೆ ಕಾವ್ಯ ರಾಣಿ ಅವರನ್ನು ಹುಣಸೂರು ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಅವರೇ ಹೆಚ್ಚುವರಿಯಾಗಿ ಭಟ್ಕಳ ಉಪವಿಭಾಗವನ್ನು ನೋಡಿಕೊಳ್ಳುತ್ತಿದ್ದರು ಆದರೆ ಅವರ ವರ್ಗಾವಣೆಯಿಂದ ಎರಡು ಉಪವಿಭಾಗಗಳು ಪ್ರಭಾರಿ ಅಧಿಕಾರಿಗಳಿಂದ ನಡೆಯಬೇಕಾದ ಸ್ಥೀತಿಗೆ ಬಂದಿದೆ.

ಪ್ರಸ್ತುತ ಜಿಲ್ಲೆಯ ಬೆಳವಣಿಗೆ ಗಮನಿಸಿದರೆ ಸರ್ಕಾರಕ್ಕೆ ಈ ಜಿಲ್ಲೆಯ ಬಗ್ಗೆ ಇರುವ ಕಾಳಜಿ ಎಷ್ಟೆಂಬುದು ಸ್ಪಷ್ಟವಾಗುತ್ತದೆ. ತಹಶೀಲ್ದಾರ್‌ಗಳಿಗೆ ಉಪವಿಭಾಗದ ಹೆಚ್ಚುವರಿ ಜವಾಬ್ದಾರಿ ನೀಡುವುದರಿಂದ ಅವರ ಮೂಲ ತಾಲ್ಲೂಕುಗಳ ಕೆಲಸಗಳೂ ಕುಂಠಿತಗೊಳ್ಳುತ್ತಿವೆ.

ಪರಿಣಾಮವಾಗಿ, ಸಾಮಾನ್ಯ ಜನರಿಗೆ ಸಿಗಬೇಕಾದ ತ್ವರಿತ ನ್ಯಾಯ ಮರೀಚಿಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಪ್ರತಿನಿಧಿಸುವ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ ಪ್ರಮುಖ ಉಪವಿಭಾಗಗಳಲ್ಲಿ ಅಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳ ನೇಮಕಾತಿಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಥವಾ ಜನಪ್ರತಿನಿಧಿಗಳ ನಡುವಿನ ಸಮನ್ವಯದ ಕೊರತೆಯು ಜಿಲ್ಲೆಯ ಅಭಿವೃದ್ಧಿಗೆ ಮುಳುವಾಗುತ್ತಿದೆ.

ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಕಾರವಾರ ಮತ್ತು ಹಳಿಯಾಳ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಜಿಲ್ಲಾದ್ಯಂತ ಆಯ್ಕೆ ಪ್ರಕ್ರಿಯೆ ಆರಂಭ

ಗಡಿ ಜಿಲ್ಲೆ ಎಂಬ ಕಾರಣಕ್ಕೆ ಅಧಿಕಾರಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಾದವು ಆಡಳಿತದ ಅಸಮರ್ಥತೆಯನ್ನು ಮುಚ್ಚಿಡುವ ನೆಪದಂತಿದೆ. ದಕ್ಷ ಅಧಿಕಾರಿಗಳನ್ನು ಕರೆತರುವುದು ಮತ್ತು ಅವರಿಗೆ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಕೇವಲ ಕಂದಾಯವಲ್ಲದೆ ಜಿಲ್ಲೆಯ ಶಿಕ್ಷಣ, ಆರೋಗ್ಯ ಮತ್ತು ಭೂವಿಜ್ಞಾನದಂತಹ ಹತ್ತು ಹಲವು ಇಲಾಖೆಗಳು ಜಿಲ್ಲಾ ಮಟ್ಟದ ಅಧಿಕಾರಿಗಳಿಲ್ಲದೆ ಪ್ರಭಾರಿ ಅಧಿಕಾರಿಗಳಿಂದ ನಡೆಯಬೇಕಾದ ಸ್ಥೀತಿಗೆ ಬಂದಿವೆ. ಸ್ಥಳೀಯ ಸಂಸ್ಥೆಗಳ ಆಡಳಿತ ಅವಧಿ ಮುಗಿದು ಅಲ್ಲಿಗೆ ಆಡಳಿತಾಧಿಕಾರಿಗಳ ಅನಿವಾರ್ಯತೆ ಇರುವಾಗ, ಅಧಿಕಾರಿಗಳ ಕೊರತೆಯು ನಗರ ಮತ್ತು ಪಟ್ಟಣಗಳ ಸ್ವಚ್ಛತೆ, ಅಭಿವೃದ್ಧಿ ಹಾಗೂ ಮೂಲಸೌಕರ್ಯಗಳ ಮೇಲೆ ನೇರ ಪೆಟ್ಟು ನೀಡುತ್ತಿದೆ.

ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ‘ಪ್ರಭಾರ’ ಎಂಬ ತಾತ್ಕಾಲಿಕ ವ್ಯವಸ್ಥೆಯಿಂದ ಹೊರಬಂದು, ಜಿಲ್ಲೆಯ ಆಡಳಿತ ಯಂತ್ರಕ್ಕೆ ಚೈತನ್ಯ ತುಂಬಲು ಖಾಯಂ ಅಧಿಕಾರಿಗಳನ್ನು ತಕ್ಷಣವೇ ನೇಮಿಸಬೇಕಿದೆ. ರಾಜಕೀಯ ಹಗ್ಗಜಗ್ಗಾಟಗಳು ಆಡಳಿತದ ಮೇಲೆ ಪರಿಣಾಮ ಬೀರಬಾರದು. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಹಾಗೂ ಸ್ಥಗಿತಗೊಂಡಿರುವ ಕೆಲಸಗಳಿಗೆ ಆಡಳಿತಾತ್ಮಕ ವೇಗ ತುಂಬಲು ಜಿಲ್ಲೆಯ ಉಪವಿಭಾಗಾಧಿಕಾರಿಗಳ ‘ಖಾಲಿ’ ಭಾಗ್ಯಕ್ಕೆ ಕೂಡಲೇ ವಿದಾಯ ಹೇಳಿ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಸರ್ಕಾರ ವಿಶೇಷ ಆಸಕ್ತಿ ತೋರಿಸಬೇಕಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ, SIR ನಿಲ್ಲಿಸಿ; ಸಿಪಿಐಎಂ-ಸಿಪಿಐ ಪ್ರತಿಭಟನೆ 

ತಪ್ಪಾಗಿ ಹೊರಗಿಡಲಾದವರ ಮತದಾನ ಹಕ್ಕುಗಳನ್ನು ಮರುಸ್ಥಾಪಿಸಿ. ಭಾರತ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು...

ರಾಯಚೂರು | ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ: ಅ.15ರಿಂದ ಜಂತರ ಮಂಥರ್‌ನಲ್ಲಿ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಘನತೆಗೆ ಧಕ್ಕೆ ಉಂಟುಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಾರಣರಾಗಿದ್ದಾರೆ...

ರಾಯಚೂರು | ಪೊತ್ನಾಳ ಗ್ರಂಥಾಲಯದಲ್ಲಿ ಮೂಲಸೌಕರ್ಯ ಕೊರತೆ: ಓದಲು ಬರುವ ವಿದ್ಯಾರ್ಥಿಗಳಿಗೆ ಪರದಾಟ

ಮಾನ್ವಿ ತಾಲ್ಲೂಕಿನ ಪೊತ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಯ ಮೈದಾನದಲ್ಲಿರುವ...

ಕಲಬುರಗಿ | ಪ್ರೀತಿಸಿದ ಯುವತಿಯನ್ನೇ ಮದುವೆಯಾಗಲು ಪಟ್ಟು: ಟವರ್ ಏರಿದ ಯುವಕ!

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು ಎಂದು ಪಟ್ಟು ಹಿಡಿದ ಯುವಕನೊಬ್ಬ, ಮದುವೆಗೆ...