ಉತ್ತರ ಕನ್ನಡ | ಡಿ. 1ರಿಂದ ಎಫ್‌ಎಫ್‌ಎಸ್ ಮೂಲಕ ರಸಗೊಬ್ಬರ ಮುಂಗಡ ಬುಕ್ಕಿಂಗ್ ಕಡ್ಡಾಯ

Date:

ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಮೊಬೈಲ್ ಮೂಲಕವೇ ಮುಂಗಡವಾಗಿ ಬುಕ್ಕಿಂಗ್‌ ಮಾಡಿ, ಖರೀದಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಫರ್ಟಿಲೈಸರ್ ಸೇಲ್ ಸಿಸ್ಟಮ್ (ಎಫ್‌ಎಫ್‌ಎಸ್) ಆ್ಯಪ್ ವ್ಯವಸ್ಥೆ ಡಿಸೆಂಬರ್ 1ರಿಂದ ಉತ್ತರ ಕನ್ನಡ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ.

- Advertisement -

ಈಗಾಗಲೇ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಹೊಸ ವ್ಯವಸ್ಥೆಯಡಿ ರೈತರು ತಾವು ಇರುವ ಸ್ಥಳದಿಂದಲೇ ಆ್ಯಂಡ್ರಾಯ್ಡ್ ಮೊಬೈಲ್ ಮೂಲಕ ಅಗತ್ಯವಿರುವ ರಸಗೊಬ್ಬರವನ್ನು ಎರಡು ದಿನಗಳ ಮುಂಚಿತವಾಗಿ ಕಾಯ್ದಿರಿಸಬಹುದು. ಬುಕ್ಕಿಂಗ್ ಮಾಡಿದ ಎರಡು ದಿನಗಳೊಳಗೆ ಆಯ್ಕೆ ಮಾಡಿಕೊಂಡ ರಸಗೊಬ್ಬರ ಮಾರಾಟ ಮಳಿಗೆ ಅಥವಾ ಸಹಕಾರ ಸಂಘಕ್ಕೆ ತೆರಳಿ ಕ್ಯೂಆರ್ ಕೋಡ್ ಅಥವಾ ಟೋಕನ್ ಸಂಖ್ಯೆಯನ್ನು ನೀಡಿ ಗೊಬ್ಬರ ಖರೀದಿಸಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ-...

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ 19 ನ್ಯಾಯಾಧಿಕರಣಗಳು ಸಾಲುಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕಾರ್ಯಭಾರ, ಕೆಂಪುಪಟ್ಟಿ ಆಡಳಿತದಿಂದ ನಿವೃತ್ತ ನ್ಯಾಯಮೂರ್ತಿಗಳ ರಾಜೀನಾಮೆ, ಸಿಬ್ಬಂದಿಯ ವೇತನ ವಿಳಂಬದ...

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

ಇದರಿಂದ ರೈತರ ಹೆಸರಿನಲ್ಲಿರುವ ಸಬ್ಸಿಡಿ ರಸಗೊಬ್ಬರವನ್ನು ಬೇರೆಯವರು ಖರೀದಿಸುವುದನ್ನು ತಡೆಯಲು ಹಾಗೂ ನಿಜವಾದ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ತಲುಪಿಸಲು ಸಹಕಾರಿಯಾಗಲಿದೆ. ಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ರೈತರು ಸರತಿ ಸಾಲಿನಲ್ಲಿ ಕಾಯುವುದನ್ನು ಕಡಿಮೆ ಮಾಡುವ ಉದ್ದೇಶವನ್ನೂ ಈ ವ್ಯವಸ್ಥೆ ಹೊಂದಿದೆ.

ಎಫ್‌ಐಡಿ ಹೊಂದಿರುವುದು ಕಡ್ಡಾಯ

ಎಫ್‌ಎಫ್‌ಎಸ್ ಆ್ಯಪ್ ಮೂಲಕ ರಸಗೊಬ್ಬರ ಕಾಯ್ದಿರಿಸಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಎಫ್‌ಐಡಿ ಹೊಂದಿರಬೇಕು. ಅಲ್ಲದೆ, ತಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಮತ್ತು ಹಿಸ್ಸಾಗಳ ಭೂ ಹಿಡುವಳಿ ವಿವರಗಳನ್ನು ಎಫ್‌ಐಡಿಗೆ ಸೇರಿಸಿರಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ಅದನ್ನು ಕೇಂದ್ರಿಯ ಎಫ್‌ಐಡಿಯೊಂದಿಗೆ ಸಂಯೋಜಿಸಿಕೊಳ್ಳಬೇಕು. ಈ ಪ್ರಕ್ರಿಯೆಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಬುಕ್ಕಿಂಗ್ ಮಾಡುವುದು ಹೇಗೆ?

ರೈತರು ಗೂಗಲ್ ಪ್ಲೇಸ್ಟೋರ್‌ನಿಂದ ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿರುವ ಅಧಿಕೃತ ‘Framework for Fertilizer Sale’ (FFS) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಎಫ್‌ಐಡಿ ಅಥವಾ ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಂಡು, ಜಮೀನಿನ ಸರ್ವೆ ನಂಬರ್ ಮತ್ತು ವಿಸ್ತೀರ್ಣದ ವಿವರಗಳನ್ನು ಪರಿಶೀಲಿಸಬೇಕು. ತಾವು ಬೆಳೆಯುವ ಬೆಳೆಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅಗತ್ಯವಿರುವ ರಸಗೊಬ್ಬರದ ಪ್ರಮಾಣವನ್ನು ನಮೂದಿಸಿ ಹತ್ತಿರದ ಗೊಬ್ಬರ ಮಾರಾಟ ಮಳಿಗೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಜಮೀನಿನ ವಿಸ್ತೀರ್ಣ ಮತ್ತು ಆಯ್ಕೆ ಮಾಡಿಕೊಂಡ ಬೆಳೆಗೆ ಅನುಗುಣವಾಗಿ ಕೃಷಿ ವಿಶ್ವವಿದ್ಯಾಲಯಗಳ ಶಿಫಾರಸ್ಸಿನ ಪ್ರಮಾಣದಂತೆ ರಸಗೊಬ್ಬರ ಕಾಯ್ದಿರಿಸಬಹುದು. ಬುಕ್ಕಿಂಗ್ ಪೂರ್ಣಗೊಂಡ ಬಳಿಕ ಕ್ಯೂಆರ್ ಕೋಡ್ ಅಥವಾ ಟೋಕನ್ ಸಂಖ್ಯೆ ದೊರೆಯುತ್ತದೆ. ಇದನ್ನು ಎರಡು ದಿನಗಳೊಳಗೆ ಆಯ್ಕೆ ಮಾಡಿಕೊಂಡ ಮಳಿಗೆಯಲ್ಲಿ ತೋರಿಸಿ, ಆಧಾರ್ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಗೊಬ್ಬರ ಖರೀದಿಸಬಹುದು.

ರೈತರಿಗೆ ಖುದ್ದಾಗಿ ಮಳಿಗೆಗೆ ಹೋಗಲು ಸಾಧ್ಯವಾಗದಿದ್ದರೆ, ತಮ್ಮ ಪರವಾಗಿ ಬೇರೊಬ್ಬ ವ್ಯಕ್ತಿಯ ಆಧಾರ್ ವಿವರಗಳನ್ನು ಆ್ಯಪ್‌ನಲ್ಲಿ ನಮೂದಿಸಿ ಗೊಬ್ಬರ ಖರೀದಿಸಲು ಕಳುಹಿಸಬಹುದು. ಗೊಬ್ಬರದ ಹಣವನ್ನು ಯುಪಿಐ ಅಥವಾ ನಗದು ಮೂಲಕ ಪಾವತಿಸಲು ಅವಕಾಶವಿದೆ.

ಸೇವಾ ಕೇಂದ್ರಗಳಲ್ಲೂ ನೆರವು

ರೈತರಿಗೆ ಆ್ಯಪ್ ಮೂಲಕ ಗೊಬ್ಬರ ಕಾಯ್ದಿರಿಸಲು ರಸಗೊಬ್ಬರ ಮಾರಾಟ ಮಳಿಗೆಗಳ ಮಾಲೀಕರು, ಸಹಕಾರ ಸಂಘಗಳು, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ) ಹಾಗೂ ಕೃಷಿ ಸಖಿಯರ ನೆರವು ಪಡೆಯಲು ಅವಕಾಶವಿದೆ. ಜಿಲ್ಲೆಯ ಅಧಿಕೃತ ಪರವಾನಗಿ ಹೊಂದಿರುವ ಖಾಸಗಿ ರಸಗೊಬ್ಬರ ಮಾರಾಟಗಾರರು, ಸಹಕಾರ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಸಿಬ್ಬಂದಿಗೆ ಈಗಾಗಲೇ ಆ್ಯಪ್ ಬಳಕೆಯ ಕುರಿತು ತರಬೇತಿ ನೀಡಲಾಗುತ್ತಿದೆ.

ಈ ವ್ಯವಸ್ಥೆಯಿಂದ ರೈತರ ಜಮೀನು ಮತ್ತು ಬೆಳೆ ಆಧಾರದ ಮೇಲೆ ರಸಗೊಬ್ಬರ ವಿತರಣೆ ಸಾಧ್ಯವಾಗಲಿದೆ. ಎಲ್ಲ ರೈತರಿಗೂ ಒಂದೇ ಪ್ರಮಾಣದ ಗೊಬ್ಬರದ ಮಿತಿ ಇರುವುದಿಲ್ಲ. ಬುಕ್ಕಿಂಗ್ ಮಾಡಿದ ಪ್ರಮಾಣ ಮತ್ತು ಖರೀದಿಸಿದ ಪ್ರಮಾಣವನ್ನು ಹೋಲಿಕೆ ಮಾಡುವುದಕ್ಕೂ ಅವಕಾಶವಿದ್ದು, ಸಬ್ಸಿಡಿ ರಸಗೊಬ್ಬರ ನಿಜವಾದ ರೈತರಿಗೆ ತಲುಪಲು ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಪಕ್ಷಗಳು ಸಹಕರಿಸಿ: ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ...

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ...

ಬೀದರ್‌ | ಪೋಷಣ ಅಭಿಯಾನ ಯೋಜನೆಯಡಿ 2 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣ ಅಭಿಯಾನ ಯೋಜನೆಯಡಿ ಹುಮನಾಬಾದ್...

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ- ಬೀಳುತ್ತ, ಏಳುತ್ತ, ಕುಂಟುತ್ತ, ತೆವಳುತ್ತ ಸಾಗಿವೆಯೇಕೆ?

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ...