ಮಾವು ತುಂಬಿದ್ದ ಲಾರಿ ಡಿಕ್ಕಿಯಾದ ಪರಿಣಾಮ ಟ್ಟ್ಯಾಕ್ಟರ್ ತುಂಡಾಗಿದ್ದು, ಐವರಿಗೆ ತೀವ್ರವಾಗಿ ಗಾಯಗಳಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಮಾವಿನಕಾಯಿ ತುಂಬಿದ್ದ ಲಾರಿ, ಕೃಷ್ಣಗಿರಿಯಿಂದ ಬೆಂಗಳೂರಿಗೆ ಹೊರಟಿತ್ತು. ಸಂಡೂರು ತಾಲೂಕಿನ ಕಾಳಿಂಗೇರಿಯಿಂದ ಭತ್ತದ ಮೂಟೆಗಳನ್ನು ಹೊತ್ತ ಟ್ರ್ಯಾಕ್ಟರ್ ಮರಿಯಮ್ಮನಹಳ್ಳಿ ರೈಸ್ ಮಿಲ್‌ಗೆ ತೆರಳುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಲಾರಿ ಚಾಲಕ ಫಯಾಜ್, ಟ್ರ್ಯಾಕ್ಟರ್ ಚಾಲಕ ಹುಲ್ಲೇಶ, ತಿಮ್ಮಲಾಪುರ ಗ್ರಾಮದ ಕೊತ್ಲಪ್ಪ, ಶಿವಪ್ಪ ಮತ್ತು ಬಾಲಕ ಯಶವಂತ್ ಎಂಬುವವರಿಗೆ ಗಾಯಳಾಗಿವೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕುಟುಂಬ ಕಲಹ: ಅತ್ತೆಗೆ ಚಾಕು ಹಾಕಿದ ಅಳಿಯ
ಗಾಯಾಳುಗಳಿಗೆ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




