ವಿಜಯಪುರ | ಕೌದಿ ಭಾರತದ ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಟ್ಟೆ: ರಂಗಕಲಾವಿದೆ ಬಿ ಜಯಶ್ರೀ

Date:

ಕೌದಿಯ ಸೌಂದರ್ಯ ಎಲ್ಲರಿಗೂ ಗೋಚರಿಸುತ್ತದೆ. ಆದರೆ, ಸೂಕ್ಷ್ಮ ಕಲಾ ಪ್ರಕಾರದ ಹಿಂದಿನ ಶ್ರಮ ಕಣ್ಣಿಗೆ ಕಾಣುವುದಿಲ್ಲ. ಕೌದಿ ಒಂದು ರೀತಿ ಭಾರತದ ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಟ್ಟೆಯಾಗಿದೆ ಎಂದು ರಂಗಕಲಾವಿದೆ ಬಿ ಜಯಶ್ರೀ ಹೇಳಿದರು.

- Advertisement -

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಗೀತಾಂಜಲಿ ಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ಹಾಗೂ ಸಬಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

“ಕಸೂತಿ ಕಲೆ, ಲಂಬಾಣಿ ಉಡುಪುಗಳ ವಿನ್ಯಾಸ, ಕೌದಿಯಲ್ಲಿರುವ ಸೂಕ್ಷ್ಮ ಕಲಾ ಪ್ರಕಾರಗಳ ಹಿಂದೆ ಮಹಿಳೆಯ ಶ್ರಮ ಅಡಗಿದೆ. ಸೂಕ್ಷ್ಮ ಕಲಾ ವಿನ್ಯಾಸವನ್ನು ಕಣ್ಣಲ್ಲಿ ಕಣ್ಣಿಟ್ಟು ಮಾಡಬೇಕಾಗುತ್ತದೆ. ಅದರ ಹಿಂದಿನ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಇಲ್ಲ” ಎಂದರು.

“ಕಷ್ಟ-ಕಾರ್ಪಣ್ಯಗಳು ಬದುಕಿನಲ್ಲಿ ಎದುರಾಗುವುದು ಸಹಜ. ಆದರೆ, ಅದನ್ನು ಮೆಟ್ಟಿ ನಿಲ್ಲಬೇಕು, ಸಾಧನೆಯ ಹಿಂದೆ ನೋವಿನ ಕಥೆ ಇದ್ದೇ ಇರುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಉತ್ತಮ ಶಿಕ್ಷಣವನ್ನು ಕೊಡಿಸಬೇಕು” ಎಂದು ಹೇಳಿದರು.

ಸಕಲ ಸಂಸ್ಥೆಯ ಅಧ್ಯಕ್ಷ ಮಲ್ಲಮ್ಮ ಯಳವಾರ ಮಾತನಾಡಿ, “ಸಬಲ ಸಂಸ್ಥೆ ಮಹಿಳೆಯರ ಸಬಲೀಕರಣಕ್ಕಾಗಿ ಕಳೆದ 37 ವರ್ಷಗಳಿಂದ ಶ್ರಮಿಸುತ್ತದೆ. ಅದರ ಅಡಿಯಲ್ಲಿ ಆರಂಭವಾದ ಗೀತಾಂಜಲಿ ಶಾಲೆ ಕಳೆದ 25 ವರ್ಷಗಳಿಂದ ವಿದ್ಯಾರ್ಜನೆ ಕಾರ್ಯ ಮಾಡುತ್ತದೆ” ಎಂದರು.

“ಸಬಲ ಸಂಸ್ಥೆಯ ಸಹೋದರ ಸಂಸ್ಥೆಯಾಗಿರುವ ಚೈತನ್ಯ ಮಹಿಳಾ ಬ್ಯಾಂಕ್ 25ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಸಾಧಕ ಮಹಿಳೆಯನ್ನು ಗುರುತಿಸಿ ಪ್ರತಿ ವರ್ಷ ಸಬಲ ಪುರಸ್ಕಾರ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಈ ಪರಂಪರೆ ಮುಂದೆಯೂ ನಡೆಯಲಿ ಎಂಬ ಅಭಿಲಾಶೆಯೊಂದಿಗೆ ಈ ಕಾರ್ಯಕ್ಕಾಗಿ ₹8 ಲಕ್ಷ ಠೇವಣಿ ಇರಿಸಿ ಅದರ ಲಾಭಾಂಶದಲ್ಲಿ ಪ್ರಶಸ್ತಿಯ ನಗದು ಪುರಸ್ಕಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.‌

ಈ ಸುದ್ದಿ ಓದಿದ್ದೀರಾ? ನಮಗೆ ಗೌರವ ಇದೆ, ಕೂಲಿಗೆ ಕನಿಷ್ಠ ವೇತನ ಕೊಡಿ; ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

ಈ ಸಂದರ್ಭದಲ್ಲಿ ಸಬಲ ಸಂಸ್ಥೆಯಿಂದ ರಾಯಚೂರು ಜಿಲ್ಲೆಯ ಪೊಟ್ನಾಳ್ ಗ್ರಾಮದ ಚಿನ್ನಮ್ಮ ಮುದ್ದೇನಗುಡಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಮುಗಳಿ ಗ್ರಾಮದ ಜಾನಪದ ಕಲಾವಿದ ಎಸ್ ಎಸ್ ಸಿ ಲಕ್ಷ್ಮೀದೇವಮ್ಮ ಅವರಿಗೆ ಸಬಲ ಪುರಸ್ಕಾರ ನೀಡಿ ಗೌರವಿಸಿದರು.

ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ, ಆ‌ರ್ ಸುನಂದಮ್ಮ, ವೈದ್ಯ ಡಾ.ಮಯೂರ್ ಕಾಕು, ವಿಶ್ರಾಂತ ಸಿಪಿಐ ಬಾಗೇವಾಡಿ, ಚೈತನ್ಯ ಬ್ಯಾಂಕ್, ಸಬಲಾ ಸಂಸ್ಥೆ ಹಾಗೂ ಗೀತಾಂಜಲಿ ಶಾಲೆಯ ಸಿಬ್ಬಂದಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಬರ ಘೋಷಣೆ ರೈತರಿಗೆ ಮಾಡಿದ ಅವಮಾನ: ಚನ್ನರಾಯಪ್ಪ ಟೀಕೆ

ರಾಜ್ಯ ಸರ್ಕಾರ ಬರ ಪರಿಸ್ಥಿತಿಯಲ್ಲಿ ರೈತರಿಗೆ ₹2,500 ಆರ್ಥಿಕ ನೆರವು ನೀಡಲು...

ಧಾರವಾಡ | ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ: ಡಾ. ರಾಘವೇಂದ್ರ ಪಾಟೀಲ

"ಭಾರತದ ಸಂವಿಧಾನ ಜನರ ಅಶೋತ್ತರಗಳನ್ನು ಪ್ರತಿ ಬಿಂಬಿಸುವ ಕೃತಿಯಾಗಿದೆ. ಭಾರತದ ಸಂವಿಧಾನ...

ಹಾವೇರಿ | ಬೆಟಗೇರಿ ಕೃಷ್ಣಶರ್ಮ, ವಿ.ಕೃ. ಗೋಕಾಕರು ಕನ್ನಡ ವಿವೇಕ ಕಟ್ಟಿದವರು: ಕವಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

ಬೆಟಗೇರಿ ಕೃಷ್ಣಶರ್ಮ ಮತ್ತು ವಿ.ಕೃ. ಗೋಕಾಕರು ತಮ್ಮ ಬರವಣಿಗೆಯಲ್ಲಿ ನೆಲದ ಸಂವೇದನೆಗಳ...

ಸಿಂದಗಿ | ರಾಮಾನಂದ ತೀರ್ಥರ ಜನ್ಮದಿನದೊಳಗೆ ವೀರಸೌಧ ಅಭಿವೃದ್ಧಿಗೆ ಕ್ರಮ

ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್...