ಬಬಲೇಶ್ವರದ ಪ್ರೀತಿ–ವಿಶ್ವಾಸದ ಋಣ, ಅಭಿವೃದ್ಧಿಯಿಂದ ತೀರಿಸುವೆ: ಎಂ.ಬಿ ಪಾಟೀಲ

Date:

ಬಬಲೇಶ್ವರದ ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನದ ಋಣವನ್ನು ನಿರಂತರ ಅಭಿವೃದ್ಧಿ ಕಾರ್ಯಗಳ ಮೂಲಕ ತೀರಿಸುವುದರ ಜೊತೆಗೆ, ಇಲ್ಲಿನ ಮಠಮಾನ್ಯಗಳ ಬೆನ್ನೆಲುಬಾಗಿ ಸದಾ ನಿಲ್ಲುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

- Advertisement -

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಸಂಸ್ಥಾನ ಬೃಹನ್ಮಠದಲ್ಲಿ ನಡೆದ ಡಾ. ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ, ತುಲಾಭಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಇದೊಂದು ಐತಿಹಾಸಿಕ ಕ್ಷಣ. ಶ್ರದ್ಧೆ, ಭಕ್ತಿ ಹಾಗೂ ವೈಭವದಿಂದ ಸ್ಥಳೀಯರು ಒಂದು ತಿಂಗಳಿನಿಂದ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಮಠದ ಬಗ್ಗೆ ಬಬಲೇಶ್ವರದ ಜನತೆಗೆ ಅಪಾರ ಭಕ್ತಿ ಇದೆ. ತಮ್ಮ ತಂದೆಯವರ ಕಾಲದಿಂದಲೂ ಬಬಲೇಶ್ವರದ ಜನರು ತಮ್ಮ ಕುಟುಂಬದ ಮೇಲೆ ಪ್ರೀತಿ, ಅಭಿಮಾನ ತೋರುತ್ತ ಬಂದಿದ್ದಾರೆ ಎಂದು ಎಂ.ಬಿ. ಪಾಟೀಲ ಸ್ಮರಿಸಿದರು.

ಗುರುಪಾದೇಶ್ವರರಿಂದ ಸ್ಥಾಪನೆಯಾದ ಬಬಲೇಶ್ವರ ಮಠಕ್ಕೆ ದೊಡ್ಡ ಹಿನ್ನೆಲೆ ಇದೆ. ಶಾಂತವೀರ ಶ್ರೀಗಳ ಕಾಲದಲ್ಲಿ ಈ ಮಠ ರಾಜ್ಯಾದ್ಯಂತ ಹೆಸರಾಯಿತು. ಇದೀಗ ಹಾನಗಲ್ ಕುಮಾರಸ್ವಾಮಿಗಳ ನೆಲದಿಂದ ಕಿರಿಯ ಶ್ರೀಗಳಾಗಿ ಮಲ್ಲಿಕಾರ್ಜುನ ದೇವರು ಬಬಲೇಶ್ವರಕ್ಕೆ ಆಗಮಿಸಿರುವುದು ಸಂತಸದ ಸಂಗತಿ ಎಂದರು.

ತಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರು ಹಾನಗಲ್ ಶ್ರೀಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ವೀರಶೈವ ಲಿಂಗಾಯತ ಮಹಾಸಭೆಯ ಸ್ಥಾಪನೆಗೂ ಈ ಬಾಂಧವ್ಯ ಕಾರಣವಾಗಿತ್ತು ಎಂದು ಅವರು ನೆನಪಿಸಿಕೊಂಡರು.

ದಾಸೋಹಕ್ಕೆ ₹10 ಲಕ್ಷ ನೆರವು

ಮಠದಲ್ಲಿ ನಿರಂತರ ದಾಸೋಹ ನಡೆಯಲು ₹10 ಲಕ್ಷ ನೀಡುವುದಾಗಿ ಸಚಿವ ಎಂ.ಬಿ. ಪಾಟೀಲ ಘೋಷಿಸಿದರು. ಎಲ್ಲರೂ ತಮಗಾದ ಸಹಾಯ ನೀಡುವ ಮೂಲಕ ದಾಸೋಹದ ಪರಂಪರೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು.

ಸಾಹಿತಿ ಶಂ. ಗು. ಬಿರಾದಾರ ರಚಿಸಿರುವ ಹಾಗೂ ಮರುಮುದ್ರಣಗೊಂಡ ‘ಬಬಲೇಶ್ವರ ಬೆಳಕು’ ಕೃತಿಯನ್ನು ಸಚಿವ ಎಂ.ಬಿ. ಪಾಟೀಲ ಹಾಗೂ ವೇದಿಕೆಯಲ್ಲಿದ್ದ ಶ್ರೀಗಳು ಬಿಡುಗಡೆ ಮಾಡಿದರು. ಬೃಹನ್ಮಠ ಹಾಗೂ ಕ್ಷೇತ್ರಕ್ಕೆ, ನಾಡಿಗೆ ಸಚಿವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ವತಿಯಿಂದ ಅವರಿಗೆ ಗೌರವ ಸಮರ್ಪಿಸಿ ಅಭಿನಂದನಾ ಪತ್ರ ನೀಡಲಾಯಿತು.

ಮರೇಗುದ್ದಿಯ ನಿರುಪಾಧೀಶ್ವರ ಸ್ವಾಮೀಜಿ, ಹಾವೇರಿಯ ಸದಾಶಿವ,ಹಿರೇಪಡಸಲಗಿಯ ಸಿದ್ಧಲಿಂಗ,ಚಿಕ್ಕಪಡಸಲಗಿಯ ಅಭಿನವ ಸಿದ್ದಲಿಂಗ,ಕಾಖಂಡಕಿಯ ಶಿವಯೋಗಿ,ಬುರಾಣಪುರದ ಸಿದ್ಧಾರೂಢ ಮಠದ ಯೋಗೇಶ್ವರಿ,ಮನಗೂಳಿಯ ಸಂಗನಬಸವ,ಎರಡೆತ್ತಿನಮಠದ ಸಿದ್ದಲಿಂಗ ಮಹಾಸ್ವಾಮಿ,ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯರು, ಚಿಪ್ಪಲಕಟ್ಟಿಯ ಅಭಿನವ ಸಿದ್ದಲಿಂಗ,ಶಿವಾನಂದ ಶಿವಾಚಾರ್ಯರು, ಬಸವಕಲ್ಯಾಣ ಹಾಗೂ ದಾನಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮುಖಂಡರಾದ ವಿ.ಎನ್. ಬಿರಾದಾರ, ಆರ್.ಜಿ. ಯರನಾಳ, ವಿ.ಎಸ್. ಪಾಟೀಲ, ವಿಜಯಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಬಿ.ಎಸ್. ಬಿರಾದಾರ, ಶಾಂತವೀರ ಕೊಕಟನೂರ, ಧರ್ಮರಾಜ ಬೀಳೂರು, ಬೋರಮ್ಮ ಬೀಳೂರು ಹಾಗೂ ಗ್ರಂಥ ದಾಸೋಹಿಗಳಾದ ಸಂತೋಷಕುಮಾರ ಅಡಿಹುಡಿ ದಂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲೈಂಗಿಕ ಹಗರಣದ ಆರೋಪಿಗಳಿಗೆ ಸ್ಥಾನಮಾನ; ನಗೆಪಾಟಲಿಗೀಡಾದ ಮೋದಿಯ ʼಬೇಟಿ ಬಚಾವೋʼ ಘೋಷಣೆ

ಅಮೆರಿಕದ ಕುಖ್ಯಾತ ಲೈಂಗಿಕ ಹಗರಣದ ಅಪರಾಧಿ ಎಪ್ಸ್ಟೀನ್‌ ಜೊತೆಗೆ ಸಂಪರ್ಕದಲ್ಲಿದ್ದ ಕೇಂದ್ರ...

ಉತ್ತರ ಕನ್ನಡ | ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾಗಿ ಗಣೇಶ ಮೊಗೇರ ನೇಮಕ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉತ್ತರ ಕನ್ನಡ ಜಿಲ್ಲಾ ಸಂಚಾಲಕರಾಗಿ ಭಟ್ಕಳ...