ಚಿಂತಾಮಣಿ | ನಳಂದ ವಿದ್ಯಾ ಮಂದಿರದಲ್ಲಿ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಯಶಸ್ವಿ

Date:

ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಎಂದು ಅಧಿಕ ಸಿವಿಲ್ ಮತ್ತು ಜೆ ಎಂಎಫ್ ಸಿ ನ್ಯಾಯಾಧೀಶೆ ಹರ್ಷಿತ ಅಭಿಪ್ರಾಯಪಟ್ಟರು.

- Advertisement -

ಚಿಂತಾಮಣಿ ನಗರದ ನಳಂದ ವಿದ್ಯಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸುರಕ್ಷಿತ್ ಬಚ್ ಪನ್ ಅಭಿಯಾನದಡಿಯಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧಿಕ ಸಿವಿಲ್ ಮತ್ತು ಜೆ ಎಂಎಫ್ ಸಿ ನ್ಯಾಯಾಧೀಶೆ ಹರ್ಷಿತ ಪೋಕ್ಸೋ ಕಾಯ್ದೆ 2012 ರಲ್ಲಿ ಜಾರಿಗೆ ಬಂದಿರುತ್ತದೆ.ಇದರ ಸಂಕ್ಷಿಪ್ತ ರೂಪವೇ ಪೋಕ್ಸೋ ಆಕ್ಟ್. ಈಗ ಪ್ರಾಯೋಗಿಕವಾಗಿ 18 ವರ್ಷಕ್ಕಿಂತ ಒಳಗಡೆ ಇರುವವರು ಈ ಕಾಯ್ದೆಯು ಮಗು ಎಂದೇ ಪರಿಗಣಿಸುತ್ತದೆ. ಸಾಮಾನ್ಯವಾಗಿ 12 ವರ್ಷಕ್ಕಿಂತ ಕೆಳಗಿನವರನ್ನು ಮಕ್ಕಳು ಎಂದು ಕರೆಯುತ್ತೇವೆ.ಆದರೆ ಈ ಕಾಯ್ದೆಯ ಪ್ರಕಾರ 18 ವರ್ಷಕ್ಕಿಂತ ಕೆಳಗಿರುವ ಎಲ್ಲರನ್ನೂ ಮಕ್ಕಳಂತೆಯೇ ಪರಿಗಣಿಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ಈ ಕಾಯ್ದೆಯ ಉದ್ದೇಶ ಮಕ್ಕಳು ಅಂದರೆ ಹುಡುಗ ಅಥವಾ ಹುಡುಗಿಯರಾಗಲಿ,ಯಾವುದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಾಗ,ಈ ಕಾಯ್ದೆಯ ಅಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ದಂಡನೆ ವಿಧಿಸಲಾಗುತ್ತದೆ.

ನಿಮಗೆ ಈ ರೀತಿಯ ತೊಂದರೆಗಳು,ಅಂದರೆ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳ ತರಹದ್ದು ಏನಾದರೂ ಎದುರಾದರೆ,ನೀವು ತಕ್ಷಣ ನಿಮ್ಮ ಶಿಕ್ಷಕರಿಗೆ ಅಥವಾ ಸಂಬಂಧಪಟ್ಟವರಿಗೆ ತಿಳಿಸಬಹುದು.ಆಗ ಅದನ್ನು ಈ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ತಂದು,ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಶಶಿಕ್ಷೆ ನೀಡಲಾಗುತ್ತದೆ.

ಆ ಶಿಕ್ಷೆಯ ಬಗ್ಗೆ,ಕಾಯ್ದೆಯ ಪ್ರಕ್ರಿಯೆ ಮತ್ತು ಶಿಕ್ಷೆಯ ಪ್ರಮಾಣಗಳ ಬಗ್ಗೆ,ಹಾಗೂ ಇದನ್ನು ನೀವು ಹೇಗೆ ರಕ್ಷಣೆಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.

ನಂತರ ಮಾತನಾಡಿದ 2ನೇ ಅಪರ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಸುಹಾಸ್ ಕೆ ಸಿ ಅವರು 18 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬಗ್ಗೆ ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಆನ್‌ಲೈನ್ ಮೂಲಕ ಅಥವಾ ಬೇರೆ ಯಾವುದೇ ರೀತಿ ಲೈಂಗಿಕವಾಗಿ ಕಂಡು ಬಂದರೆ ಮಕ್ಕಳು ತಮ್ಮ ಪೋಷಕರನ್ನು ತಿಳಿಸಿ ನಂತರ ಪೊಲೀಸ್ ಠಾಣೆಗಳಲ್ಲಿ ದೂರಗಳನ್ನು ಸಲ್ಲಿಸಬಹುದು ಎಂದರು.

ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್

ನಂತರ ಸಂಪನ್ಮೂಲ ಉಪನ್ಯಾಸಕರಾಗಿ ಪ್ಯಾನಲ್ ವಕೀಲರು ವಿಜಯ್ ಪೋಕ್ಸೋ ಕಾಯ್ದೆ ಕುರಿತಾಗಿ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ , ನಳಂದ ವಿದ್ಯಾ ಮಂದಿರ ಮುಖ್ಯ ಶಿಕ್ಷಕ್ಷಿ ಡಿ ಎನ್ ನಾಗರತ್ನಮ್ಮ,ವಕೀಲರ ಸಂಘದ ಅಧ್ಯಕ್ಷರಾದ ಮಂಜುನಾಥ್ ರೆಡ್ಡಿ,ನಳಂದ ಶಾಲೆಯ ಕಾರ್ಯದರ್ಶಿ ಶಿವಪ್ರಕಾಶ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಕೀಲರಾದ ಶ್ರೀನಿವಾಸ್,ರಮೇಶ್,ಸೇರಿದಂತೆ ಶಾಲೆಯ ಶಿಕ್ಷಕಿ ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಮಹಿಳಾ ಶಕ್ತಿಯ ಅನಾವರಣ: ಮಂಡ್ಯ ಜಿಲ್ಲಾ ಪಂಚಾಯತ್ ಸ್ತಬ್ಧಚಿತ್ರಕ್ಕೆ ಈಶ್ವರ ಖಂಡ್ರೆ ಮೆಚ್ಚುಗೆ

ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಗಳಿಸುವುದರ ಜೊತೆಗೆ ಪ್ರಥಮ ಬಹುಮಾನ ಪಡೆದ...

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಶುಗರ್ ಸಕ್ಕರೆ ಗೋದಾಮಿಗೆ ರೈತರ ಮುತ್ತಿಗೆ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ...

ಕಬ್ಬು ಬೆಳೆಗಾರರ ರಕ್ಷಣೆಗೆ ಪ್ರತ್ಯೇಕ ವಿಮೆ, ನ್ಯಾಯಯುತ ಬೆಲೆ ಸೇರಿದಂತೆ 12 ಬೇಡಿಕೆ

ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹6,000 ಕನಿಷ್ಠ...