ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 7ನೇ ವಾರ್ಡ್ ಸದಸ್ಯೆ ಲಲಿತಾ ಗೊರಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಅಮರವಾದಗಿ, ಉಪತಹಶೀಲ್ದಾರ್ ನಿಂಗಪ್ಪ ದೊರೆ ಹಾಗೂ ಕಂದಾಯ ನಿರೀಕ್ಷಕ ವೆಂಕಟೇಶ್ವರ ಅಂಬಿಗೇರ ನಡೆಸಿಕೊಟ್ಟರು.
ಮೊದಲ ಅವಧಿಯ ಅಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮಿ ಇಳಕಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಗೊರಬಾಳ ಅವರ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವರು ಅವಿರೋಧವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಪೃಥ್ವಿರಾಜ್ ನಾಡಗೌಡ ಮಾತನಾಡಿ, “ಮೊದಲ ಅವಧಿಯ ಅಧ್ಯಕ್ಷ ಸ್ಥಾನ ಹಂಚಿಕೆ ಕುರಿತು ಪೂರ್ವ ನಿರ್ಧರಿತ ಹೊಂದಾಣಿಕೆ ಹಾಗೂ ಶಾಸಕರ ಸೂಚನೆಯಂತೆ ಲಲಿತಾ ಗೊರಬಾಳ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದರು.
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲಲಿತಾ ಗೊರಬಾಳ ಅವರನ್ನು ಪಕ್ಷದ ಮುಖಂಡರು, ಸದಸ್ಯರು ಹಾಗೂ ಬೆಂಬಲಿಗರು ಸನ್ಮಾನಿಸಿ ಅಭಿನಂದಿಸಿದರು. ಹೊಸ ಅಧ್ಯಕ್ಷೆಯ ನೇತೃತ್ವದಲ್ಲಿ ಪಟ್ಟಣದ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುವ ನಿರೀಕ್ಷೆ ಅಭಿವ್ಯಕ್ತವಾಗಿದೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಜೀವದ ಹಂಗು ತೊರೆದು ದುಡಿಯುವ ದಾದಿಯರಿಗೆ ನಮನ: ಆರೋಗ್ಯಾಧಿಕಾರಿ ಎನ್ ಮಹೇಶ್
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ, ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಇಳಕಲ್, ಮಾಜಿ ಸದಸ್ಯ ಪೃಥ್ವಿರಾಜ್ ನಾಡಗೌಡ, ಉಪಾಧ್ಯಕ್ಷ ಬಸವರಾಜ ಗಂಗನಗೌಡ, ಸದಸ್ಯರು ಜಗದೀಶ ಡರೇದ, ಶರಣಬಸಪ್ಪ ಗಂಗನಗೌಡ, ರಾಜಾಬಿ ನಡದಾಳ, ರಮೇಶ ಶಂಕ್ರಪ್ಪ ಆಲಕೊಪ್ಪರ, ಶಿವಪುತ್ರಪ್ಪ ಸಂಗಪ್ಪ ಗುರಿಕಾರ, ಯಮನಪ್ಪ ಬಂದಿವಡ್ಡರ, ಬಸಿರಾಬೇಗಮ್ ಮೂಲಿಮನಿ, ಸಂಗಪ್ಪ ಬಾರಡ್ಡಿ, ತಿರುಪತಿ ಕ್ಷೇತ್ರಿ, ಅಂಬ್ರಪ್ಪ ಶಿರಿ, ಆಡಳಿತ ಅಧಿಕಾರಿ ಸಚಿನ್ ಗೌಡರ ಹಾಗೂ ಚುನಾವಣಾ ಸಿಬ್ಬಂದಿ ಈ ಸಂದರ್ಭದಲ್ಲಿ ಇದ್ದರು.




