ತಾಳಿಕೋಟೆ | ಬರ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ತಾಳಿಕೋಟೆಯಲ್ಲಿ ಬೃಹತ್ ‘ರಸ್ತೆ ರೋಕೋ’

Date:

ಬರದ ತೀವ್ರತೆಗೆ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿ ತಾಳಿಕೋಟೆಯಲ್ಲಿ ರೈತ ಹೋರಾಟದ ಕಹಳೆ ಮೊಳಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಗಸ್ಟ್ 10ರಂದು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ 4ರಿಂದ 5 ಸಾವಿರಕ್ಕೂ ಅಧಿಕ ರೈತರು ಬೃಹತ್ ‘ರಸ್ತೆ ರೋಕೋ’ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

- Advertisement -

ಈ ಹಿನ್ನೆಲೆಯಲ್ಲಿ ತಾಳಿಕೋಟೆಯ ಅತಿಥಿಗೃಹದಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲಾಯಿತು. ಸಭೆಯಲ್ಲಿ ಸರ್ಕಾರದ ನಿರ್ಲಕ್ಷ್ಯದ ಧೋರಣೆ ವಿರುದ್ಧ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಬರದಿಂದ ರೈತರು ತತ್ತರಿಸುತ್ತಿದ್ದರೂ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರಾಜಕೀಯ ಬೆಳವಣಿಗೆಗಳಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ರೈತರ ನೋವು, ಸಂಕಷ್ಟ ಕಾಣದ ದಪ್ಪಚರ್ಮದ ಸರ್ಕಾರ ಇದಾಗಿದೆ. ಅನ್ನದಾತನ ಬದುಕು ಉಳಿಸಲು ಸರ್ಕಾರ ಕೂಡಲೇ ಬರ ಪರಿಹಾರ ಘೋಷಿಸಬೇಕು. ರೈತರ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಮುದ್ದೇಬಿಹಾಳ, ದೇವರಹಿಪ್ಪರಗಿ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

‘ಸರ್ಕಾರದ ಕಣ್ಣು ತೆರೆಸಲು ರೈತರು ಬೀದಿಗಿಳಿಯಬೇಕು’

ಮಾಜಿ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದ ಅವಧಿಯಲ್ಲಿ ಪ್ರವಾಹ ಹಾಗೂ ನೈಸರ್ಗಿಕ ವಿಕೋಪ ಸಂಭವಿಸಿದಾಗ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಿ ಪರಿಹಾರ ಒದಗಿಸುತ್ತಿತ್ತು. ಆದರೆ ಇಂದಿನ ಸರ್ಕಾರ ರೈತರ ಸಂಕಷ್ಟವನ್ನು ಕಡೆಗಣಿಸುತ್ತಿದೆ ಎಂದು ದೂರಿದರು.

ಸರ್ಕಾರದ ಕಣ್ಣು ತೆರೆಸಬೇಕಾದರೆ ರೈತರು ಒಗ್ಗಟ್ಟಾಗಿ ಬೀದಿಗಿಳಿಯಬೇಕು. ತಾಲೂಕಿನ ಪ್ರತಿಯೊಂದು ಹೋಬಳಿಯಿಂದಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರೈತರ ಪ್ರಮುಖ ಬೇಡಿಕೆಗಳು:

  • ವಿಜಯಪುರ ಜಿಲ್ಲೆ ಹಾಗೂ ತಾಳಿಕೋಟಿ ತಾಲೂಕನ್ನು ಕೂಡಲೇ ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.
  • ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು.
  • ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ತುರ್ತು ಹಾಗೂ ಶಾಶ್ವತ ಕ್ರಮ ಕೈಗೊಳ್ಳಬೇಕು.
  • ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ನೀಡಿ ರೈತರ ಗುಳೆ ತಪ್ಪಿಸಬೇಕು.
  • ಪ್ರತಿ ಎಕರೆಗೆ ₹50 ಸಾವಿರದಂತೆ ನೇರ ಬರ ಪರಿಹಾರ ಧನವನ್ನು ರೈತರ ಖಾತೆಗೆ ತಕ್ಷಣ ಜಮೆ ಮಾಡಬೇಕು.

ಸರ್ಕಾರಕ್ಕೆ ‘ಎಚ್ಚರಿಕೆಯ ಗಂಟೆ’?

ಸೋಮವಾರ ನಡೆಯಲಿರುವ ರಸ್ತೆ ರೋಕೋ ಪ್ರತಿಭಟನೆ ಕೇವಲ ಪ್ರತಿಭಟನೆಯಲ್ಲ, ಬರದಿಂದ ನಲುಗಿರುವ ಅನ್ನದಾತರ ಆಕ್ರೋಶದ ಪ್ರತಿರೂಪವಾಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಸಾವಿರಾರು ರೈತರು ಒಂದೇ ವೇದಿಕೆಯಲ್ಲಿ ಸೇರಿ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ಹಿನ್ನೆಲೆಯಲ್ಲಿ ತಾಳಿಕೋಟೆಯ ಹೋರಾಟ ಜಿಲ್ಲೆಯ ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದೆ.

ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.

ಸಭೆಯಲ್ಲಿ ಬಸನಗೌಡ ಯಡಿಯಾಪುರ, ಸಾಹೇಬಗೌಡ ವಣಿಕ್ಯಳ, ವಾಸುದೇವ ಹೇಬಸುರ, ಮುರಿಗೆಪ್ಪ ಶರಶೆಟ್ಟಿ, ಕಾಶೀನಾಥ ಮುರಾಳ, ಸಿದ್ದು ಬುಳ್ಳಾ, ಡಿ.ಕೆ. ಪಾಟೀಲ, ಸಂಗನಗೌಡ ಹೆಗರೆಡ್ಡಿ, ಪ್ರಕಾಶ ಹಜೇರಿ ಸೇರಿದಂತೆ ಬಿಜೆಪಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು–ಸದಸ್ಯರು ಹಾಗೂ ಬಿಜೆಪಿ ಯುವ ಮುಖಂಡರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ...

ಕಲಬುರಗಿ | ಎಸ್‌ಐಆರ್: ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಪಾರದರ್ಶಕ ಪರಿಶೀಲನೆ ನಡೆಸಲಿ: ಬಹುಭಾಷ ನಟ ಪ್ರಕಾಶ್ ರೈ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳಿಗೆ...

ಬೈಂದೂರು: ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ವಿರುದ್ಧ ದಾಳಿ – ರೂ.16 ಲಕ್ಷ ಮೌಲ್ಯದ ಸೊತ್ತು ವಶ

ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ...