ಗ್ರಾಹಕರಿಗೆ ಯುಪಿಐ ಉಚಿತ, ಕೆಲವು ನಿರ್ದಿಷ್ಟ ವಹಿವಾಟುಗಳಿಗೆ ಶುಲ್ಕ: ಕೇಂದ್ರ ಸರ್ಕಾರ

Date:

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಮಾಡುವ ವಹಿವಾಟುಗಳು ಉಚಿತವಾಗಿಯೇ ಮುಂದುವರಿಯಲಿದ್ದು, ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ಈ ವಾರ ಲೋಕಸಭೆಯಲ್ಲಿ ‘ಪಾವತಿ ಮತ್ತು ಚುಕ್ತಾ ವ್ಯವಸ್ಥೆ ಕಾಯ್ದೆ, 2007’ (Payment and Settlement Systems Act) ಅಂಗೀಕಾರಗೊಂಡ ಬೆನ್ನಲ್ಲೇ, ಭವಿಷ್ಯದಲ್ಲಿ ಯುಪಿಐ ವಹಿವಾಟುಗಳಿಗೆ ಬ್ಯಾಂಕ್‌ಗಳು ಶುಲ್ಕ ವಿಧಿಸಲಿವೆ ಎಂಬ ಆತಂಕ ವ್ಯಕ್ತವಾಗಿತ್ತು.

- Advertisement -

​ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ, “ಗ್ರಾಹಕರು ಮತ್ತು ಬಹುತೇಕ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಸಂಪೂರ್ಣ ಉಚಿತವಾಗಿರಲಿವೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಹಣ ವರ್ಗಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಭವಿಷ್ಯದಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ, ಕೆಲವೇ ಕೆಲವು ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ (Merchant transactions) ಮಾತ್ರ ಅತ್ಯಲ್ಪ ಶುಲ್ಕ ವಿಧಿಸುವ ಸಾಧ್ಯತೆಯಿದೆ. ಈ ಶುಲ್ಕವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಶುಲ್ಕಕ್ಕಿಂತ ಬಹಳ ಕಡಿಮೆಯಿರಲಿದೆ” ಎಂದು ಅಭಯ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

​ಪ್ರಸ್ತುತ ಯುಪಿಐ ವಹಿವಾಟುಗಳಿಗೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR – ವ್ಯಾಪಾರಿಗಳಿಗೆ ವಿಧಿಸುವ ಶುಲ್ಕ) ಶೂನ್ಯವಾಗಿದೆ. ಸಂಸತ್ತಿನಲ್ಲಿ ‘ತೆರಿಗೆ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2026’ ಅಂಗೀಕಾರಗೊಂಡು, ಪಾವತಿ ಕಾಯ್ದೆಯ ಸೆಕ್ಷನ್ 10ಎ ತಿದ್ದುಪಡಿಯಾದ ಬಳಿಕ, ಎನ್‌ಪಿಸಿಐ (NPCI) ನೇತೃತ್ವದ ‘ಯುಪಿಐ ಮತ್ತು ಸೇವೆಗಳ ಚಾಲನಾ ಸಮಿತಿ’ಯು ವ್ಯಾಪಾರಿಗಳಿಗೆ ವಿಧಿಸಬಹುದಾದ ಎಂಡಿಆರ್ ಶುಲ್ಕದ (ಅಗತ್ಯವಿದ್ದರೆ ಮಾತ್ರ) ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕಾಯ್ದೆಗೆ ತಿದ್ದುಪಡಿ ತರಲು ‘ಬಾಹ್ಯ ಒತ್ತಡ’ (External pressure) ಕಾರಣ ಎಂಬ ಮಾಧ್ಯಮ ವರದಿಗಳನ್ನು ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. “ಈ ಆರೋಪಗಳು ಆಧಾರರಹಿತ ಹಾಗೂ ದಾರಿತಪ್ಪಿಸುವಂತಹವು. ಒಂದು ವೇಳೆ ವಿದೇಶಿ ಅಥವಾ ಬಾಹ್ಯ ಒತ್ತಡವಿದ್ದಿದ್ದರೆ ಸರ್ಕಾರವು 2016ರಲ್ಲಿ ಯುಪಿಐ ಅನ್ನು ಪರಿಚಯಿಸುತ್ತಲೇ ಇರಲಿಲ್ಲ. ಅಲ್ಲದೆ, 2020ರ ಜನವರಿಯಿಂದ ಅದನ್ನು ವ್ಯಾಪಾರಿಗಳು ಮತ್ತು ನಾಗರಿಕರಿಗೆ ಸಂಪೂರ್ಣ ಉಚಿತವಾಗಿ ನೀಡಿ, ಜಗತ್ತಿನ ಅತಿ ದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆಯನ್ನಾಗಿ ಬೆಳೆಸುತ್ತಿರಲಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

​ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಆರ್ಥಿಕವಾಗಿ ಸುಸ್ಥಿರ, ಸ್ಪರ್ಧಾತ್ಮಕ ಮತ್ತು ನವೀನವಾಗಿರಿಸುವ ಜೊತೆಗೆ, ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಸರ್ಕಾರದ ವಿಶಾಲ ಉದ್ದೇಶದಿಂದ ಈ ಕಾಯ್ದೆ ತಿದ್ದುಪಡಿ ತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳವು ದೇಶದ್ರೋಹದ ಕೃತ್ಯ: ಎಕ್ಸ್‌ಪ್ರೆಸ್ ವರದಿ ಬೆನ್ನಲ್ಲೇ ಇಸಿ, ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಚುನಾವಣಾ ಆಯೋಗದ (ಇಸಿಐ) ಆಂತರಿಕ ನಿರ್ಧಾರಗಳ ಕುರಿತು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’...

ಸೀಮನಹಳ್ಳಿಯ ಸುಷ್ಮಾಗೆ ಸಂದ ಡಾಕ್ಟರೇಟ್ ಗೌರವ

ಬೆಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ...

ವಿಜಯಪುರ | ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ಮತ್ತು ಅಕ್ಟೋಬರ್ 1ರಂದು...

ಸಿಇಸಿ ಗ್ಯಾನೇಶ್ ಕುಮಾರ್ ‘ಏಕವ್ಯಕ್ತಿ ಸರ್ವಾಧಿಕಾರಿ’: ಮುಖ್ಯ ಚುನಾವಣೆ ಆಯುಕ್ತರ ವಜಾಕ್ಕೆ ವಿಪಕ್ಷಗಳ ಆಗ್ರಹ

ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಭಾರತೀಯ...