ವಿಜಯಪುರ | ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ್‌ ವಿರುದ್ಧ ನ್ಯಾಯಾಂಗ ತನಿಖೆಗೆ ಎಐಡಿವೈಒ ಆಗ್ರಹ

Date:

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್ ಸಾಹುಕಾರ್ ಅವರು ತಮ್ಮ ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಅಧಿಕಾರ ದುರುಪಯೋಗ ಮಾಡಿಸಿಕೊಂಡಿದ್ದು ಹಾಗೂ ಸುಳ್ಳು ಆದಾಯ ಪ್ರಮಾಣಪತ್ರಕ್ಕೆ ಸಹಕರಿಸಿದ ಆರೋಪ ಕೇಳಿಬಂದಿದೆ. ಇದು ಕೇವಲ ವೈಯಕ್ತಿಕ ಭ್ರಷ್ಟಾಚಾರವಲ್ಲದೇ, ಇಡೀ ರಾಜ್ಯದ ಯುವಜನತೆಗೆ ಬಗೆದ ದ್ರೋಹವಾಗಿದೆ. ಆದ್ದರಿಂದ ಕೆಪಿಎಸ್‌ಸಿ ಅಧ್ಯಕ್ಷರನ್ನು ಈ ಕೂಡಲೇ ವಜಾಗೊಳಿಸಿ, ನ್ಯಾಯಾಂಗ ತನಿಖೆಯ ಮೂಲಕ ಅಧ್ಯಕ್ಷರಾದಿಯಾಗಿ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರಿಗೂ ತಕ್ಕ ಶಿಕ್ಷೆ ನೀಡಬೇಕೆಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಆಗ್ರಹಿಸಿದ್ದಾರೆ.

- Advertisement -

ಪತ್ರಿಕಾ ಹೇಳಿಕೆ ನೀಡಿರುವ ಅವರು, “ವರ್ಷಗಳಿಂದ ಕಷ್ಟಪಟ್ಟು ಓದುತ್ತಿರುವ ಉದ್ಯೋಗಾಕಾಂಕ್ಷಿಗಳು ನೇಮಕಾತಿಗಾಗಿ ರಾಜ್ಯಾದ್ಯಂತ ಪ್ರಬಲ ಹೋರಾಟ ನಡೆಸಿದ್ದಾರೆ. ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗಾಗಿ, ಪಾರದರ್ಶಕ ನೇಮಕಾತಿಗಾಗಿ ಒತ್ತಾಯಿಸಿದ್ದಾರೆ. ಆದರೂ ಅಧ್ಯಕ್ಷರೇ ಈ ರೀತಿಯ ಸ್ವಜನ ಪಕ್ಷಪಾತದ ಹಾದಿ ತುಳಿದಿರುವುದು ರಾಜ್ಯದ ಯುವಜನತೆಯ ಆಕ್ರೋಶವನ್ನು ಹೆಚ್ಚಿಸಿದೆ. ಅಧ್ಯಕ್ಷರು-ಸದಸ್ಯರ ನಡುವೆ ಸಾಮರಸ್ಯ ಇಲ್ಲದಿರುವುದು, ನೇಮಕಾತಿ ಪ್ರಕ್ರಿಯೆಗಳಲ್ಲಿ ಅನಗತ್ಯ ವಿಳಂಬ ಮಾಡುವುದು ಮೊದಲಾದ ಆರೋಪಗಳು ಸದರಿ ಅಧ್ಯಕ್ಷರು ನೇಮಕವಾದಾಗಿನಿಂದಲೂ ಕೇಳಿಬರುತ್ತಿವೆ. ಇದೀಗ ತಮ್ಮವರ ನೇಮಕಾತಿಗಾಗಿ ಚುರುಕಾಗಿ ಪ್ರಕ್ರಿಯೆ ಮುಗಿಸಿರುವುದರಿಂದ ಕೆಪಿಎಸ್‌ಸಿ ಮೇಲೆ ಯಾವುದೇ ವಿಶ್ವಾಸ ಇಲ್ಲದಂತಾಗಿದೆ. ಇಂತಹ ಎಲ್ಲ ಘಟನೆಗಳಿಂದಾಗಿ ನಿಜವಾದ ಪ್ರತಿಭೆ ಇದ್ದವರು ಜಿಗುಪ್ಸೆಗೊಂಡು ಆತ್ಮಹತ್ಯೆಯ ದಾರಿ ಹಿಡಿಯುಂತಾಗಿರುವುದು ದುರಂತವೇ ಸರಿ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

“ಸಾಮಾಜಿಕ ನ್ಯಾಯದ ಸಾಧನವಾದ ಮೀಸಲಾತಿಯನ್ನು ಪ್ರಭಾವಿ ವರ್ಗದವರು ತಮ್ಮ ಮಕ್ಕಳಿಗಾಗಿ ದುರುಪಯೋಗ ಮಾಡಿಸಿಕೊಳ್ಳುತ್ತಿದ್ದಾರೆ. ಇದು ನಿಜವಾಗಿಯೂ ಶೋಷಿತರಿಗೆ ಸಿಗಬೇಕಾದ ಅವಕಾಶವನ್ನು ಕಸಿದುಕೊಳ್ಳುವ ಕೆಲಸವಾಗಿದೆ. ಲಕ್ಷಾಂತರ ನಿರುದ್ಯೋಗಿ ಯುವಜನರು ವರ್ಷಗಟ್ಟಲೆ ಓದಿ, ಕಷ್ಟಪಟ್ಟು ಪರೀಕ್ಷೆ ಬರೆಯುತ್ತಾರೆ. ಆದರೆ ಅಧಿಕಾರವಿರುವವರು ಈ ರೀತಿಯ ಅಡ್ಡಮಾರ್ಗ ಹಿಡಿಯುವುದು ಸಮಾನ ಅವಕಾಶದ ತತ್ವಗಳಿಗೆ ಮಾಡಿದ ಅವಮಾನವಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ವೈದ್ಯರ ಅನಧಿಕೃತ ಗೈರು: ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಓ ದಿಢೀರ್ ಭೇಟಿ

“ಸರ್ಕಾರಿ ಹುದ್ದೆಗಳನ್ನು ಸಾರ್ವಜನಿಕ ಸೇವೆಯ ಸಾಧನವಾಗಿ ನೋಡುವ ಬದಲು, ಅಧಿಕಾರವರ್ಗವು ಅದನ್ನು ತಮ್ಮ ಕುಟುಂಬದ ಆಸ್ತಿಯಂತೆ ಪರಿಗಣಿಸುತ್ತಿದೆ. 40 ಲಕ್ಷ ರೂಪಾಯಿ ಆದಾಯವಿದ್ದರೂ 40 ಸಾವಿರ ರೂ. ಎಂದು ಸುಳ್ಳು ಹೇಳಿ ಮೀಸಲಾತಿ ಕಸಿದುಕೊಳ್ಳುವ ಪ್ರಯತ್ನವು, ಸವಲತ್ತು ಇರುವವರು ಇನ್ನಷ್ಟು ಸವಲತ್ತು ಕಸಿದುಕೊಳ್ಳುವ ಬಂಡವಾಳಶಾಹಿ ವರ್ಗದ ಮನಸ್ಥಿತಿಗೆ ಸಾಕ್ಷಿಯಾಗಿದೆ” ಎಂದರು.

“ಸರ್ಕಾರವು ಈ ಕೂಡಲೇ ಕೆಪಿಎಸ್‌ಸಿಯಲ್ಲಿನ ಭ್ರಷ್ಟರನ್ನು ತೊಲಗಿಸಬೇಕು. ಪಿ ಸಿ ಹೋಟಾ ಸಮಿತಿಯ ಶಿಪಾರಸುಗಳನ್ನು ಜಾರಿಗೊಳಿಸಬೇಕು. ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳು ಒಗ್ಗಟ್ಟಿನ ಹೋರಾಟಕ್ಕೆ ಸಜ್ಜಾಗಬೇಕು” ಎಂದು ಎಐಡಿವೈಒ ಪರವಾಗಿ ಕರೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಹಳ್ಳಕ್ಕೆ ಉರುಳಿದ ಖಾಸಗಿ ಶಾಲಾ ಬಸ್‌ : ಹಲವು ವಿದ್ಯಾರ್ಥಿಗಳಿಗೆ ಗಾಯ

ಹುಲಸೂರ ಪಟ್ಟಣದ ಇಕ್ಬಾಲ್ ಪಟೇಲ್ ಖಾಸಗಿ ಶಾಲೆಯ ಬಸ್ ಚಾಲಕನ ನಿಯಂತ್ರಣ...

ಯಾದಗಿರಿ | ಲಾರಿ ಡಿಕ್ಕಿಗೆ ಬೈಕ್ ಸವಾರ ಗಂಭೀರ ಗಾಯ

ಲಾರಿ ಹಾಗೂ ಬೈಕ್‌ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್‌ ಸವಾರ...

ಈಶಾನ್ಯ ಶಿಕ್ಷಕರ ಕ್ಷೇತ್ರ: ಆರು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆಯಲಿರುವ...

ಪತ್ರಕರ್ತೆಯ ಎದೆ ಹಿಂಡಿ ವಿಕೃತಿ ಮೆರೆದ ಪೊಲೀಸ್ ಅಧಿಕಾರಿಗೆ DCP ಹುದ್ದೆಗೆ ಬಡ್ತಿ ನೀಡಿದ ಮೋಶಾ ಸರ್ಕಾರ!

ಜಂತರ್ ಮಂತರ್‌ನಲ್ಲಿ ನಡೆದ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧದ ಪ್ರತಿಭಟನೆ...