ವಿಜಯಪುರ | ಬುದ್ಧ, ಬಸವ, ಅಂಬೇಡ್ಕರ್‌ ಚಿಂತನೆಯ ಪುಸ್ತಕ ಮೇಳ ಆಯೋಜನೆಗೆ ನಿರ್ಧಾರ

Date:

ಮೇ ಸಾಹಿತ್ಯ ಮೇಳ ಬಳಗದ ಆಶ್ರಯದಲ್ಲಿ, ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಡಾ. ಬಿ ಆರ್‌ ಅಂಬೇಡ್ಕರ್ ಅವರ ಜನ್ಮದಿನಗಳ ನಿಮಿತ್ಯವಾಗಿ ಒಂದು ವಾರದ ʼಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಪುಸ್ತಕ ಮೇಳʼವನ್ನು ಏಪ್ರಿಲ್ ತಿಂಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

- Advertisement -

ವಿಜಯಪುರ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಮೇ ಸಾಹಿತ್ಯ ಮೇಳ ಬಳಗ ಮತ್ತು ವಿವಿಧ ದಲಿತ, ಪ್ರಗತಿಪರ ಮತ್ತು ಸಮಾನ ಮನಸ್ಕ ಗೆಳೆಯರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸಂಗಾತಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪ್ರಸ್ತುತ ಸಂದರ್ಭದಲ್ಲಿ ಯುವಜನರಿಗೆ ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಓದಿನ ಹವ್ಯಾಸ ಬೆಳೆಸುವಲ್ಲಿ ಇಂಥ ಪುಸ್ತಕ ಮೇಳ ಹಮ್ಮಿಕೊಳ್ಳುವುದು ಅತ್ಯಂತ ಸೂಕ್ತವೆಂದು ಹೇಳಿದರು.

‘ಅಂಬೇಡ್ಕರ್ ಹಬ್ಬ’ದ ಜತೆಜತೆಗೇ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಬೇಕು ಮತ್ತು ಕೇವಲ ಕನ್ನಡ ಪುಸ್ತಕಗಳು ಮಾತ್ತವಲ್ಲ, ಇಂಗ್ಲೀಷ್, ಹಿಂದಿ ಸೇರಿದಂತೆ ಬೇರೆ ಭಾಷೆಗಳ ಪುಸ್ತಕಗಳೂ ಕೂಡ ಲಭ್ಯವಾಗುವಂತಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಾಟ್ಸ್ಯಾಪ್ ಯುನಿವರ್ಸಿಟಿಯಲ್ಲಿ ಬರುತ್ತಿರುವುದು ಸತ್ಯವೆಂದು ನಂಬುತ್ತಿರುವ ಯುವಪೀಳಿಗೆಗೆ ನಿಜವಾದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಪುಸ್ತಕಮೇಳ ನಡೆಸುವುದು ಅಗತ್ಯವಾಗಿದ್ದು, ಇದರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ, ಪೆರಿಯಾರ್, ಕಾ‌ನ್ಷೀರಾಂ ಚಿಂತನೆಯ ಮತ್ತು ಎಡ ಹಾಗೂ ದಲಿತ, ಮಹಿಳಾಪರ ಸಾಹಿತ್ಯದ ಪುಸ್ತಕಗಳನ್ನು ಮಾತ್ರ ಆಹ್ವಾನಿಸಬೇಕು. ಹಾಗೆಯೇ ನಿತ್ಯವೂ ಮಹತ್ವದ ಪುಸ್ತಕಗಳ ಓದು ಮತ್ತು ಸಂವಾದ ಹಮ್ಮಿಕೊಳ್ಳಬೇಕೆಂದು ನಿರ್ಧರಿಸಲಾಯಿತು.

ಜಿಲ್ಲೆಯ ಪ್ರತಿ ತಾಲೂಕುಗಳಲ್ಲೂ ಪ್ರಚಾರ ಕೈಕೊಂಡು, ಹೆಚ್ಚೆಚ್ಚು ಜನರು ಮೇಳದಲ್ಲಿ ಭಾಗವಹಿಸುವಂತೆ ಮಾಡುವ ಮೂಲಕ ಹೆಚ್ವು ಜನರಿಗೆ ಪುಸ್ತಕಗಳು ತಲುಪುವಂತೆ ಮಾಡಬೇಕು. ಕನಿಷ್ಠ 50 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು. ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಯ ಪುಸ್ತಕಗಳ ಪರಿಚಯ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಎಲ್ಲ ಶಾಲೆ ಕಾಲೇಜುಗಳನ್ನು ಸಂಪರ್ಕಿಸಿ ಆಹ್ವಾನ ನೀಡಬೇಕುಂದು ಸಭೆ ಅಭಿಪ್ರಾಯಪಟ್ಟಿತು.

ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಒಂದು ಸಂಚಾಲನ ಸಮಿತಿಯನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ಪ್ರಧಾನ ಸಂಚಾಲಕರು: ಅನಿಲ ಹೊಸಮನಿ, ರಾಜಶೇಖರ ಯಡಹಳ್ಳಿ, ಭಗವಾನ ರೆಡ್ಡಿ. ಸಂಚಾಲಕರು: ಪುಲಕೇಶಿ ಚೌಧರಿ, ಜಿ ಜಿ ಗಾಂಧಿ, ಅಡಿವೆಪ್ಪ ಸಾಲಗಲ್ಲ, ನಾಗರಾಜಲಂಬು, ಶ್ರೀನಾಥ ಪೂಜಾರಿ, ಬಸವರಾಜ ಹೋಳ್ಕರ, ಸಂಜು ಕಂಬಾಗಿ, ಸುರೇಶ ಜೀಬಿ, ಎಲ್ ಬಿ ಸಜ್ಜನ, ಪ್ರಭುಗೌಡ ಪಾಟೀಲ, ಲಲಿತಾ ಬಿಜ್ಜರಗಿ, ಸುಭಾಸ ಹೊನ್ನಕಂಟಿ, ಚೆನ್ನು ಕಟ್ಟಿಮನಿ, ಗೌಡಪ್ಪ ಬಡಿಗೇರ, ಮಹಾದೇವ ಬನಸೋಡೆ, ಫಾ. ಕೆವಿನ್, ಓಂಕಾರ ಕಾಕಡೆ ಸೇರಿದಂತೆ ಪ್ರತಿ ತಾಲೂಕಿನಿಂದ ಐದು ಜನರನ್ನು ಆಯ್ಕೆ ಮಾಡಿಕೊಂಡು ವ್ಯಾಪಕ ಪ್ರಚಾರ ಕೈಕೊಳ್ಳುವ ಅಧಿಕಾರವನ್ನು ಸಂಚಾಲನ ಸಮಿತಿಗೆ ನೀಡಲಾಯಿತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ನೇಕಾರ ಸಮುದಾಯದ ಪ್ರತಿಭಟನೆ

ಸಭೆಯಲ್ಲಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಗದಗದ ಮೇ ಸಾಹಿತ್ಯ ಮೇಳ ಬಳಗದ ಮುತ್ತು ಬಿಳೆಯಲಿ, ರಮೇಶ ಕೋಳೂರ, ರಾಮಚಂದ್ರ ಹಂಸನೂರ, ಆನಂದ ಸಿಂಗಾಡಿ, ಚೆನ್ನು ಕಟ್ಟಿಮನಿ, ಅರವಿಂದ ಲಂಬು, ಸಲೀಮ ಹೊಕ್ರಾಣಿ, ಮನೋಹರ ಕಾಂಬಳೆ, ಲಿಂಗರಾಜ ಬಿದರಕುಂದಿ, ವೈ ಎಚ್ ಲಂಬು, ರಾಜೇಂದ್ರ ಕೊಂಡಗೂಳಿ, ರವೀಂದ್ರ ಬೆಳ್ಳಿ, ಅಪ್ಪಾಸಾಹೇಬ ಚಿನಗುಂಡಿ, ಪ್ರಮೋದ ಬರಡ್ಡಿ, ಸಂಗಮೇಶ ಸಿದರೆಡ್ಡಿ, ಸಾಹೇಬಲಾಲ ನದಾಫ, ಬಾಲಾಜಿ ಕಾಂಬಳೆ, ಯಮನಪ್ಪ ಗುಣಕಿ, ರಮೇಶ ಹೊಸಮನಿ, ನಿಂಗಮ್ಮ ಹೊಸಮನಿ, ರಾಜೇಶ ಚಲವಾದಿ, ದಿಲೀಪ ಮೌರ್ಯ, ರಾಜೇಶ ತೊರವಿ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್ ಇಂದುಮತಿ

ಹೆಣ್ಣುಮಕ್ಕಳು ತಮ್ಮ ಭದ್ರತೆಯ ಕುರಿತು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು....

ವಿಜಯಪುರ | ಜಿಲ್ಲೆಯ 4 ತಾಲೂಕುಗಳು ತೀವ್ರ ಬರಪೀಡಿತ: ಸಚಿವ ಎಂ.ಬಿ ಪಾಟೀಲ

ಕೇಂದ್ರ ಸರಕಾರದ ಬರ ನಿರ್ವಹಣಾ ಮಾನದಂಡಗಳನ್ನು ಆಧರಿಸಿ ವಿಜಯಪುರ ಜಿಲ್ಲೆಯ ಆಲಮೇಲ,...

ವಿಜಯಪುರ | ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ಮತ್ತು ಅಕ್ಟೋಬರ್ 1ರಂದು...

ವಿಜಯಪುರ | ಬರ ಘೋಷಣೆ ಮಾಡದ್ದಕ್ಕೆ ಅಸಮಾಧಾನ: ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ...