ಉತ್ತರಾಖಂಡ | ಮದರಸಾ ಮಂಡಳಿ ರದ್ದು

Date:

ಉತ್ತರಾಖಂಡ ಸರ್ಕಾರವು ಅಧಿಕೃತವಾಗಿ ಮದರಸಾ ಮಂಡಳಿಯನ್ನು ರದ್ದುಗೊಳಿಸಿದೆ. ಮದರಸಾ ಶಿಕ್ಷಣ ಮಂಡಳಿ ಕಾಯ್ದೆ 2016 ಅನ್ನು ರದ್ದುಗೊಳಿಸಲಾಗಿದ್ದು, ಜುಲೈ 31ರಿಂದ ಈ ಮಂಡಳಿಯು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳಲಿದೆ. ಇನ್ನು ಮದರಸಾ ಮಂಡಳಿಯ ಬದಲಾಗಿ ‘ಉತ್ತರಾಖಂಡ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ (USMEA) ವನ್ನು ರಚಿಸಲಾಗಿದ್ದು ಜುಲೈ ನಂತರ ಅದು ಕಾರ್ಯನಿರ್ವಹಿಸಲಿದೆ. ಮುಸ್ಲಿಂ ಮಾತ್ರವಲ್ಲದೆ ಸಿಖ್, ಜೈನ್, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಶಿಕ್ಷಣ ಸಂಸ್ಥೆಗಳನ್ನೂ ಈ ಪ್ರಾಧಿಕಾರ ಒಳಗೊಳ್ಳುತ್ತದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಳಿಯನ್ನು ವಿಸರ್ಜಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ವಿಶೇಷ ಕಾರ್ಯದರ್ಶಿ ಡಾ. ಪರಾಗ್ ಮಧುಕರ್ ಧಾಕಟೆ, “ಈ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ಈಗ ನೇರವಾಗಿ ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಯು ನಿರ್ವಹಿಸುತ್ತದೆ” ಎಂದು ಹೇಳಿದ್ದಾರೆ.

- Advertisement -
    WhatsApp Image 2025 11 17 at 4.20.34 PM
    + posts

    ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

    ಪೋಸ್ಟ್ ಹಂಚಿಕೊಳ್ಳಿ:

    ಮಯೂರಿ ಬೋಳಾರ್
    ಮಯೂರಿ ಬೋಳಾರ್
    ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    2025ರಲ್ಲಿ ಜಾಗತಿಕವಾಗಿ 129 ಪತ್ರಕರ್ತರ ಕೊಲೆ

    ಕಳೆದ ವರ್ಷ 2025ರಲ್ಲಿ ದಾಖಲೆ ಪ್ರಮಾಣದಲ್ಲಿ 129 ಪತ್ರಕರ್ತರು ಮತ್ತು ಮಾಧ್ಯಮ...

    ತಮಿಳುನಾಡು | ಹೊಸ ಪಕ್ಷ ಸ್ಥಾಪಿಸಿದ ಶಶಿಕಲಾ

    ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಸೋಮವಾರ ದಿವಂಗತ ಮುಖ್ಯಮಂತ್ರಿ...

    ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಹೈಕಮಾಂಡ್‌ಗೆ ಪತ್ರ

    ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ....

    ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

    ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ಯ ಎರಡನೇ ಉನ್ನತ...