ಗೋಮಾಂಸ ನಿಷೇಧವಿರಲಿ, ‘ಬೀಫ್ ತಿನ್ನಬೇಡಿ’ ಎಂದು ಹೇಳಿಲ್ಲ ಮನುಸ್ಮೃತಿ!

Date:

ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು ತಾನೇ ಸೃಷ್ಟಿಸಿದ ಈ ವೈರುಧ್ಯಗಳನ್ನೂ ನಾವು ಎತ್ತಿ ತೋರಿಸಬೇಕಾಗುತ್ತದೆ. ಮನುಸ್ಮೃತಿ ನೇರವಾಗಿ 'ಬೀಫ್ ತಿನ್ನಬೇಡಿ' ಎಂದೂ ಹೇಳಿಲ್ಲ, 'ತಿನ್ನಿ' ಎಂದೂ ಹೇಳಿಲ್ಲ! ಗೋಹತ್ಯೆಗೆ ಪ್ರಾಯಶ್ಚಿತ್ತವಿದೆಯೇ ಹೊರತು ಮರಣದಂಡನೆಯಾಗಲಿ ಅಥವಾ ಜೀವಾವಧಿ ಶಿಕ್ಷೆ ಮನುಸ್ಮೃತಿಯಲ್ಲಿ ಎಲ್ಲೂ ಇಲ್ಲ.

ಸಂವಿಧಾನವನ್ನು ಎತ್ತಿಹಿಡಿದು, ಅದರ ಆಶಯಗಳಿಗೆ ಅನುಗುಣವಾಗಿ ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಪರಮೋಚ್ಚ ಕರ್ತವ್ಯ. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಅತ್ಯುನ್ನತ ಕಾನೂನು. ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಕೇವಲ ಸಾಕ್ಷ್ಯಾಧಾರಗಳು ಮತ್ತು ಸಂವಿಧಾನದ ನಿಯಮಗಳ ಆಧಾರದ ಮೇಲೆ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಮುಖ್ಯ ಗುರಿ. ಆದರೆ ಸಂವಿಧಾನವನ್ನು ಬದಿಗೊತ್ತಿ ಮಹಿಳಾ-ದಲಿತ ವಿರೋಧಿ ಮನುಸ್ಮೃತಿಯನ್ನು ಉಲ್ಲೇಖಿಸಿ ಇತ್ತೀಚೆಗೆ ಗುಜರಾತ್‌ನ ಕೋರ್ಟ್‌ ಗೋಮಾಂಸ ಸಂಬಂಧಿತ ತೀರ್ಪೊಂದನ್ನು ನೀಡಿದೆ.

- Advertisement -

ಇತ್ತೀಚೆಗೆ ಗೋಮಾಂಸ (ಗೋಹತ್ಯೆ) ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಾಗ ಮನುಸ್ಮೃತಿ ಮತ್ತು ವೇದಗಳನ್ನು ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ಸೆಷನ್ಸ್ ನ್ಯಾಯಾಲಯ ಪ್ರಸ್ತಾಪಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಬಿ. ಆರ್. ರಜಪೂತ್ ಅವರು ಈ ತೀರ್ಪನ್ನು ನೀಡಿದ್ದಾರೆ. 2024ರಲ್ಲಿ ಗಾಂಧಿನಗರ ಜಿಲ್ಲೆಯ ಜಾಮಲಾ ಗ್ರಾಮದ ಮನೆಯೊಂದರ ಮೇಲೆ ನಡೆದ ದಾಳಿಯ ವೇಳೆ 277 ಕೆಜಿ ಗೋಮಾಂಸ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಸಿವು, ಹಕ್ಕು ಮತ್ತು ‘ದೇವರ ಹೆಣ’

ಹಸಿದವನಿಗೆ ಮಾಂಸವನ್ನು ನಿರಾಕರಿಸುವುದು ಕೇವಲ ದ್ವೇಷವಲ್ಲ, ಅದು ತನ್ನ ಜಾತಿಯ ಪಾವಿತ್ರ್ಯವನ್ನು ಹಸಿದ ಹೊಟ್ಟೆಯ ಮೇಲೆ ಹೇರುವ ಕ್ರೌರ್ಯ. ಇಂದಿನ ಗೋರಕ್ಷಣೆಯ ರಾಜಕಾರಣ ಹಿನ್ನೆಲೆಯಲ್ಲಿ ಈ 'ದೇವರ ಹೆಣ' ಕಥೆಯ ಒಳನೋಟ ಇನ್ನಷ್ಟು...

ಅಡ್ಡಂಡ ಕಾರ್ಯಪ್ಪನವರ ನಾಟಕದ ವಿವಾದ: ಗೋಡ್ಸೆ ವೈಭವೀಕರಣದ ಹಿಂದೆ...

ಗೋಡ್ಸೆಯನ್ನು ವೈಭವೀಕರಿಸುವ ರಾಜಕೀಯವನ್ನು ಕೇವಲ ಒಬ್ಬ ವ್ಯಕ್ತಿಯ ಅಭಿಮಾನ ಅಥವಾ ಇತಿಹಾಸದ ಪರ್ಯಾಯ ಓದು ಎಂದು ಸೀಮಿತಗೊಳಿಸಲಾಗದು. ಅದರ ಮೂಲಕ ಗಾಂಧೀಜಿಯವರನ್ನು ಸಾರ್ವಜನಿಕ ಸ್ಮೃತಿಯಿಂದ ದೂರಮಾಡಿ, ಅವರ ಹತ್ಯೆಯನ್ನು ಸಮರ್ಥಿಸಬಹುದಾದ ವಾತಾವರಣ ನಿರ್ಮಿಸುವ...

ಇಸ್ರೇಲ್ ರಾಜಕೀಯದ ಚದುರಂಗದಾಟ: ಅತಂತ್ರ ಬಿಕ್ಕಟ್ಟಿನಿಂದ ಹೊರಬರಲು ಇರುವ...

ಇಸ್ರೇಲ್‌ನ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ ಸಂಪೂರ್ಣವಾಗಿ ಭಿನ್ನವಾಗಿದೆ ಹಾಗೂ ಹೆಚ್ಚು ಸಂಕೀರ್ಣವಾಗಿದೆ. ಇಸ್ರೇಲ್ ಅನುಸರಿಸುತ್ತಿರುವುದು ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ (Parliamentary Democracy) ವ್ಯವಸ್ಥೆಯಾಗಿದೆ. ಇಲ್ಲಿ ದೇಶದ ಜನತೆ ನೇರವಾಗಿ ತಮ್ಮ ಪ್ರಧಾನಮಂತ್ರಿಯನ್ನು...

ನ್ಯಾಯಾಧೀಶರು ತಮ್ಮ 76 ಪುಟಗಳ ತೀರ್ಪಿನಲ್ಲಿ ಗೋವಿನ ಧಾರ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ವಿವರಿಸಲು ಮನುಸ್ಮೃತಿ, ಋಗ್ವೇದ ಹಾಗೂ ಇತರ ಹಿಂದೂ ಧರ್ಮಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಮನುಸ್ಮೃತಿಯ ಪ್ರಕಾರ ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ಧರ್ಮ ಮತ್ತು ಭೌತಿಕ ಸಮೃದ್ಧಿಯ ಆಧಾರ ಸ್ತಂಭವಾಗಿದೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಬರೆದಿದ್ದಾರೆ. ಅಲ್ಲದೆ ಗೋಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ನೀಡದಿದ್ದರೆ ಭೂಮಿಯ ಮೇಲಿಂದ ಗೋವಂಶವೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಗುಜರಾತ್ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2017ರ ಅಡಿಯಲ್ಲಿ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Advertisements

ಇದನ್ನೂ ಓದಿ: ಗುಜರಾತ್‌ ಗೋಮಾಂಸ ಪ್ರಕರಣ: ಮನುಸ್ಮೃತಿಯ ಶ್ಲೋಕ ಉಲ್ಲೇಖಿಸಿ ಮೂವರಿಗೆ ಜೀವಾವಧಿ ಶಿಕ್ಷೆ!

ಆದರೆ ತೀರ್ಪಿನಲ್ಲಿ ಸಂವಿಧಾನದ, ಕಾಯ್ದೆಯನ್ನು ಪ್ರಸ್ತಾಪಿಸುವ ಬದಲಾಗಿ ಮನುಸ್ಮೃತಿಯನ್ನು ನ್ಯಾಯಾಲಯವು ಉಲ್ಲೇಖಿಸಿದ್ದು ಎಷ್ಟು ಸರಿ ಎಂಬ ಬಗ್ಗೆ ಸದ್ಯ ತೀವ್ರ ಚರ್ಚೆಗಳು ನಡೆಯುತ್ತಿವೆ. ಬ್ರಾಹ್ಮಣ್ಯವನ್ನು ಎತ್ತಿಹಿಡಿಯುವ, ಮಹಿಳೆಯರು-ದಲಿತರನ್ನು ತುಚ್ಛವಾಗಿ ಕಾಣುವ ಕೀಳು ಧಾರ್ಮಿಕ ನಿಯಮಗಳ ಸಂಹಿತೆ ಮನುಸ್ಮೃತಿ. ಇದು ಸಮಾನತೆ, ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಸಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ಗ್ರಂಥ ಎಂಬುದು ಐತಿಹಾಸಿಕ ಸತ್ಯ. ಸಮಾಜವನ್ನು ಚಾತುರ್ವರ್ಣ ಪದ್ಧತಿ, ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿಗಳನ್ನು ಹಂತ ಹಂತವಾಗಿ ನೀಚವಾಗಿ ಕಾಣುವ, ಸಮಾಜದಲ್ಲಿ ಶ್ರೇಣೀಕೃತ ಅಸಮಾನತೆಯನ್ನು ದೇವರ ಇಚ್ಛೆಯೆಂದು ಬಿಂಬಿಸುವ ಯತ್ನ ಈ ಗ್ರಂಥದಲ್ಲಿದೆ. ಆದರೆ ಈ ಸಂವಿಧಾನ ವಿರೋಧಿ ಗ್ರಂಥವನ್ನೇ ಮುಂದಿಟ್ಟುಕೊಂಡು ಇತ್ತೀಚೆಗೆ ಗುಜರಾತ್‌ನ ಗಾಂಧಿನಗರ ಜಿಲ್ಲೆಯ ಕಲೋಲ್ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ನೀಡಿರುವುದು ವಿಪರ್ಯಾಸ. ಇದರೊಂದಿಗೆ ಮನುಸ್ಮೃತಿಯಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆಯೇ? ಎಂಬ ವಿಚಾರವನ್ನೂ ನಾವು ಗಹಿಸುವುದು ಸೂಕ್ತ.

ಮನುಸ್ಮೃತಿ ಗೋಮಾಂಸವನ್ನು ನಿಷೇಧಿಸುತ್ತದೆಯೇ?

ಬಿಜೆಪಿ ಸರ್ಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆಗಳನ್ನು, ಅದಕ್ಕೆ ವಿಧಿಸಲಾಗುವ ಶಿಕ್ಷೆಯನ್ನು ಪರಿಶೀಲಿಸುತ್ತಲ್ಲೇ ಮನುಸ್ಮೃತಿಯ ಮೂಲ ಪಠ್ಯವನ್ನು ಅತ್ಯಂತ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಅತ್ಯಂತ ಕುತೂಹಲಕಾರಿ ಮತ್ತು ಗೊಂದಲಮಯ ಸತ್ಯವೊಂದು ಹೊರಬರುತ್ತದೆ. ಅದೇನೆಂದರೆ, ಮನುಸ್ಮೃತಿಯು ಗೋಮಾಂಸ ಭಕ್ಷಣೆಯನ್ನು ನೇರವಾಗಿ ಅಥವಾ ಸ್ಪಷ್ಟವಾಗಿ ಎಲ್ಲಿಯೂ ನಿಷೇಧಿಸಿಲ್ಲ. ಮನುಸ್ಮೃತಿಯು ಗೋಮಾಂಸದ, ಆಹಾರದ ವಿಷಯದಲ್ಲಿ ಒಂದು ರೀತಿಯ ಮೌನವನ್ನು ಕಾಯ್ದುಕೊಳ್ಳುತ್ತಾ, ಪ್ರಾಣಿ ಹತ್ಯೆಯ ವಿಧಿವಿಧಾನಗಳಲ್ಲಿ ಮತ್ತು ಯಜ್ಞಗಳ ಹೆಸರಿನಲ್ಲಿ ಮಾಂಸ ಸೇವನೆಗೆ ವಿಶಾಲವಾದ ರಹದಾರಿಯನ್ನು ಮಾಡಿಕೊಟ್ಟಿದೆ.

ಮನುಸ್ಮೃತಿಯ 5ನೇ ಅಧ್ಯಾಯದಲ್ಲಿ ಅನುಮತಿಸಲಾದ ಮತ್ತು ನಿಷೇಧಿಸಲಾದ ಆಹಾರಗಳ ವಿವರವಾದ ಪಟ್ಟಿಯಿದೆ. ಶ್ಲೋಕ 5.18ರಲ್ಲಿ ದ್ವಿಜರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ತಿನ್ನಬಹುದಾದ ಪ್ರಾಣಿಗಳ ಪಟ್ಟಿಯನ್ನು ನೀಡುತ್ತಾ ಮುಳ್ಳುಹಂದಿ, ಹಂದಿಜಾತಿಯ ಪ್ರಾಣಿ, ಉಡು, ಖಡ್ಗಮೃಗ, ಆಮೆ ಮತ್ತು ಮೊಲ – ಹೀಗೆ ಆರು ರೀತಿಯ ಐದು ಉಗುರುಗಳಿರುವ ಪ್ರಾಣಿಗಳನ್ನು ತಿನ್ನಬಹುದು ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಅದೇ ಶ್ಲೋಕದಲ್ಲಿ, “ಒಂಟೆಯನ್ನು ಹೊರತುಪಡಿಸಿ, ಕೇವಲ ಒಂದೇ ದವಡೆಯಲ್ಲಿ ಹಲ್ಲುಗಳಿರುವ (ಏಕದಂತ) ಪ್ರಾಣಿಗಳನ್ನು ತಿನ್ನಬಹುದು” ಎಂದು ಸ್ಪಷ್ಟವಾಗಿ ವಿಧಿಸಲಾಗಿದೆ. ಸಾಮಾನ್ಯವಾಗಿ ಆಕಳು, ಆಡು ಮತ್ತು ಕುರಿಗಳಿಗೆ ಒಂದೇ ದವಡೆಯಲ್ಲಿ ಹಲ್ಲುಗಳಿರುತ್ತವೆ. ಆದ್ದರಿಂದ, ಶಬ್ದಶಃ ಮತ್ತು ನಿಯಮಾವಳಿಗಳ ಪ್ರಕಾರ ಪರಿಶೀಲಿಸಿದರೆ, ಆಕಳು ಮನುಸ್ಮೃತಿಯು ಅನುಮತಿಸಿದ ಪ್ರಾಣಿಗಳ ವರ್ಗದೊಳಗೇ ಬೀಳುತ್ತದೆ. ಇಲ್ಲಿ ನಿಷೇಧಕ್ಕೊಳಗಾದ ಏಕೈಕ ಪ್ರಾಣಿ ಎಂದರೆ ಒಂಟೆ ಮಾತ್ರ! ಇದಕ್ಕೂ ಮುಖ್ಯವಾಗಿ ಮನುಸ್ಮೃತಿಯು ಈ ಪಟ್ಟಿಯಲ್ಲಿ ಗೋವಿನ ಹೆಸರನ್ನು ‘ಖಂಡಿತ ತಿನ್ನಬೇಡಿ’ ಎಂದಾಗಲಿ ಅಥವಾ ‘ತಿನ್ನಿ’ ಎಂದಾಗಲಿ ಪ್ರತ್ಯೇಕವಾಗಿ ಎಲ್ಲಿಯೂ ಹೆಸರಿಸುವುದಿಲ್ಲ.

ಮನುಸ್ಮೃತಿಯ ಮಾಂಸ ಭಕ್ಷಣೆಯ ಅಧ್ಯಾಯವು ಪ್ರಾಣಿಯ ಪ್ರಭೇದ ಯಾವುದು ಎಂಬುದಕ್ಕಿಂತ ಅದು ಹೇಗೆ ಕೊಲ್ಲಲ್ಪಟ್ಟಿದೆ ಎಂಬುದಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಮಂತ್ರಗಳಿಂದ ಪ್ರೋಕ್ಷಿಸಲ್ಪಟ್ಟ ಮತ್ತು ವಿಧಿಪೂರ್ವಕವಾಗಿ ಅರ್ಪಿಸಲಾದ ಮಾಂಸವನ್ನು ಧೈರ್ಯವಾಗಿ ಸೇವಿಸಬಹುದು (5.27). ಯಜ್ಞಯಾಗಾದಿಗಳಲ್ಲಿ ಮಾಡುವ ಪ್ರಾಣಿ ವಧೆಯನ್ನು ಸಾಂಪ್ರದಾಯಿಕ ಅರ್ಥದ ‘ಹಿಂಸೆ’ ಅಥವಾ ‘ಹತ್ಯೆ’ ಎಂದು ಪರಿಗಣಿಸಲಾಗುವುದಿಲ್ಲ. ಮನುಸ್ಮೃತಿ ಪ್ರಕಾರ ಧಾರ್ಮಿಕ ವಿಧಿ ಅಥವಾ ಶ್ರಾದ್ಧದ ಸಂದರ್ಭದಲ್ಲಿ ಅರ್ಪಿಸಲಾದ ಮಾಂಸವನ್ನು ತಿನ್ನಲು ನಿರಾಕರಿಸುವ ವ್ಯಕ್ತಿಯು 21 ಜನ್ಮಗಳ ಕಾಲ ಪ್ರಾಣಿಯಾಗಿ ಹುಟ್ಟುತ್ತಾನೆ.

ಇದನ್ನೂ ಓದಿ: RSS- ನೂರು ವರ್ಷಗಳು : ಬಿಟ್ಟರೂ ಬಿಡದ ತಾತ್ವಿಕ ಪ್ರಶ್ನೆಗಳು

ಪಿತ್ರಾರ್ಪಣೆ ಮತ್ತು ಶ್ರಾದ್ಧದ ಸಂದರ್ಭದಲ್ಲಿ ಪಿತೃಗಳಿಗೆ ಸಂತೃಪ್ತಿ ನೀಡುವ ಆಹಾರಗಳ ಪಟ್ಟಿಯನ್ನು ಮನುಸ್ಮೃತಿಯ 3ನೇ ಅಧ್ಯಾಯದಲ್ಲಿ ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಮ್ಮೆಯ (Buffalo) ಮಾಂಸವು ಶ್ರಾದ್ಧಕ್ಕೆ ಅತ್ಯಂತ ಸೂಕ್ತ ಹಾಗೂ 10 ತಿಂಗಳು ಪಿತೃಗಳಿಗೆ ತೃಪ್ತಿ ತರುತ್ತದೆ ಎಂದು ಸ್ಪಷ್ಟವಾಗಿ ಸೇರಿಸಲಾಗಿದೆ. ಆದರೆ, ಗೋವಿನ ವಿಷಯ ಬಂದಾಗ ಮನುಸ್ಮೃತಿಯು ಕೇವಲ ಅದರ ಹಾಲು ಮತ್ತು ಪಾಯಸದ (ಅನ್ನ-ಕ್ಷೀರ) ಸೇವನೆಯನ್ನು ಮಾತ್ರ ಪ್ರಸ್ತಾಪಿಸುತ್ತದೆ. ಗೋಮಾಂಸವನ್ನು ಪಟ್ಟಿಯಿಂದ ಹೊರಗಿಡಲಾಗಿದೆಯೇ ಹೊರತು, ಅದನ್ನು ಕಟುವಾಗಿ ನಿಷೇಧಿಸುವ ಯಾವುದೇ ನಿಬಂಧನೆಯನ್ನು ಇಲ್ಲಿ ವಿಧಿಸಿಲ್ಲ.

ಮನುಸ್ಮೃತಿಯ 11ನೇ ಅಧ್ಯಾಯದಲ್ಲಿ ಪಾಪಗಳು ಮತ್ತು ಪ್ರಾಯಶ್ಚಿತ್ತಗಳ ಪಟ್ಟಿಯಿದೆ. ಶ್ಲೋಕ 11.60ರಲ್ಲಿ ಗೋಹತ್ಯೆಯನ್ನು (ಗೋ-ವಧ) ‘ಉಪಪಾಟಕ’ (Secondary sin ಅಥವಾ ದ್ವಿತೀಯಕ ಪಾಪ) ಎಂದು ವರ್ಗೀಕರಿಸಲಾಗಿದೆ. ಇದು ಬ್ರಾಹ್ಮಣ ಹತ್ಯೆಯಂತಹ ‘ಮಹಾಪಾಟಕ’ (ಮಹಾ ಪಾಪ) ಅಲ್ಲ. ಬದಲಾಗಿ, ವ್ಯಭಿಚಾರ, ಗುರುವಿನ ಆಸ್ತಿ ಕದಿಯುವುದು, ಹೆತ್ತವರನ್ನು ನಿರ್ಲಕ್ಷಿಸುವುದು ಮತ್ತು ಸಾಲ ತೀರಿಸದಿರುವುದರ ಸಾಲಿನಲ್ಲಿ ಗೋಹತ್ಯೆಯನ್ನು ಇರಿಸಲಾಗಿದೆ.

ಗೋಹತ್ಯೆ ಮಾಡಿದವರು ಒಂದು ತಿಂಗಳ ಕಾಲ ಬಾರ್ಲಿ ಗಂಜಿಯನ್ನು ಮಾತ್ರ ಕುಡಿಯಬೇಕು, ಶಿರಮುಂಡನ ಮಾಡಿಕೊಳ್ಳಬೇಕು, ಸತ್ತ ಆಕಳಿನ ಚರ್ಮವನ್ನು (ಅದರ ಕೊಂಬು ಮತ್ತು ಬಾಲದ ಸಮೇತ) ಹೊದ್ದುಕೊಳ್ಳಬೇಕು, ಮೂರು ತಿಂಗಳ ಕಾಲ ಸತತವಾಗಿ ದನಗಳ ಹಿಂಡಿನ ಜೊತೆಯಲ್ಲೇ ವಾಸಿಸುತ್ತಾ, ಅವುಗಳನ್ನೇ ಹಿಂಬಾಲಿಸಬೇಕು, ಅಂತಿಮವಾಗಿ 10 ಆಕಳುಗಳು ಮತ್ತು 1 ಗೂಳಿಯನ್ನು ದಾನವಾಗಿ ನೀಡಬೇಕು ಎಂದು ಮನುಸ್ಮೃತಿ ಹೇಳುತ್ತದೆ. ಆದರೆ ಗೋಹತ್ಯೆಗೆ ಪ್ರಾಯಶ್ಚಿತ್ತವಿದೆಯೇ ಹೊರತು ಮರಣದಂಡನೆಯಾಗಲಿ ಅಥವಾ ಇಂದಿನ ನ್ಯಾಯಾಲಯಗಳು ವಿಧಿಸುವಂತಹ ಜೀವಾವಧಿ ಶಿಕ್ಷೆಯಾಗಲಿ ಮನುಸ್ಮೃತಿಯಲ್ಲ ಎಲ್ಲೂ ಇಲ್ಲ!

ಹೀಗಿರುವಾಗ ಗುಜರಾತ್‌ ಕೋರ್ಟ್‌ ಮನುಸ್ಮೃತಿಯನ್ನು ಗೋರಕ್ಷಣೆಯ ಏಕೈಕ ಆಧಾರವೆಂದು ಬಿಂಬಿಸಲು ಹೊರಟಾಗ, ಮನುಸ್ಮೃತಿಯು ತಾನೇ ಸೃಷ್ಟಿಸಿದ ಈ ವೈರುಧ್ಯಗಳನ್ನೂ ನಾವು ಎತ್ತಿ ತೋರಿಸಬೇಕಾಗುತ್ತದೆ. ಪಠ್ಯವು ಗೋಹತ್ಯೆಯನ್ನು ಪಾಪವೆಂದೂ ಕರೆಯುತ್ತದೆ, ಆದರೆ ಯಜ್ಞದ ಹೆಸರಿನಲ್ಲಿ ಮಾಂಸವನ್ನು ಸಮರ್ಥಿಸಿಕೊಳ್ಳುತ್ತದೆ.

ಗೋಮಾಂಸ ಭಕ್ಷಣೆಯನ್ನು ನೇರವಾಗಿ ನಿಷೇಧಿಸದ ಮನುಸ್ಮೃತಿಯನ್ನು ಇಟ್ಟುಕೊಂಡು, ಇಂದಿನ ಪ್ರಜಾಸತ್ತಾತ್ಮಕ ಭಾರತದಲ್ಲಿ ಜೀವಾವಧಿ ಶಿಕ್ಷೆಯಂತಹ ಕಠಿಣ ಕಾನೂನುಗಳಿಗೆ ಧಾರ್ಮಿಕ ಬಣ್ಣ ಬಳೆಯುವುದು ಚಾರಿತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಅತ್ಯಂತ ದೋಷಪೂರಿತ ನಿಲುವಾಗುತ್ತದೆ. ಧರ್ಮಗ್ರಂಥಗಳ ಅಸ್ಪಷ್ಟ ಮೌನಕ್ಕಿಂತ ಹೆಚ್ಚಾಗಿ, ಆಧುನಿಕ ಭಾರತದ ಸಂವಿಧಾನ ಮತ್ತು ಮಾನವ ಹಕ್ಕುಗಳ ತತ್ವಗಳೇ ನಮ್ಮ ಕಾನೂನುಗಳಿಗೆ ದಾರಿದೀಪವಾಗಬೇಕಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್ ರಾಜೀನಾಮೆಗೆ ಆಗ್ರಹಿಸಿ ನ. 5ರಂದು ಫ್ರೀಡಂ ಪಾರ್ಕ್‌ನಲ್ಲಿ ‘ಇಂಡಿಯಾ’ ಒಕ್ಕೂಟದ ಬೃಹತ್ ಪ್ರತಿಭಟನೆ

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್...

ಶಿವಮೊಗ್ಗ | SC ST ಮೀಸಲಾತಿ ಹೆಚ್ಚಳ ಅನುಮೋದನೆ ಆಗ್ರಹಿಸಿ ಧರಣಿ

ಇಂದಿನ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಈ ಹಿಂದಿನ...

ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ

ರೈತರನ್ನು ಎದುರು ಹಾಕಿಕೊಂಡ ಸರ್ಕಾರಗಳು ಉಳಿದ ಉದಾಹರಣೆಗಳಿಲ್ಲ. 1980ರಲ್ಲಿ ರೈತರ ಮೇಲೆ...

ಭಾರತ – ನ್ಯೂಜಿಲೆಂಡ್ ಏಕದಿನ ಸರಣಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿವ ಉತ್ಸಾಹದಲ್ಲಿ ಕೊಹ್ಲಿ!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ತಂಡ...