ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖರ ಅಭಿಪ್ರಾಯ ಪ್ರಕಟವಾಗಲಿದೆ. ಇಲ್ಲಿದೆ ಸಾಮಾಜಿಕ ಹೋರಾಟಗಾರ ಸಿರಿಮನೆ ನಾಗರಾಜ್ ಅವರ ಅಭಿಪ್ರಾಯ
ಮತ ಚಲಾವಣೆ ಎಷ್ಟು ಮುಖ್ಯ?
ರಾಜ್ಯದ ಮತ್ತು ಜನತೆಯ ಹೆಗಲೇರಿರುವ ಪೈಶಾಚಿಕ ಆಳ್ವಿಕೆಯನ್ನು ಕಿತ್ತೊಗೆಯಲು ಅದನ್ನು ಅರ್ಥ ಮಾಡಿಕೊಂಡಿರುವ ಎಲ್ಲರೂ ಮತ ಚಲಾಯಿಸಲೇಬೇಕಿದೆ.
ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಈಗ ಇರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯದಿದ್ದರೆ ನಮಗೂ ರಾಜ್ಯಕ್ಕೂ ಮಾರಣಾಂತಿಕವಾಗಲಿರುವ ಸರ್ಕಾರವನ್ನು ಅಧಿಕಾರದಿಂದ ದೂರವಿಡುವ ಕೊನೆ ಅವಕಾಶ ಎಂಬ ದೃಷ್ಟಿಯಿಂದ ಈ ಸಲದ ಚುನಾವಣೆ ಬಹಳ ಮುಖ್ಯ.
ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಜನಸಾಮಾನ್ಯರ ಕೇಳಿಕೆಗಳಿಗೆ, ಸಾರ್ವಜನಿಕರ ಅಭಿಪ್ರಾಯಕ್ಕೆ ಕಡೇಪಕ್ಷ ಕಿವಿಯಾದರೂ ಕೊಡುವಂತಹ ಸರ್ಕಾರ ಬರಬೇಕು