ಬೆಂಗಳೂರು ಕರಗ ಶಕ್ತ್ಯೋತ್ಸವ | ತಾತ್ಕಾಲಿಕ ಸಂಚಾರ ನಿರ್ಬಂಧ ಎಲ್ಲೆಲ್ಲಿ? ಇಲ್ಲಿದೆ ನೋಡಿ

Date:

  • ಏ. 6ರಂದು ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದಿಂದ ಹೊರಡಲಿರುವ ಕರಗ ಉತ್ಸವ
  • ಕರಗದಲ್ಲಿ ಅತ್ಯಧಿಕ ಭಕ್ತರು ಭಾಗವಹಿಸುವುದರಿಂದ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಏ. 6ರಂದು ಮಧ್ಯರಾತ್ರಿ 12 ಗಂಟೆಗೆ ಹೊರಡಲಿರುವ ಕರಗ ಉತ್ಸವ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗದ ಹಿನ್ನೆಲೆಯಲ್ಲಿ ತಿಗಳರ ಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಿ ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಪ್ರಕಟಣೆ ಹೊರಡಿಸಿದೆ.

ಏ. 6ರಂದು ಮಧ್ಯರಾತ್ರಿ 12 ಗಂಟೆಗೆ ಕರಗ ಉತ್ಸವ ದೇವಸ್ಥಾನದಿಂದ ಹೊರಟು ನಗರದ ನಾನಾ ಬೀದಿಗಳಲ್ಲಿ ಸಂಚರಿಸಿ, ಮರುದಿನ ಏ.7ರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸಾಗುತ್ತದೆ.

ಕರಗ ಮೆರವಣಿಗೆಯೂ ನಗರ್ತಪೇಟೆ, ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ಎ.ಎಸ್.ಆರ್. ಜಂಕ್ಷನ್, ಕೆ.ಎಸ್.ಆರ್ ರಸ್ತೆ ಮೂಲಕ ಪೊಲೀಸ್ ರಸ್ತೆಯ ಮಾರ್ಗವಾಗಿ ಕಾಟನ್‌ಪೇಟೆ ಪೊಲೀಸ್ ಠಾಣೆಯ ಜಂಕ್ಷನ್ ಮಾರ್ಗವಾಗಿ ಕಾಟನ್‌ ಪೇಟೆ ಮುಖ್ಯರಸ್ತೆಯ ಮಾರ್ಗವಾಗಿ ಒಟಿಸಿ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ.

ವಾಪಸ್ ಅದೇ ಮಾರ್ಗವಾಗಿ ಸಂಚರಿಸಿ, ಕಿಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ಸ್ಟ್ರೀಟ್ ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ ಪೇಟೆ ಮೂಲಕ ಕರಗ ಏ.7 ರಂದು ಬೆಳಗ್ಗೆ 6 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಬರುತ್ತದೆ.

ಈ ಸುದ್ದಿ ಓದಿದ್ದೀರಾ? ಏಪ್ರಿಲ್ 10ರವರೆಗೆ ರಾಜ್ಯದಲ್ಲಿ ಜೋರು ಮಳೆ ಸಾಧ್ಯತೆ : ಹವಾಮಾನ ಇಲಾಖೆ

ಕರಗದಲ್ಲಿ ಅತ್ಯಧಿಕ ಭಕ್ತರು ಭಾಗವಹಿಸುವುದರಿಂದ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿದೆ.

  • ಕರಗ ಮರಳಿ ಬರುವವರೆಗೆ ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
  • ಎಸ್‌ ಜೆಪಿ ರಸ್ತೆ-ಟೌನ್‌ಹಾಲ್, ಕೆಂಪೇಗೌಡರಸ್ತೆ ಮಾರ್ಗವಾಗಿ ಪರ್ಯಾಯವಾಗಿ ಸಂಚರಿಸಬಹುದು.
  • ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ಸಂಚರಿಸುವ ವಾಹನಗಳು ಮೈಸೂರು ರಸ್ತೆಯ ಎ.ಎಸ್.ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತ-ರಾಯನ್ ವೃತ್ತದ ಮೂಲಕ ಸಂಚರಿಸಬಹುದು.
  • ಮೆರವಣಿಗೆ ಸಿಟಿ ಮಾರುಕಟ್ಟೆ ವೃತ್ತದಿಂದ ಮಾರ್ಕೆಟ್ ಮೂಲಕ ಹಾದು ಪೊಲೀಸ್ ರಸ್ತೆ ಮೂಲಕ ಅರಳೆಪೇಟೆಗೆ ಬರುವಾಗ, ಪೊಲೀಸ್‌ ರಸ್ತೆ ಪ್ರವೇಶಿಸುವವರೆಗೆ, ಬಿವಿಕೆ ಅಯ್ಯಂಗಾರ್ ರಸ್ತೆ ಮೂಲಕ ಮೈಸೂರುರಸ್ತೆ ಕಡೆಗೆ ಸಂಚರಿಸುವ ವಾಹನಗಳನ್ನು ಚಿಕ್ಕಪೇಟೆ ವೃತ್ತದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗದು. ಮೆರವಣಿಗೆ ಪೊಲೀಸ್‌ ರಸ್ತೆಯಲ್ಲಿ ಮುಂದೆ ಸಾಗಿದ ನಂತರ ಎ.ಎಸ್.ಚಾರ್‌ ರಸ್ತೆಯಲ್ಲಿ ಸಂಚರಿಸಬಹುದು.
  • ಕಾಟನ್‌ ಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಶಾಂತಲಾ ವೃತ್ತದಲ್ಲಿ ದಿಕ್ಕು ಬದಲಾಯಿಸಿ, ಜಿ.ಟಿ ರಸ್ತೆಯ ಮೂಲಕ ದೇವರಾಜ್‌ ಅರಸ್ ವೃತ್ತ (ಖೋಡೆ ವೃತ್ತ)-ವಾಟಾಳ್ ನಾಗರಾಜ್‌ ರಸ್ತೆ, ಬಿನ್ನಿಮಿಲ್ ರಸ್ತೆ ಮೂಲಕ ಮೈಸೂರು ರಸ್ತೆ ಮೂಲಕ ತೆರಳಬಹುದು.
  • ಡಾ.ಟಿ.ಸಿ.ಎಂ. ರಾಯನ್ ರಸ್ತೆ, ಮಿಲ್ ರಸ್ತೆ ಜಂಕ್ಷನ್‌ನಲ್ಲಿ ಕಾಟನ್‌ಪೇಟೆ ಮುಖ್ಯ ರಸ್ತೆ ಕಡೆಗೆ ಬರುವಂತ ವಾಹನಗಳ ಪ್ರವೇಶ/ಸಂಚಾರ ನಿರ್ಬಧಿಸಿ ಡಾ.ಟಿ.ಸಿ.ಎಂ. ರಾಯನ್ ರಸ್ತೆ ಮೂಲಕ ಶಾಂತಲಾ ವೃತ್ತದ ಕಡೆಗೆ ಸಂಚರಿಸಬಹುದು.
  • ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ ಹಾಗೂ ಪುರಭವನದಲ್ಲಿ ವಾಹನ ನಿಲುಗಡೆ ಮಾಡಬಹುದು ಎಂದು ತಿಳಿಸಿದೆ.
  • ಏ. 7ರಂದು ಧರ್ಮರಾಯಸ್ವಾಮಿ ರಥ ಮತ್ತು ಏ.6ರಂದು ಕರಗ ಉತ್ಸವದಲ್ಲಿ ಭಾಗವಹಿಸಿದ ರಥಗಳು ಏ.7 ರಂದು ರಾತ್ರಿ 08.00 ಗಂಟೆಯವರೆಗೆ ಅವೆನ್ಯೂ ರಸ್ತೆ ಹಾಗೂ ಪೊಲೀಸ್‌ ರಸ್ತೆಯಲ್ಲಿ ಹಾಗೂ ಕಾಟನ್‌ ಪೇಟೆ ಮುಖ್ಯರಸ್ತೆಯಲ್ಲಿ ನಿಲ್ಲುವುದರಿಂದ ಸಿಟಿ ಮಾರ್ಕೆಟ್ ವೃತ್ತದಿಂದ ಅವೆನ್ಯೂ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದ ವರೆಗೂ ಪೊಲೀಸ್ ರಸ್ತೆಯಲ್ಲಿ ಕಾಟನ್‌ ಪೇಟೆ ಹಾಗೂ ಮುಖ್ಯರಸ್ತೆಯಲ್ಲಿ ಏ.6 ರಾತ್ರಿ 12.00 ರಿಂದ ಏ.7ರ ಸಂಜೆ 8 ರವರೆಗೆ ಎಲ್ಲ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ.
  • ಪರ್ಯಾಯವಾಗಿ ಸಿಟಿ ಮಾರ್ಕೆಟ್ ವೃತ್ತದಿಂದ ಎಸ್.ಜೆ.ಪಿ ರಸ್ತೆ, ಟೌನ್‌ಹಾಲ್ ಕೆಂಪೇಗೌಡ ರಸ್ತೆ ಮಾರ್ಗವಾಗಿ ಸಂಚರಿಸಬಹುದು.
  • ಅಥವಾ ಪರ್ಯಾಯವಾಗಿ ಕಾಟನ್‌ ಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಶಾಂತಲಾ ವೃತ್ತದಲ್ಲಿ ಬಲತಿರುವು ಪಡೆದು ಜಿ.ಟಿ ರಸ್ತೆಯ ಮೂಲಕ ದೇವರಾಜ್ ಅರಸು ವೃತ್ತ(ಖೋಡೆ ವೃತ್ತ)-ವಾಟಾಳ್ ನಾಗರಾಜ್ ರಸ್ತೆ, ಬಿನ್ನಿಮಿಲ್ ರಸ್ತೆ ಮೂಲಕ ಮೈಸೂರು ರಸ್ತೆ ಮೂಲಕ ತೆರಳಬಹುದು.

ಸಂಚಾರ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ಕೋರಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ

ಇತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ...

ಬೆಂಗಳೂರು | ಪ್ರೀತಿ ನಿರಾಕರಣೆ; ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಯುವಕ

ಬೇರೊಬ್ಬರ ಜತೆಗೆ ನಿಶ್ಚಿತಾರ್ಥವಾದ ಬಳಿಕ ಐದಾರು ವರ್ಷದ ಪ್ರೀತಿಯನ್ನು ಕಡೆಗಣಿಸುತ್ತಿದ್ದಕ್ಕೆ ಯುವಕನೊಬ್ಬ...

ಬೆಂಗಳೂರು | ಕಳೆದ 11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣ ದಾಖಲು

2023 ವರ್ಷ ಕಳೆಯಲು ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ಈ...

ಬೆಂಗಳೂರು | ₹1,500 ಹಣದ ಸಂಧಾನಕ್ಕೆ ತೆರಳಿದ ವ್ಯಕ್ತಿಯ ಕೊಲೆ

ಸ್ನೇಹಿತರ ಹಣದ ವಿಚಾರದಲ್ಲಿ ಸಂಧಾನ ಮಾಡಲು ಹೋದ ಕೂಲಿ ಕಾರ್ಮಿಕನೊಬ್ಬನನ್ನು ಕೊಲೆಗೈದಿರುವ...