2027ರ ಯುಪಿ ಚುನಾವಣೆ; 181 ಕ್ಷೇತ್ರಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ: ಅಖಿಲೇಶ್ ಯಾದವ್

Date:

2027ರ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (ಒಟ್ಟು 403 ಕ್ಷೇತ್ರಗಳು) ಮಿತ್ರಪಕ್ಷ ಕಾಂಗ್ರೆಸ್ 181 ಸೀಟುಗಳ ಬೇಡಿಕೆ ಇಟ್ಟಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಬಹಿರಂಗಪಡಿಸಿದ್ದಾರೆ.

- Advertisement -

ಶನಿವಾರ (ನವೆಂಬರ್ 14) ನವದೆಹಲಿಯಲ್ಲಿ ನಡೆದ ‘ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆ 2026’ (HT Leadership Summit 2026) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈತ್ರಿಕೂಟದ ಸೀಟು ಹಂಚಿಕೆ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಮಾಹಿತಿಯನ್ನು ಮೊದಲ ಬಾರಿಗೆ ಅಧಿಕೃತವಾಗಿ ಖಚಿತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

25ರ ಹರೆಯದಲ್ಲೇ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾದ ಆದಿವಾಸಿ ಕ್ರಾಂತಿಕಾರಿ...

ಕೇವಲ 25 ವರ್ಷಗಳ ಬದುಕಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಸವಾಲು ಹಾಕಿ, ಸಾವಿರಾರು ಆದಿವಾಸಿಗಳನ್ನು ಸಂಘಟಿಸಿ, ಭೂಮಿಯ ಹಕ್ಕು ಮತ್ತು ಸ್ವಯಂ ಆಡಳಿತಕ್ಕಾಗಿ ಬೃಹತ್ ಚಳವಳಿಯನ್ನು ಕಟ್ಟಿದ ಬಿರ್ಸಾ ಮುಂಡಾ ಅವರು ಕೇವಲ...

ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ವೀಸಾ ರದ್ದತಿ ಪ್ರಕರಣ:...

ನಿರಂತರ ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯ, 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ಧಾಂತದ ಸಂವಿಧಾನದ ಮೂಲಕ ಸ್ಥಾಪಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಅವುಗಳನ್ನು ಕಾಪಾಡುವಲ್ಲಿ ಆಡಳಿತದ ಹೊಣೆಗಾರಿಕೆ ಭಾರತದ ಜಾಗತಿಕ ಪ್ರತಿಷ್ಠೆಯ ಮೂಲಾಧಾರಗಳಾಗಿವೆ. ನಾರ್ವೆಯ...

ಇದನ್ನೂ ಓದಿ: 2027ರ ಯುಪಿ ಚುನಾವಣೆಗೆ ಅಖಿಲೇಶ್ ಯಾದವ್ ಸಜ್ಜು; ಎಸ್‌ಪಿ ‘ಪಿಡಿಎ ರಥಯಾತ್ರೆ’ ಶುರು

ಸಂದರ್ಶಕರು, “ಕಾಂಗ್ರೆಸ್ 100 ಸೀಟುಗಳನ್ನು ಕೇಳುತ್ತಿದೆಯೇ?” ಎಂದು ಪ್ರಶ್ನಿಸಿದಾಗ, ಅಖಿಲೇಶ್ ಯಾದವ್ ಅವರು “ಅದಕ್ಕಿಂತ ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಟ್ಟಿದ್ದಾರೆ” ಎಂದರು. ನಂತರ “200 ಸೀಟುಗಳ ಬೇಡಿಕೆಯೇ?” ಎಂಬ ಪ್ರಶ್ನೆಗೆ “ಅದಕ್ಕಿಂತ ಸ್ವಲ್ಪ ಕಡಿಮೆ” ಎಂದು ಉತ್ತರಿಸಿದರು. ಅಂತಿಮವಾಗಿ ಸಂದರ್ಶಕರು “180 ಸೀಟುಗಳೇ?” ಎಂದು ಕೇಳಿದಾಗ, “180ಕ್ಕೆ ಇನ್ನೊಂದು ಸೇರಿಸಿ” ಎಂದು ಹೇಳುವ ಮೂಲಕ ಕಾಂಗ್ರೆಸ್ ಬರೋಬ್ಬರಿ 181 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದೆ ಎಂಬುದನ್ನು ಅಖಿಲೇಶ್ ಸ್ಪಷ್ಟಪಡಿಸಿದರು.

“ಕಾಂಗ್ರೆಸ್‌ನೊಂದಿಗಿನ ನಮ್ಮ ಸಂಬಂಧ ಉತ್ತಮವಾಗಿದೆ. ಈ ಹಿಂದೆ ಇದ್ದ ‘ಇಂಡಿಯಾ’ ಮೈತ್ರಿಕೂಟವೇ ಮುಂದುವರಿಯಲಿದ್ದು, ಮೈತ್ರಿಪಕ್ಷಗಳಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದರು. ಹಾಗೆಯೇ ಸಮಾಜವಾದಿ ಪಕ್ಷವು ತಾನು ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದೆ. ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 399 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಕೇವಲ ಶೇ. 2.33ರಷ್ಟು ಮತಗಳನ್ನು ಪಡೆದಿತ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿ 80 ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆದ್ದಿತ್ತು (ಇದರಲ್ಲಿ 17 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಜಯಗಳಿಸಿತ್ತು). ಇದೇ ಉತ್ಸಾಹದಲ್ಲಿ 2027ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಪಡೆಯಲು ಕಾಂಗ್ರೆಸ್ ನಿರೀಕ್ಷಿಸುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜ್ಞಾನ ಜಗತ್ತಿನ ಅಮೂಲ್ಯ ವಿಜ್ಞಾನಿ- ಪ್ರೊ. ಅಮೂಲ್ಯ ಕುಮಾರ್ ರೆಡ್ಡಿ

ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ...

ಎನ್‌ವಿಡಿಯಾ ಗೂಢಚರ್ಯೆ ಭೀತಿ: ಚೀನಾದ ಮೇಲಿನ ಚಿಪ್ ದಿಗ್ಬಂಧನ ವಿಫಲ, ಒಳಜಗಳಕ್ಕೆ ಇಳಿದ ಅಮೆರಿಕದ ಆಡಳಿತ ವರ್ಗ

ನವೆಂಬರ್ 18-19ರಂದು ಚೀನಾದ ಶೆನ್‌ಜೆನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಟ್ರಂಪ್ ಚೀನಾ ಅಧ್ಯಕ್ಷ...

ಮ್ಯಾಡ್ ಸಂಧು ಹತ್ಯೆ ಪ್ರಕರಣದ ಶೂಟರ್ ಬಂಧನ: ಅಮಿತಾಭ್ ಬಚ್ಚನ್ ಹತ್ಯೆ ಸಂಚು ಬಯಲು

ಪಂಜಾಬ್‌ನ ಜನಪ್ರಿಯ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ 'ಮ್ಯಾಡ್ ಸಂಧು' (ಮಧುಸೂದನ್) ಹತ್ಯೆ ಪ್ರಕರಣದಲ್ಲಿ...