2027ರ ಯುಪಿ ಚುನಾವಣೆಗೆ ಅಖಿಲೇಶ್ ಯಾದವ್ ಸಜ್ಜು; ಎಸ್‌ಪಿ ‘ಪಿಡಿಎ ರಥಯಾತ್ರೆ’ ಶುರು

Date:

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಾರ್ಟಿ (ಎಸ್‌ಪಿ) ತನ್ನ ಪ್ರಚಾರ ಕಾರ್ಯತಂತ್ರವನ್ನು ಚುರುಕುಗೊಳಿಸಿದ್ದು, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ‘ಪಿಡಿಎ ರಥಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಲಖನೌದಿಂದ ರಾಯ್‌ಬರೇಲಿಗೆ ಪ್ರಯಾಣಿಸುವ ಮೂಲಕ ಈ ಹೈಟೆಕ್ ಕೆಂಪು ಬಣ್ಣದ ‘ಪಿಡಿಎ ರಥ’ ಪ್ರಚಾರ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

- Advertisement -

ಅಖಿಲೇಶ್ ಯಾದವ್ ರೂಪಿಸಿರುವ ‘ಪಿಡಿಎ’ ಅಂದರೆ ಪಿ – ಪಿಛ್ಡೇ (ಹಿಂದುಳಿದ ವರ್ಗಗಳು), ಡಿ – ದಲಿತರು, ಎ – ಅಲ್ಪಸಂಖ್ಯಾತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಸಾಮಾಜಿಕ ಸೂತ್ರವು ಸಮಾಜವಾದಿ ಪಾರ್ಟಿಗೆ ಅತ್ಯುತ್ತಮ ಯಶಸ್ಸು ತಂದುಕೊಟ್ಟಿತ್ತು. ಇದೇ ಧಾಟಿಯಲ್ಲಿ ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಯಾತ್ರೆಯನ್ನು ನಡೆಸಿ, ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಸಮುದಾಯಗಳನ್ನು ಒಗ್ಗೂಡಿಸುವುದು ಈ ರಥಯಾತ್ರೆಯ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಶ್ರೀನಿವಾಸರಾಜು ದೊಡ್ಡೇರಿ ಅವರ ‘ಬಾಬಾ...

ಕನ್ನಡದ ಅಪರೂಪದ ಬರಹಗಾರ, ಅನುವಾದಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಅನುವಾದಿಸಿರುವ 'ಬಾಬಾ ಸಾಹೇಬ್' ಕೃತಿಯು ಇಂದು ಭಾನುವಾರ ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕೃತಿಯ ಒಂದು ಆಯ್ದ ಭಾಗ... ಈದಿನ ಓದುಗರಿಗಾಗಿ... 'ಭಾರತದಲ್ಲಿ...

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ...

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಇದನ್ನೂ ಓದಿ: ಮುಸ್ಲಿಮರ ಮೀಸಲಾತಿ ಬಗ್ಗೆ ಸತ್ಯ ಮರೆಮಾಚಿ ಬಿಜೆಪಿಯಿಂದ ಸುಳ್ಳು ಜಾಹೀರಾತು: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರವಾದ ರಾಯ್‌ಬರೇಲಿಯಿಂದಲೇ ಈ ಯಾತ್ರೆ ಆರಂಭವಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ರಾಯ್‌ಬರೇಲಿಯಲ್ಲಿ ಎಸ್‌ಪಿ ಬೆಂಬಲಿತ ವಿದ್ಯಾರ್ಥಿ ಘಟಕ ಹಾಗೂ ಎಬಿವಿಪಿ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಯ ನಂತರ ಪಕ್ಷದ ಕಾರ್ಯಕರ್ತರು ಮತ್ತು ಹರ್‌ಚಂದ್‌ಪುರ ಶಾಸಕ ರಾಹುಲ್ ಲೋಧಿ (ಒಬಿಸಿ) ಹಾಗೂ ಬಛ್‌ರಾವಾ ಶಾಸಕ ಶ್ಯಾಮ್ ಸುಂದರ್ ಭಾರತಿ (ದಲಿತ/ಪಾಸಿ ಸಮುದಾಯ) ಅವರ ಬೆಂಬಲಕ್ಕೆ ನಿಲ್ಲಲು ಅಖಿಲೇಶ್ ರಾಯ್‌ಬರೇಲಿಗೆ ಭೇಟಿ ನೀಡಿದ್ದಾರೆ.

ಅವಧ್ ಪ್ರದೇಶದ ಲೋಧಿ ಮತ್ತು ಪಾಸಿ ಸಮುದಾಯಗಳ ಮತಗಳನ್ನು ಭದ್ರಪಡಿಸಿಕೊಳ್ಳುವುದು ಮತ್ತು ಇಂಡಿಯಾ ಒಕ್ಕೂಟದಲ್ಲಿ ತನ್ನ ರಾಜಕೀಯ ಪ್ರಭಾವವನ್ನು ಕಾಯ್ದುಕೊಳ್ಳುವುದು ಎಸ್‌ಪಿ ತಂತ್ರವಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೆಂಪು ಬಣ್ಣದ ಈ ಬಸ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಸಮಾಜ ಸುಧಾರಕರ ಚಿತ್ರಗಳನ್ನು ಹಾಕಲಾಗಿದ್ದು, “ಸಾಮಾಜಿಕ ನ್ಯಾಯದ ಪತಾಕೆ ಹಾರಲಿದೆ, ಪಿಡಿಎ ಬದಲಾವಣೆ ತರಲಿದೆ” ಎಂಬ ಘೋಷಣೆಗಳನ್ನು ಬರೆಯಲಾಗಿದೆ. ಯಾತ್ರೆಯ ಸಮಯದಲ್ಲಿ ಅಖಿಲೇಶ್ ಯಾದವ್ ಅವರು ಸ್ಥಳೀಯ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ...

ನಾಲ್ವರು ನಾಗರಿಕರ ಹತ್ಯೆ: ಕೇಂದ್ರ, ಮಣಿಪುರ ಸರ್ಕಾರಕ್ಕೆ 3 ದಿನಗಳ ಗಡುವು ನೀಡಿದ ನಾಗಾ ಸಂಘಟನೆ

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ (ನವೆಂಬರ್ 13) ಶಂಕಿತ ಉಗ್ರರ ಗುಂಡಿನ...

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ...

ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಮೋಹಿತ್ ಉಲ್ವಾ; ಪಾಕ್ ಮಣಿಸಿ 9ನೇ ಬಾರಿ ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ

ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ 'ಎಸಿಸಿ ಪುರುಷರ ಅಂಡರ್-19 ಏಷ್ಯಾ...