40% ಜಾಗತಿಕ ಉದ್ಯೋಗಗಳಿಗೆ ಹೊಡೆತ; AI ಕುರಿತು IMF ಮುಖ್ಯಸ್ಥರ ಎಚ್ಚರಿಕೆ

Date:

ಕೃತಕ ಬುದ್ಧಿಮತ್ತೆ (AI) ಪ್ರಭಾವದಿಂದ ಜಾಗತಿಕವಾಗಿ ಅಂದಾಜು 40%ರಷ್ಟು – ವಿಶೇಷವಾಗಿ ಆರಂಭಿಕ ಹಂತದ ಉದ್ಯೋಗಗಳು – ಹೊಡೆತ ಅನುಭವಿಸಲಿವೆ ಎಂದು ‘ಅಂತಾರಾಷ್ಟ್ರೀಯ ಹಣಕಾಸು ನಿಧಿ’ (IMF) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

- Advertisement -

ಇತ್ತೀಚೆಗೆ, ಎನ್‌ಡಿಟಿವಿ ನಡೆಸಿದ ಸಂದರ್ಶನದಲ್ಲಿ ಅವರು ಆರ್ಥಿಕತೆ ಮತ್ತು ಕಾರ್ಮಿಕ ಮಾರುಕಟ್ಟೆಯ ಮೇಲೆ ಎಐ ಪ್ರಭಾವದ ಕುರಿತು ವಿವರಿಸಿದ್ದಾರೆ. ಕಾರ್ಮಿಕ ಮಾರುಕಟ್ಟೆಯನ್ನು ಹೊಡೆಹಾಕುವ ಸುನಾಮಿಯಾಗಿ ಎಐ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಐಎಂಎಫ್‌ ಬೆಂಬಲಿತ ಅಧ್ಯಯನವನ್ನು ಉಲ್ಲೇಖಿಸಿದ ಅವರು, “ಮುಂದುವರಿದ ಆರ್ಥಿಕತೆ ಹೊಂದಿರುವ ರಾಷ್ಟ್ರಗಳಲ್ಲಿ ಉದ್ಯೋಗಗಳ ಮೇಲಿನ ಹೊಡೆತವು 60%ರೆಗೆ ಹೆಚ್ಚಾಗಬಹುದು. ಭಾರತದಲ್ಲಿ ಸುಮಾರು 26% ಉದ್ಯೋಗಗಳು ಎಐ ಪ್ರಭಾವದಿಂದ ಹೊಡೆತಕ್ಕೆ ಸಿಲುಕಲಿವೆ” ಎಂದು ಹೇಳಿದ್ದಾರೆ.

“ಎಐನಿಂದ ಯಾರು ಒತ್ತಡಕ್ಕೊಳಗಾಗುತ್ತಾರೆ? ನಾವು ವಿಶೇಷವಾಗಿ ಚಿಂತಿಸುವ ಉದ್ಯೋಗಗಳ ವರ್ಗ. ಈ ವರ್ಗವು ಈಗಾಗಲೇ ಹೊಡೆತ ಎದುರಿಸುತ್ತಿವೆ ಎಂಬುದಕ್ಕೆ ಪುರಾವೆಗಳಿವೆ. ಉದ್ಯೋಗ ಹರಸುತ್ತಿರುವ ಯುವ ಪದವೀಧರರು ತೀವ್ರ ಪರಿಣಾಮ ಎದುರಿಸುತ್ತಿದ್ದಾರೆ” ಎಂದಿದ್ದಾರೆ.

“ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ, ಭಾರತವು ಈಗಾಗಲೇ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಯುವಜನರು ಈ ಗುಂಪನ್ನು ಸೇರುತ್ತಿದ್ದಾರೆ. ಉದ್ಯೋಗಗಳನ್ನು ಸೃಷ್ಟಿಸಲು ಫೆಡರಲ್ ಮತ್ತು ರಾಜ್ಯ ಸರ್ಕಾರಗಳ ಮೇಲೆ ಗಮನಾರ್ಹ ಒತ್ತಡವಿದೆ. ಆದರೆ, ಈಗ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನದ ‘ಸುನಾಮಿ’ಯಿಂದ ಈ ಒತ್ತಡವು ಮತ್ತಷ್ಟು ಉಲ್ಬಣಗೊಳ್ಳಬಹುದು” ಎಂದು ವಿವರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಯುದ್ಧದ ಕಾರ್ಮೋಡ; ಭಾರತದ ಆರ್ಥಿಕತೆ, ಭದ್ರತೆಗೇನು ಸವಾಲು?

“ಆದಾಗ್ಯೂ, ಸರಿಯಾಗಿ ನಿರ್ವಹಿಸಿದರೆ, AI ತಂತ್ರಜ್ಞಾನದ ಅಳವಡಿಕೆಯು ಭಾರತದ GDPಯನ್ನು ವಾರ್ಷಿಕವಾಗಿ 0.7%ರಷ್ಟು ಹೆಚ್ಚಿಸಬಹುದು. ಇದು ದೇಶವನ್ನು ದೀರ್ಘಾವಧಿಯ ಬೆಳವಣಿಗೆಯ ಗುರಿಗಳಿಗೆ ಹತ್ತಿರ ತರುತ್ತದೆ. ನಾನು ಭಾರತೀಯ ಆರ್ಥಿಕತೆಯನ್ನು ನೋಡಿದಾಗ, ನೀವು ತೆರಿಗೆಯಲ್ಲಿ ಆಳವಾದ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದ್ದೀರಿ… ಕಾರ್ಮಿಕ ಮಾರುಕಟ್ಟೆಗಳಲ್ಲಿ ಭಾರತವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು, ಈ AI ಜಗತ್ತಿಗೆ ಹೆಚ್ಚು ಸಿದ್ಧವಾಗುವಂತೆ ಮಾಡಲು, ಕೌಶಲ್ಯಗಳನ್ನು ಹೇಗೆ ನಿಯೋಜಿಸಬೇಕು ಎಂಬುದರಲ್ಲಿ ನಮ್ಯತೆ ಇರಬೇಕು” ಎಂದು ಜಾರ್ಜೀವಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...