ಪಶ್ಚಿಮ ಬಂಗಾಳ | ಮಾರ್ಗಸೂಚಿ ಉಲ್ಲಂಘಿಸಿ ಪಟಾಕಿ ಸಿಡಿಸಿದ ಜನತೆ: ಕೋಲ್ಕತ್ತಾ, ಹೌರಾ ಗಾಳಿ ಗುಣಮಟ್ಟ ಕುಸಿತ

Date:

ಕಾಳಿ ಪೂಜೆಯ ರಾತ್ರಿ ಕಳೆಯುತ್ತಿದ್ದಂತೆ ಪಶ್ಚಿಮ ಬಂಗಾಳದ ಕೋಲ್ಕತ್ತಾ, ಹೌರಾದಲ್ಲಿ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ರಾತ್ರಿ 8ರಿಂದ ರಾತ್ರಿ 10ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿತ್ತು. ಆದರೆ ಮಾರ್ಗಸೂಚಿ ಉಲ್ಲಂಘಿಸಿ ಹಲವು ಕಡೆ ನಿಗದಿತ ಸಮಯಕ್ಕಿಂತ ಅಧಿಕ ಅವಧಿ ಪಟಾಕಿ ಸಿಡಿಸಲಾಗಿದೆ. ಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿ (ಡಬ್ಲ್ಯೂಬಿಪಿಸಿಬಿ) ಮತ್ತು ಪೊಲೀಸರು ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರವಾದಿಗಳು ಮಂಗಳವಾರ ತಿಳಿಸಿದ್ದಾರೆ.

- Advertisement -

ಕೋಲ್ಕತ್ತಾದ ವಿಕ್ಟೋರಿಯಾ ಸ್ಮಾರಕದಲ್ಲಿ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 186 PM 2.5ಕ್ಕೆ ತಲುಪಿದೆ. ಸೋಮವಾರ ರಾತ್ರಿ 10 ಗಂಟೆಗೆ ಹೌರಾದ ಬೇಲೂರಿನಲ್ಲಿ ವಾಯು ಗುಣಮಟ್ಟ 364ಕ್ಕೆ ತಲುಪಿದೆ ಎಂದು ಡಬ್ಲ್ಯೂಬಿಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 151ರಿಂದ 200ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು ‘ಕಳಪೆ’ ಎಂದು ಪರಿಗಣಿಸಲಾಗುತ್ತದೆ. 201ರಿಂದ 300 ‘ತುಂಬಾ ಕಳಪೆ’ ಎಂದು ಮತ್ತು 300ಕ್ಕಿಂತ ಹೆಚ್ಚಿನದನ್ನು ‘ಗಂಭೀರ’ ಎಂದು ವರ್ಗೀಕರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಇದನ್ನು ಓದಿದ್ದೀರಾ? ಪಟಾಕಿ ಎಫೆಕ್ಟ್ | ದೆಹಲಿಯಲ್ಲಿ ಗಾಳಿ ಗುಣಮಟ್ಟ ತೀವ್ರ ಕುಸಿತ

ಕೋಲ್ಕತ್ತಾದ ಪದ್ಮಪುಕುರ್‌ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 361ರಷ್ಟಿದೆ. ಆದರೆ ಹೌರಾ ಜಿಲ್ಲೆಯ ಘುಸುರಿಯಲ್ಲಿ ವಾಯು ಗುಣಮಟ್ಟ 252 ಅನ್ನು ಮೀರಿದೆ. ಕೋಲ್ಕತ್ತಾದ ಬ್ಯಾಲಿಗಂಜ್‌ನಲ್ಲಿ, ವಾಯು ಗುಣಮಟ್ಟ ಸೂಚ್ಯಂಕ 173 ಕ್ಕೆ ತಲುಪಿದ್ದರೆ, ಜಾದವ್‌ಪುರದಲ್ಲಿ 169ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪರಿಸರವಾದಿ ಸೋಮೇಂದ್ರ ಮೋಹನ್ ಘೋಷ್, “ಉತ್ತರ ಮತ್ತು ದಕ್ಷಿಣ ಕೋಲ್ಕತ್ತಾ ಮತ್ತು ಹೌರಾದಲ್ಲಿ ಅಧಿಕ ಶಬ್ದ ಮಾಡುವ ಪಟಾಕಿಗಳನ್ನು ಹೆಚ್ಚಾಗಿ, ಆಗಾಗ್ಗೆ ಬಳಸಲಾಗುತ್ತಿದೆ. ಕಾಶಿಪುರ, ಸಿಂಥಿ, ಜೋರಾಸಂಕೊ, ಮಾಣಿಕ್ತಲಾ ಹೀಗೆ ಹಲವೆಡೆ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಸಿಡಿಸಲಾಗಿದೆ. ಪೊಲೀಸರು ಮತ್ತು ಡಬ್ಲ್ಯೂಬಿಪಿಸಿಬಿ ಅಧಿಕಾರಿಗಳು ಇವೆಲ್ಲವನ್ನೂ ಬರೀ ನೋಡುತ್ತಾ ಕೂತಿದ್ದಾರೆ. ಇಂತಹ ಪಟಾಕಿಗಳ ಮಾರಾಟ, ಬಳಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.

“ಹೌರಾದಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಮಂಗಳವಾರ ಕಾಳಿ ಪೂಜೆಯ ನಂತರ ಪರಿಸ್ಥಿತಿ ಇನ್ನಷ್ಟೂ ಕೆಟ್ಟದಾಗಲಿದೆ” ಎಂದರು. ಇನ್ನು ಪರಿಸರವಾದಿಗಳ ಸಂಘಟನೆಯಾದ ಸಬುಜ್ ಮಂಚ್‌ನ ನಬಾ ದತ್ತಾ, ಪೊಲೀಸರು ನಿಯಮಗಳನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಹಾಗೆಯೇ ಇದರಿಂದಾಗಿ ವೃದ್ಧರು, ಅಸ್ವಸ್ಥರು, ಮಕ್ಕಳು, ಸಾಕುಪ್ರಾಣಿಗಳು ಮಾಲಿನ್ಯದ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸರ್ಕಾರ ECಗೆ ಇಮ್ಯೂನಿಟಿ ನೀಡಿದ್ದರೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗಲ್ಲ: ಕಪಿಲ್ ಸಿಬಲ್

ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕ್ರಿಮಿನಲ್ ಪ್ರಕರಣಗಳಿಂದ ಕಾನೂನು ರಕ್ಷಣೆ ನೀಡಲಾಗಿದೆ...

UPI ವಹಿವಾಟಿನ ಮೇಲಿನ ಶುಲ್ಕಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ 2,000 ರೂ.ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ...

‘ದೇಶದ ನೌಕರಶಾಹಿ ಆತ್ಮಸಾಕ್ಷಿಯ ಕರೆಯನ್ನು ಆಲಿಸಬೇಕು.’ ಮಾಜಿ ಚುನಾವಣಾ ಆಯುಕ್ತ ಅಶೋಕ್‌ ಲವಾಸ ಹೇಳಿದ ಆತ್ಮಸಾಕ್ಷಿಯ ಕತೆ

ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಹಾದಿಯಲ್ಲಿ ನೈತಿಕ ಸಂದಿಗ್ಧತೆಯನ್ನು ಎದುರಿಸಿದಾಗ,...

ವರ್ಷಗಳಿಂದ ನೀರಿಲ್ಲದೆ ಸೊರಗಿದ ಗ್ರಾಮ; ಹತಾಶೆಯಿಂದ ಊರನ್ನೇ ಬಿಕರಿಗಿಟ್ಟ ನಿವಾಸಿಗಳು

ಒಂದೆಡೆ ನೀರಾವರಿ ಯೋಜನೆ, ಇನ್ನೊಂದೆಡೆ ನೀರಿಗಾಗಿ ಪರದಾಡುವ ರೈತರು. ಯೋಜನೆ ಆರಂಭವಾಗಿ...