ಮಾವೋವಾದ ಮುಕ್ತ ಭಾರತದ ಹೆಸರಿನಲ್ಲಿ ಆದಿವಾಸಿಗಳ ಬದುಕಿಗೆ ಕೊಡಲಿ ಪೆಟ್ಟು

Date:

ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದವರ ಮೇಲೆ ಅಪರಾಧ ಪ್ರಕರಣ ದಾಖಲಿಸಿ ಕ್ರಿಮಿನಲ್‌ಗಳು ಎಂದು ಹೋರಾಟಗಾರರನ್ನು ಬಿಂಬಿಸಲಾಗುತ್ತಿದೆ. ಅಕ್ಷರಶಃ ಭಯದ ವಾತಾವರಣದಲ್ಲಿಟ್ಟು ಸರ್ಕಾರ ಮಾವೋವಾದಿ ಮುಕ್ತ ನಕ್ಸಲ್‌ ನಿರ್ಮೂಲನ ದೇಶ ಕಟ್ಟಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಹೇಸಿಗೆಗೆ ಸಾಕ್ಷಿಯಾಗಿದೆ.

- Advertisement -

ನಕ್ಸಲಿಸಂ ಎಂಬ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ಸದೆ ಬಡೆಯುತ್ತೇವೆ ಎಂಬ ಹೇಳಿಕೆ ನೀಡಿರುವ ಶಾ, ಮಾರ್ಚ್‌ 31 ರಂದು ಛತ್ತಿಸ್‌ಗಢದ ಬಸ್ತಾರ್‌ ಕೂಡ ಮಾವೋವಾದಿಗಳಿಂದ ಮುಕ್ತವಾಗಲಿದೆ ಎಂದಿದ್ದಾರೆ. ಬಸ್ತರ್‌ ಮಾವೋವಾದಿಗಳಿಗೆ ಕೇಂದ್ರ ಸರ್ಕಾರ ಮಾರ್ಚ್‌ 31ರ ಗಡುವು ನೀಡಿತ್ತು. ಮಾರ್ಚ್‌ 31ರ ಒಳಗೆ ಶರಣಾಗದೆ ಇದ್ದರೆ, ಯಾವುದೇ ಹಿಂಸಾತ್ಮಕ ಘಟನೆಗಳಿಗೆ ಕಾರಣವಾದರೆ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಅಮಿತ್‌ ಶಾ ಎಚ್ಚರಿಕೆ ನೀಡಿದ್ದರು. ನಕ್ಸಲ್‌ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಪಣ ತೊಟ್ಟಿರುವುದಾಗಿ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ದೇಶವನ್ನು ನಕ್ಸಲ್‌ ಮುಕ್ತವಾಗಿಸಿದ ಅಧಿಕೃತ ಘೋಷಣೆ ದೇಶದ ಪ್ರಜೆಗಳಿಗೆ ತಿಳಿಸಲಾಗುತ್ತದೆ. ಪ್ರಸ್ತುತ ಭಾರತ ನಕ್ಸಲ್‌ ಚಟುವಟಿಕೆಗಳಿಂದ ಮುಕ್ತವಾಗುವ ಹಾದಿಯಲ್ಲಿದೆ ಎಂದ ಅಮಿತ್‌ ಶಾ, ಬಸ್ತಾರಿನ ಮಾವೋವಾದಿಗಳಿಂದಾಗಿ ಆ ಪ್ರದೇಶ ಅಭಿವೃದ್ದಿಗೊಂಡಿಲ್ಲ, ಇನ್ನು ಮುಂದೆ ಬಸ್ತಾರಿನ ಜನರು ಅಭಿವೃದ್ಧಿಯ ಹಾದಿಗೆ ಮರಳಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಭಾರತದ ಹೃದಯ ಭಾಗದಲ್ಲಿರುವ ಛತ್ತೀಸ್‌ಗಡ ರಾಜ್ಯದ ಕಗ್ಗಾಡು ಪ್ರದೇಶ ಬಸ್ತಾರ್‌, ಸುಮಾರು 33,000 ಚದರ ಕಿಲೋಮೀಟರ್‌ ವಿಸ್ತೀರ್ಣ ಹಬ್ಬಿರುವ ಬಸ್ತಾರ್‌ ಜೀವವೈವಿಧ್ಯ ಹೊಂದಿರುವ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಸುಮಾರು 2.7 ಮಿಲಿಯನ್‌ ಜನ ವಾಸ್ತವ್ಯವಿರುವ ಪ್ರದೇಶವಿದು. ಇದರಲ್ಲಿ ಮೂರನೇ ಎರಡರಷ್ಟು ಪ್ರಮಾಣ ಆದಿವಾಸಿಗಳಿದ್ದಾರೆ.

madonar protest 768x432 2

ಗೊಂಡ, ಮರಿಯಾ, ಹಲ್ಬ, ಮುರಿಯ ಸಮುದಾಯದ ಆದಿವಾಸಿ ಬುಡಕಟ್ಟು ಪಂಗಡಗಳು ವಾಸ್ತವ್ಯ ಹೂಡಿವೆ. ಸುಮಾರು ಮೂರು ದಶಕಗಳ ಕಾಲ ಇಲ್ಲಿ ಸಿಪಿಐ ಪ್ರಭಾವ ಬಲವಾಗಿತ್ತು. ಎಡಪಂಥೀಯ ಉಗ್ರಗಾಮಿಗಳು, ನಕ್ಸಲರು, ಮಾವೋವಾದಿಗಳು ಹೀಗೆಲ್ಲಾ ಕರೆಯಲ್ಪಡುವವರು ಬಹುಪಾಲು ಇಲ್ಲಿನ ಆದಿವಾಸಿಗಳು.

2023 ಡಿಸೆಂಬರ್‌ನಲ್ಲಿ ಈ ಪ್ರದೇಶವನ್ನು 2026 ಮಾರ್ಚ್‌ 31ಕ್ಕೆ ಸಂಪೂರ್ಣವಾಗಿ ಮಾವೋವಾದಿಗಳಿಂದ ಮುಕ್ತವಾಗಿಸುತ್ತೇವೆ ಎಂದು ಸರ್ಕಾರ ಘೋಷಿಸುತ್ತದೆ. ಈ ಆದೇಶದ ಬೆನ್ನಲ್ಲಿ ನಡೆದ ಕಾರ್ಯಾಚಾರಣೆಗಳು ಆದಿವಾಸಿಗಳ ಮೂಲ ನೆಲೆಯ ಸುತ್ತಲೂ ಸೇನಾ ಕಾರ್ಯಾಚರಣೆ ನಡೆಯುತ್ತದೆ. ದಂಗೆ ನಿಗ್ರಹ ಎನ್‌ಕೌಂಟರ್‌ ಹೆಸರಿನಲ್ಲಿ ಹಲವರನ್ನು ಕೊಲೆಗಯ್ಯುತ್ತಾರೆ. ಯುವ ನಾಯಕರನ್ನು ಕಾರಾಗೃಹಕ್ಕೆ ದಬ್ಬುತ್ತಾರೆ. ಉಗ್ರ ನಿಗ್ರಹ ಕಾರ್ಯದ ಹೆಸರಿನಲ್ಲಿ ಸಾರ್ವಜನಿಕ ಭದ್ರತೆಯ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತದೆ.

ಇದನ್ನೂ ಓದಿ>>ನಕ್ಸಲಿಸಂ ಅಂತ್ಯಗೊಳಿಸಲು ನಕ್ಸಲರನ್ನು ಕೊಲ್ಲುವುದು ಸರ್ಕಾರದ ಉದ್ದೇಶವಲ್ಲ: ಛತ್ತೀಸ್‌ಗಢ ಗೃಹ ಸಚಿವ

ಅದೇ ಸಮಯದಲ್ಲಿ ಗಣಿಗಾರಿಕೆಗೆ ಖಾಸಗಿ ಕಂಪನಿಗಳ ಜೊತೆಗೆ ಸರ್ಕಾರ ಒಪ್ಪಂದಕ್ಕೆ ಇಳಿಯುತ್ತದೆ. ಏಕಕಾಲದಲ್ಲಿ ಸರ್ಕಾರ ತನ್ನ ಹಲವು ಕುತಂತ್ರ ನೀತಿಗಳನ್ನು ಪ್ರಯೋಗಕ್ಕೆ ತಂದು ಬುಡಕಟ್ಟು ಜನ ಸಮುದಾಯದ ಹಕ್ಕುಗಳನ್ನು ಹೊಸಕಿ ಹಾಕುವಲ್ಲಿ ಸಫಲತೆ ಸಾಧಿಸುತ್ತದೆ.

ಮಿಲಿಟರೀಕರಣದ ಹೆಸರಿನಲ್ಲಿ ಆದಿವಾಸಿ ಸಮುದಾಯದ ವಸತಿ ಪ್ರದೇಶಗಳ ನಡುವೆ ಅರೆಸೇನಾ ಮತ್ತು ವಿಶೇಷ ಸೇನಾ ಪಡೆಗಳ ನಿಯೋಜನೆ ಮಾಡುತ್ತದೆ. ಇದರಿಂದ ನಾಗರಿಕ ಸಮಾಜ ಭಯದಲ್ಲಿ ಜೇವನ ಸಾಗಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

bastar 5 copy 768x432 1

ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದವರ ಮೇಲೆ ಅಪರಾಧ ಪ್ರಕರಣ ದಾಖಲಿಸಿ ಕ್ರಿಮಿನಲ್‌ಗಳು ಎಂದು ಹೋರಾಟಗಾರರನ್ನು ಬಿಂಬಿಸಲಾಗುತ್ತಿದೆ. ಅಕ್ಷರಶಃ ಭಯದ ವಾತಾವರಣದಲ್ಲಿಟ್ಟು ಸರ್ಕಾರ ಮಾವೋವಾದಿ ಮುಕ್ತ ನಕ್ಸಲ್‌ ನಿರ್ಮೂಲನ ದೇಶ ಕಟ್ಟಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಹೇಸಿಗೆಗೆ ಸಾಕ್ಷಿಯಾಗಿದೆ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ, ಸಾಂವಿಧಾನಿಕ ಭರವಸೆಗಳು ವಿಫಲವಾದಾಗ, ಅಧಿಕಾರಶಾಹಿ ಮತ್ತು ಮಿಲಿಟರಿ ಶಕ್ತಿಗಳು ಸಮುದಾಯದ ಸಂಘಟನೆಯನ್ನು ಹತ್ತಿಕ್ಕಲು ಒಗ್ಗೂಡುತ್ತವೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಕಡಿಮೆ ಮಾಡುತ್ತದೆ. 

ಒಟ್ಟಾರೆಯಾಗಿ, ಮಿಲಿಟರೀಕರಣ ಮತ್ತು ಅಪರಾಧೀಕರಣವು ನಾಗರಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಮತ್ತು ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ಪ್ರಯತ್ನವಾಗಿದೆ.

ಛತ್ತೀಸ್‌ಗಡದ ಮುಖ್ಯಮಂತ್ರಿ ವಿಷ್ಣು ದಿಯೊ ಸಾಯ್‌ ಹೇಳಿಕೆಗಳು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಬಸ್ತಾರ್‌ ಕೆಂಪು ಸೇನೆ ಕಾರ್ಯಪ್ರವೃತ್ತವಾಗಿದ್ದ ಈ ಪ್ರದೇಶಗಳಲ್ಲಿ ಗಣಿಗಾರಿಕೆ ಆರಂಭಿಸುವ ಉದ್ದೇಶ ಸರ್ಕಾರಕ್ಕೆ ಇದೆ ಎಂಬ ಊಹಾಪೋಹಹ ರಿದಾಡುತ್ತಿದೆ. ಇಂತಹ ಯಾವ ಉದ್ದೇಶಗಳನ್ನೂ ಸರ್ಕಾರ ಹೊಂದಿಲ್ಲ ಎಂದು ಶಾಸಕಾಂಗ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ವಿಜಯ್‌ ಶರ್ಮ ಮಾತನಾಡುತ್ತ, ಮಾವೋವಾದ ಪೂರ್ಣವಾಗಿ ತೊಡೆದು ಹಾಕಲಾಗುತ್ತದೆ. ಬಸ್ತಾರಿನ ಬುಡಕಟ್ಟು ಜನರ ಸಂಸ್ಕೃತಿಯನ್ನು ಉಳಿಸುವ ಮೂಲಕವೇ ಬಸ್ತಾರಿನ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಗೃಹ ಮಂತ್ರಿಯು ಆಗಿರುವ ಶರ್ಮ ಈ ಪ್ರದೇಶದ ಅಭಿವೃದ್ಧಿಗೆ ಇಲ್ಲಿನ ಕಿರು ಅರಣ್ಯಗಳ ಸಂಪತ್ತನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಹೇಳಿಕೆ ಇಲ್ಲಿನ ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆಯುವ ಹುನ್ನಾರ ಸರ್ಕಾರಕ್ಕೆ ಇದೆ ಆದರಿಂದಲೇ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕಿ ಅವರ ಪಾರಂಪರಿಕ ವಾಸಸ್ಥಾನಗಳಿಗೆ ಕೊಡಲಿ ಹಾಕುವ ಕೆಲಸ ಮಾಡುತ್ತಿದೆ ಎಂಬುದನ್ನು ಖಚಿತಗೊಳಿಸಿದೆ.

ಕಬ್ಬಿಣ, ಕಲ್ಲಿದ್ದಲು, ಟಿನ್‌, ಸೇರಿದಂತೆ ಅಪರೂಪದ ಖನಿಜ ಸಂಪತ್ತು ಹೊಂದಿರುವ ಈಶಾನ್ಯ ರಾಜ್ಯಗಳ ಅರಣ್ಯ ವಲಯಗಳಲ್ಲಿ ಗಣಿಗಾರಿಕೆ ಆರಂಭಿಸಿ ತಮ್ಮ ಯಜಮಾನರ ಜೇಬು ತುಂಬುತ್ತಾ ಅಳಿದುಳಿದ ಪಾಲನ್ನು ತಾನು ಕಬಳಿಸುವ ನರಿಬುದ್ಧಿಯ ರಾಜಕಾರಣಿಗಳಿಗೆ ಕಾಡಿನ ಮಕ್ಕಳು ಖಳನಾಯಕರಂತೆ ಕಾಣುತ್ತಾರೆ, ಪೀಳಿಗೆಗಳಿಂದ ಕಾಡುಗಳ ರಕ್ಷಣೆ ಇವರಿಂದಲೇ ಆಗಿದೆ. ತಮ್ಮ ಪೂರ್ವಜರ ಕಾಲದಿಂದಲೂ ಅರಣ್ಯವನ್ನೇ ನಂಬಿ ಬದುಕು ಮಾಡುತ್ತಿರುವ ಆದಿವಾಸಿ ಪಂಗಡಗಳನ್ನು ಒಕ್ಕಲೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಯೋಚನೆ ಸರ್ಕಾರದ್ದು.

ಅರಣ್ಯ ಸಂಪತ್ತು ಖನಿಜ ನಿಕ್ಷೇಪಗಳಿಂದ ಶ್ರೀಮಂತವಾದ ಬಸ್ತಾರ್‌ ಪ್ರದೇಶ ಆರೋಗ್ಯ, ಸಾಕ್ಷರತೆ, ಆರ್ಥಿಕತೆ, ಮೂಲಸೌಕರ್ಯಗಳಲ್ಲಿ ಬಡವಾಗಿಯೇ ಉಳಿದಿದೆ.

ಗಣಿಗಾರಿಕೆಯನ್ನು ವಿರೋಧಿಸಿದವರ ಮೇಲೆ ಮಿಲಿಟರಿ ದೌರ್ಜನ್ಯ, ಕೊಲೆ, ಜೈಲುವಾಸ!

ಛತ್ತೀಸ್‌ಗಡದ ಶಾಂತಿ ಮತ್ತು ನ್ಯಾಯ ಎಂಬ ಕ್ಯಾಂಪೇನ್‌ನ ಅವಲೋಕನದಂತೆ 2020 ರಿಂದ 2024ರವರೆಗೆ ಬಸ್ತಾರ್ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಟರ್‌ ಹೆಸರಿನ ಕೊಲೆಗಳು 358, ಬಂಧನಕ್ಕೊಳಗಾದವರು 2535 ಜನ, ಶರಣಾದವರು 2498 ಜನರು.

ಸರ್ಕಾರ ಮಾವೋವಾದ, ನಕ್ಸಲ್‌ ಮುಕ್ತ ಭಾರತದ ಪಣ ತೊಟ್ಟ ಮರುವರ್ಷ ಅಂದರೆ 2024 ಒಂದೇ ವರ್ಷದಲ್ಲಿ 925 ಜನರ ಬಂಧನವಾಗಿದೆ. 792 ಜನ ಶರಣಾಗಿದ್ದಾರೆ, 217 ಜನರನ್ನು ಹತ್ಯೆ ಮಾಡಲಾಗಿದೆ. ಇವರ ನಕ್ಸಲ್‌ ಮುಕ್ತ ಮಾವೋವಾದ ಮುಕ್ತ ದೇಶದ ಘೋಷಣೆಯ ತಳಹದಿಯೇ ಇದಾಗಿತ್ತು ಎಂಬುದಕ್ಕೆ ಇದಕ್ಕೂ ಮಿಗಿಲಾದ ಸಾಕ್ಷಿ ಬೇಕೆ?

ಪತ್ರಕರ್ತರಿಗೆ ಪ್ರವೇಶ ನಿರಾಕರಣೆ?

ಪತ್ರಕರ್ತರನ್ನು, ವಿಶ್ಲೇಷಕರನ್ನು ಬಸ್ತಾರಿಗೆ ಕಾಲಿಡದಂತೆ ಸರ್ಕಾರ ಅನೌಪಚಾರಿಕ ಬಾಯ್ಕಾಟ್‌ ಜಾರಿಗೆ ತಂದಿದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಸತಾತ್ಮಕ ಗಣರಾಜ್ಯ ರಾಷ್ಟ್ರ ಎಂದು ಕರೆಯಲ್ಪಡುತ್ತದೆ. ಆದರೆ ಇಲ್ಲಿ ನಡೆವ ಹಗರಣಗಳು ಜಗತ್ತಿನ ಕಣ್ಣಿಗೆ ಗೋಚರಿಸದಂತೆ ಮುಚ್ಚಿಡುವ ವ್ಯರ್ಥ ಪ್ರಯತ್ನದ ಮೊದಲ ಯತ್ನ ಇದು. ಇನ್ನು ಮಾನವೀಯ ಮೌಲ್ಯಗಳನ್ನು ಒಳಗೊಂಡ ಸಂಸ್ಥೆಯಾದ ರೆಡ್‌ ಕ್ರಾಸ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಬಸ್ತರ್‌ಗೆ ಕಾಲಿಡದಂತೆ ಮಾಡಿದೆ ಸರ್ಕಾರ.

ನಮ್ಮ ಸಂವಿಧಾನವೂ ಅರಣ್ಯ ವಾಸಿಗಳ ಹಕ್ಕುಗಳಿಗೆ ವಿಶೇಷ ಆದ್ಯತೆ ನೀಡಿದೆ, ಸಂವಿಧಾನದ ಪ್ರಕಾರ ಆದಿವಾಸಿ ಬುಡಕಟ್ಟು ಪಂಗಡಗಳ ಅಸ್ತಿತ್ವ ಅಡಗಿರುವ ಕಾಡಿನಲ್ಲಿ ಅವರು ನೆಲೆಸಬಹುದು, ಅಲ್ಲಿನ ಸಂಪತ್ತನ್ನು ತಮ್ಮ ಜೀವನಾಧಾರವಾಗಿ ಈ ಸಮುದಾಯಗಳು ಬಳಸಬಹುದು. ಇದಕ್ಕೆ ಆಡಳಿತ ಸರ್ಕಾರ ಅಡ್ಡಿಪಡಿಸುವಂತಿಲ್ಲ.

ಈಗಾಗಲೇ ಬಸ್ತರ್‌ ಪ್ರದೇಶದಲ್ಲಿ ಅರಣ್ಯ ವಿನಾಶಕ್ಕೆ ಮುನ್ನುಡಿ ಬರೆದಾಗಿದೆ. ಹಲವೆಡೆ ಮರಗಳ ತೆರವು ಮಾಡುತ್ತಿದ್ದಾರೆ. ಇಂದಿಗೆ ಅಂದರೆ ಮಾರ್ಚ್‌ 31ಕ್ಕೆ ಕೊಟ್ಟ ಕೊನೆಯ ಗಡುವು ಬಸ್ತರಿನ ಅದೆಷ್ಟೋ ಹೊರಾಟಗಾರರ ಹಕ್ಕಿನ ಜೊತೆಗೆ ಅವರ ಬದುಕನ್ನು ಕಸಿಯಲಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...