ಅಮೆರಿಕದ ವಸ್ತುಗಳ ಮೇಲೆ ಶೇ. 75ರಷ್ಟು ಸುಂಕ ವಿಧಿಸಿ: ಅರವಿಂದ್ ಕೇಜ್ರಿವಾಲ್ ಆಗ್ರಹ

Date:

ಭಾರತೀಯ ರಫ್ತಿನ ಮೇಲೆ ಶೇಕಡ 50ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡ 75ರಷ್ಟು ಸುಂಕ ವಿಧಿಸುವಂತೆ ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

- Advertisement -

ಈ ಬಗ್ಗೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, “2025ರ ಡಿಸೆಂಬರ್ 31ರವರೆಗೆ ಅಮೆರಿಕದಿಂದ ಹತ್ತಿ ಆಮದಿನ ಮೇಲೆ ಶೇ.11ರಷ್ಟು ಸುಂಕ ವಿನಾಯಿತಿ ನೀಡುವ ಕೇಂದ್ರದ ನಿರ್ಧಾರವು ಭಾರತೀಯ ಹತ್ತಿ ರೈತರಿಗೆ ಹಾನಿ ಮಾಡುತ್ತದೆ. ಇದು ಅಮೆರಿಕದ ರೈತರನ್ನು ಶ್ರೀಮಂತರನ್ನಾಗಿ ಮತ್ತು ಗುಜರಾತ್ ಬೆಳೆಗಾರರನ್ನು ಬಡವರನ್ನಾಗಿ ಮಾಡುತ್ತದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

ಇದನ್ನು ಓದಿದ್ದೀರಾ? ಕೇಜ್ರಿವಾಲ್ ಬಂಧನದ ಬಗ್ಗೆ ಅಮೆರಿಕ-ಜರ್ಮನಿ ಹೇಳಿದ್ದೇನು? ಕೇಂದ್ರ ಸರ್ಕಾರ ಸಿಟ್ಟಾಗಿದ್ದೇಕೆ?

ಜವಳಿ ಉದ್ಯಮವನ್ನು ಬೆಂಬಲಿಸಲು ಮತ್ತು ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡಲು ಭಾರತವು ಪ್ರಸ್ತುತ ಈ ವರ್ಷ ಡಿಸೆಂಬರ್ 31ರವರೆಗೆ ಕಚ್ಚಾ ಹತ್ತಿಗೆ ಆಮದು ಸುಂಕ ವಿನಾಯಿತಿಯನ್ನು ಹೊಂದಿದೆ.

“ಪ್ರಧಾನ ಮಂತ್ರಿಗಳು ಧೈರ್ಯ ತೋರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇಡೀ ದೇಶವು ನಿಮ್ಮ ಬೆನ್ನಿಗೆ ನಿಂತಿದೆ. ಭಾರತದ ರಫ್ತಿನ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದೆ. ಅಮೆರಿಕದಿಂದ ಬರುವ ಆಮದಿನ ಮೇಲೆ ನೀವು ಶೇಕಡ 75ರಷ್ಟು ಸುಂಕವನ್ನು ವಿಧಿಸುತ್ತೀರಿ. ದೇಶ ಅದನ್ನು ಭರಿಸಲು ಸಿದ್ಧವಾಗಿದೆ. ಮೊದಲು ಸುಂಕವನ್ನು ವಿಧಿಸಿ ನಂತರ ಟ್ರಂಪ್ ತಲೆಬಾಗುತ್ತಾರೋ ಇಲ್ಲವೋ ಎಂದು ನೋಡಿ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಶೇ. 11ರಷ್ಟು ಸುಂಕ ವಿಧಿಸಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು. 20 ಕೆಜಿಗೆ ರೂ. 2,100ರಂತೆ ಹತ್ತಿಯನ್ನು ಖರೀದಿಸಬೇಕು, ಜೊತೆಗೆ ಭಾರತೀಯ ರೈತರಿಗೆ ಸಹಾಯ ಮಾಡಲು ರಸಗೊಬ್ಬರಗಳು ಮತ್ತು ಬೀಜಗಳ ಮೇಲೆ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.

ಭಾರತದ ಮೇಲಿನ ಅಮೆರಿಕದ ಶೇಕಡ 50ರಷ್ಟು ಸುಂಕವು ವಜ್ರ ಕಾರ್ಮಿಕರ ಮೇಲೂ ಪರಿಣಾಮ ಬೀರಿದೆ. ಏಕೆಂದರೆ ಮೋದಿ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಮೊಣಕಾಲೂರಿದೆ ಎಂದು ಟೀಕಿಸಿದರು.

“ಇಡೀ ದೇಶ ಮೋದಿಜಿಯ ಹಿಂದೆ ನಿಂತಿದೆ. ಅವರು (ಟ್ರಂಪ್) ಶೇ. 50 ರಷ್ಟು ಸುಂಕ ವಿಧಿಸಿದರು, ಮೋದಿಜಿ ಹತ್ತಿಯ ಮೇಲೆ ಶೇ. 100 ರಷ್ಟು ಸುಂಕ ವಿಧಿಸಬೇಕಿತ್ತು. ಟ್ರಂಪ್ ತಲೆಬಾಗಬೇಕಾಗಿತ್ತು. ಟ್ರಂಪ್ ಒಬ್ಬ ಹೇಡಿ, ಅಂಜುಬುರುಕ ವ್ಯಕ್ತಿ” ಎಂದೂ ಟೀಕಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಸಂಸ್ಥೆಗಳು ಆಯೋಜಿಸಿದ್ದ ಪರೀಕ್ಷೆಗೆ ಕೇರಳ ಹೈಕೋರ್ಟ್ ಸಮ್ಮತಿ; ಆದರೆ, ಫಲಿತಾಂಶ ಪ್ರಕಟಣೆಗೆ ತಡೆ

ಆರ್‌ಎಸ್‌ಎಸ್‌ ಸಂಯೋಜಿತ ಸಂಸ್ಥೆಗಳು ಆಯೋಜಿಸಿರುವ ಶಾಲಾ ಮಟ್ಟದ ವಿದ್ಯಾರ್ಥಿವೇತನ ಮಾದರಿಯ ಪರೀಕ್ಷೆಯು...

FICCI ಸಮಾವೇಶದ ಕಿಚ್ಚು: ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ ಕುರಿತು ಮೋದಿ–ರಾಹುಲ್ ವಾಕ್ಸಮರ!

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸದ ಉದ್ಯಮಗಳ ವಿರುದ್ಧ ಪ್ರಧಾನಿ...

ಬಸವಣ್ಣ ಅವಹೇಳನ: ಪರಾರಿಯಾಗಲು ಯತ್ನ; ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಬಂಧನ

12ನೇ ಶತಮಾನದ ಮಹಾನ್ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಕುರಿತು ತಮ್ಮ...

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...