ನಕಲಿ ವೈದ್ಯರ ಕೇಂದ್ರವಾದ ಅಸ್ಸಾಂನ ಕಚಾರ್ ಜಿಲ್ಲೆ: 90 ದಿನಗಳಲ್ಲಿ 17 ಮಂದಿ ಬಂಧನ

Date:

ಅಸ್ಸಾಂನ ಕಚಾರ್ ಜಿಲ್ಲೆಯು ನಕಲಿ ವೈದ್ಯರ ಕೇಂದ್ರವಾಗಿದ್ದು ಕಳೆದ 90 ದಿನಗಳಲ್ಲಿ ಈ ಜಿಲ್ಲೆಯೊಂದರಲ್ಲೇ 17 ಮಂದಿ ನಕಲಿ ವೈದ್ಯರ ಬಂಧನ ಮಾಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಇಬ್ಬರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

- Advertisement -

ಅಸ್ಸಾಂನ ನಕಲಿ ವೈದ್ಯರ ವಿರುದ್ಧದ ಕಾರ್ಯಾಚರಣೆ ಭಾಗವಾಗಿ ಈ ವರ್ಷದ ಆಗಸ್ಟ್‌ನಿಂದ ಈವರೆಗೆ ಒಟ್ಟಾಗಿ ಕಚಾರ್ ಜಿಲ್ಲೆಯಲ್ಲಿ ಒಟ್ಟು 17 ನಕಲಿ ವೈದ್ಯರನ್ನು ಬಂಧಿಸಲಾಗಿದೆ. ಇತ್ತೀಚೆಗೆ ದ್ವಾರಬಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಚೋಟೋಜಲೆಂಗಾ ಭಾಗ IIರ ನಿವಾಸಿ ಸುಪಾಲ್ ರಾಯ್ (41) ಮತ್ತು ಪಶ್ಚಿಮ ಬಂಗಾಳದ ಜಲ್ಪೈಗುರಿಯ ತತ್ಪಾರ ಮೂಲದ ನಕಲಿ ವೈದ್ಯ ಇಂದ್ರಜಿತ್ ರಾಯ್ (39) ಬಂಧನ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಇದನ್ನು ಓದಿದ್ದೀರಾ? ಬಿಹಾರ | ಯೂಟ್ಯೂಬ್ ವಿಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ: ಬಾಲಕ ಸಾವು

ದ್ವಾರಬಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ರೋಸೆಕಂಡಿ ಟೀ ಎಸ್ಟೇಟ್‌ನಲ್ಲಿರುವ ತನ್ನ ಔಷಧಾಲಯದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಪಾಲ್ ರಾಯ್ ಅವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಇಂದ್ರಜಿತ್ ರಾಯ್ ಅವರನ್ನು ತಾರಾಪುರದ ಇ & ಡಿ ಕಾಲೋನಿಯ ಮಾ ಆಯುರ್ವೇದದಿಂದ ಬಂಧಿಸಲಾಗಿದೆ. ಅಲ್ಲಿ ಇಂದ್ರಜಿತ್ ಸಂದರ್ಶಕ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ರೋಗಿಗಳು ಯಾವ ಔಷಧಿ ಪಡೆಯಬೇಕೆಂದು ಬರೆದುಕೊಡುತ್ತಿದ್ದರು. ಆದರೆ ರಾಯ್ ಯಾವುದೇ ವೈದ್ಯಕೀಯ ಶಿಕ್ಷಣ ಪಡೆದಿಲ್ಲ.

ಇನ್ನು ಸಾರ್ವಜನಿಕರೂ ನಕಲಿ ವೈದ್ಯರ ಬಗ್ಗೆ ಮಾಹಿತಿ ನೀಡುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪೊಲೀಸರು ಟೋಲ್-ಫ್ರೀ ಕರೆಯನ್ನು ಆರಂಭಿಸಿದ್ದಾರೆ. “ಕಚಾರ್‌ನ ಜನರಿಗಾಗಿ ನಾವು 6026903329 ಎಂಬ ವಿಶೇಷ ಸಂಖ್ಯೆಯನ್ನು ನೀಡುತ್ತಿದ್ದೇವೆ. ನಕಲಿ ವೈದ್ಯರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇದ್ದರೆ, ಈ ಸಂಖ್ಯೆಗೆ ಕರೆ ಮಾಡಿ ಹಂಚಿಕೊಳ್ಳಬಹುದು” ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಮಾನ್ಯ ಅರ್ಹತೆಗಳಿಲ್ಲದೆಯೇ ವೈದ್ಯಕೀಯ ವೃತ್ತಿ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರು ಅಧಿಕವಾಗಿದ್ದಾರೆ. 2018ರಲ್ಲಿ ಸರ್ಕಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ ಅಲೋಪತಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುವ ಶೇ.57.3ರಷ್ಟು ಸಿಬ್ಬಂದಿಗೆ ವೈದ್ಯಕಿಯ ತರಬೇತಿಯಿಲ್ಲ.

ಇತ್ತೀಚೆಗೆ ಗುಜರಾತ್‌ನಲ್ಲಿ, ಪೊಲೀಸರು ತಲಾ 70 ಸಾವಿರ ರೂಪಾಯಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣಪತ್ರವನ್ನು ಮಾರಾಟ ಮಾಡುವ ಗ್ಯಾಂಗ್ ಅನ್ನು ಪತ್ತೆಹಚ್ಚಿ, ಆ ಪ್ರಮಾಣಪತ್ರವನ್ನು ಖರೀದಿಸಿದ್ದ 14 ನಕಲಿ ವೈದ್ಯರುಗಳನ್ನು ಬಂಧಿಸಿದರು.

ಹಾಗೆಯೇ ಇದೇ ಏಪ್ರಿಲ್‌ನಲ್ಲಿ ಮಧ್ಯಪ್ರದೇಶದಲ್ಲಿ ಒಬ್ಬ ಬ್ರಿಟಿಷ್ ವ್ಯಕ್ತಿ ಹೃದ್ರೋಗ ತಜ್ಞರಂತೆ ನಟಿಸಿ ದಾಮೋಹ್‌ನ ಮಿಷನ್ ಆಸ್ಪತ್ರೆಯಲ್ಲಿ ಕನಿಷ್ಠ 15 ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಅನೇಕ ಸಾವಿಗೆ ಕಾರಣವಾಗಿರುವುದು ಬಯಲಿಗೆ ಬಂದಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಈಗ ‘ಡಿಟೆನ್ಷನ್ ಸ್ಟೇಟ್’ – ಪ್ರತಿಭಟನಾಕಾರರ ಬಂಧನಕ್ಕೆ ಸಂಸದ ಸಂಜಯ್ ರಾವತ್ ಆಕ್ರೋಶ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್...

ಸಿಜೆಪಿ ಪ್ರತಿಭಟನೆ ಯಶಸ್ವಿ; 40 ಸಾವಿರ ಅರೆಸೇನಾ ಯೋಧರ ನಿಯೋಜನೆಯೇ ಸಾಕ್ಷಿ:‌ ಪ್ರಶಾಂತ್ ಕಿಶೋರ್

ಭಾರತದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ ಕರೆಕೊಟ್ಟಿದ್ದ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಹಲ್ಲೆ ಮಾಡಿದ ಹಿಂದೂ ರಕ್ಷಾ ದಳದ ನಾಲ್ವರ ಬಂಧನ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...

NTA ಒಂದು ‘ಖಾಲಿ ಸಂಸ್ಥೆ’, ಮೋದಿ ಸರ್ಕಾರ ಅಹಂಕಾರ ಬಿಟ್ಟು ವರದಿ ಪರಿಗಣಿಸಲಿ: ಕಾಂಗ್ರೆಸ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ‌ (ಎನ್‌ಟಿಎ) ಮತ್ತು ಶಿಕ್ಷಣ ಸಚಿವಾಲಯದಲ್ಲಿ ಗಂಭೀರ ಸ್ವರೂಪದ...