ರಾಮನ ಹುಂಡಿಗೆ ಕನ್ನ: ಅಯೋಧ್ಯೆ ದೇಣಿಗೆ ಕಳ್ಳರ ‘ಮಾಸ್ಟರ್ ಪ್ಲಾನ್’ ಹೇಗಿತ್ತು ಗೊತ್ತಾ?

Date:

ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಂಟು ಮಂದಿ ಆರೋಪಿಗಳ ಪೈಕಿ ಒಬ್ಬನಾದ ಅವಿನಾಶ್ ಶುಕ್ಲಾನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮಂಗಳವಾರ ಸುಮಾರು ಎರಡು ಗಂಟೆಗಳ ಕಾಲ ನಡೆದ ವಿಚಾರಣೆಯ ವೇಳೆ, ಕೋಟ್ಯಂತರ ರೂಪಾಯಿ ದೋಚಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಕಳವು ಕಾರ್ಯಾಚರಣೆಯ ಸ್ವರೂಪ ಮತ್ತು ಭಾಗಿಯಾದವರ ಮಾಹಿತಿಯನ್ನು ಈತ ಬಹಿರಂಗಪಡಿಸಿದ್ದಾನೆ.

- Advertisement -

ವಿಚಾರಣೆ ವೇಳೆ ದೇವಾಲಯದ ಟ್ರಸ್ಟಿ ಅನಿಲ್ ಮಿಶ್ರಾ ಅವರ ಹೆಸರು ಪ್ರಸ್ತಾಪವಾಗಿದ್ದು, ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಕಳವು ಪ್ರಕರಣದ ತೀವ್ರ ಸ್ವರೂಪದ ಬೆನ್ನಲ್ಲೇ, ಅನಿಲ್ ಮಿಶ್ರಾ ಮತ್ತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕಳೆದ ವಾರವಷ್ಟೇ ರಾಜೀನಾಮೆ ನೀಡಿದ್ದರು. ಶುಕ್ಲಾ ಹೊರತಾಗಿ, ರಾಯ್ ಆಪ್ತ ಎನ್ನಲಾದ ಟಿನ್ನು ಯಾದವ್, ಎಣಿಕೆ ಉಸ್ತುವಾರಿ ಸುಭಾಷ್ ಶ್ರೀವಾಸ್ತವ ಹಾಗೂ ಇತರ ಐದು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ದೇಣಿಗೆ ಎಣಿಕೆ ಕೊಠಡಿಯ ಕೀಲಿ ಕೈಗಳಲ್ಲಿ ಒಂದು ಟಿನ್ನು ಯಾದವ್ ಬಳಿ ಹಾಗೂ ಮತ್ತೊಂದು ಬ್ಯಾಂಕ್ ಸಿಬ್ಬಂದಿ ಬಳಿ ಇರುತ್ತಿತ್ತು. ಕೃತ್ಯವನ್ನು ವ್ಯವಸ್ಥಿತವಾಗಿ ಎಸಗಲಾಗಿದ್ದು, ಒಬ್ಬ ಹಣ ಎತ್ತುತ್ತಿದ್ದಾಗ ಇತರರು ಆತನ ಸುತ್ತ ಮರೆಮಾಚುತ್ತಿದ್ದರು. ಸಂಕೀರ್ಣದೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ನಿಖರ ಸ್ಥಳಗಳ ಅರಿವಿದ್ದ ಆರೋಪಿಗಳು, ಕ್ಯಾಮೆರಾ ಕಣ್ಣು ತಪ್ಪಿಸಿ ಹಣವನ್ನು ಶೌಚಾಲಯಗಳಲ್ಲಿ ಬಚ್ಚಿಡುತ್ತಿದ್ದರು. ನಂತರ ಅವಕಾಶ ಸಿಕ್ಕಾಗ ಆ ಹಣವನ್ನು ಸುರಕ್ಷಿತವಾಗಿ ಹೊರಗೆ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ದೇವಾಲಯದ ಆವರಣದೊಳಗಿನ ಕ್ಯಾಮೆರಾಗಳನ್ನು ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದ್ದರೂ, ಸಿಬ್ಬಂದಿ ಚಲನವಲನಗಳನ್ನು ಸರಿಯಾಗಿ ಗಮನಿಸಿರಲಿಲ್ಲ ಎಂದು ಆರೋಪಿ ತಿಳಿಸಿದ್ದಾನೆ. ಅಲ್ಲದೆ, ಕದ್ದ ಹಣವನ್ನು ಬಳಸಿ ಜಮೀನು ಮತ್ತು ಮನೆ ಖರೀದಿಸಲಾಗಿದೆ ಎಂದು ಶುಕ್ಲಾ ಒಪ್ಪಿಕೊಂಡಿದ್ದಾನೆ. ಮಾಹಿತಿಯ ಆಧಾರದ ಮೇಲೆ, ಪೊಲೀಸರು ಈಗ ಆರೋಪಿಗಳಿಗೆ ಸೇರಿದ ಆಸ್ತಿ ಮತ್ತು ಹಣಕಾಸು ವಹಿವಾಟುಗಳ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಸುದೀರ್ಘಕಾಲ ಯಾರಿಗೂ ತಿಳಿಯದಂತೆ ಕೃತ್ಯ ಹೇಗೆ ನಡೆಯಿತು ಎಂಬ ಪರಿಶೀಲನೆ ನಡೆಯುತ್ತಿದೆ.

ಈ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ಜೂನ್ ಹದಿಮೂರರಂದು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ, ಎಫ್‌ಐಆರ್ ದಾಖಲಾಗುವ ಮುನ್ನವೇ ಜೂನ್ ಐದರಂದು ಶುಕ್ಲಾನ ಮನೆಯಿಂದ ಟ್ರಸ್ಟ್ ಐವತ್ತೆಂಟು ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು. ಉಳಿದ ಹಣವನ್ನು ಜೂನ್ ಐದರಿಂದ ಎಂಟರ ನಡುವೆ ಬ್ಯಾಂಕ್ ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ. ಕಾನೂನು ಪ್ರಕ್ರಿಯೆ ಆರಂಭವಾಗುವ ಮುನ್ನವೇ ಲಪಟಾಯಿಸಿದ ಹಣವನ್ನು ಮರಳಿ ಪಡೆಯುವ ಯತ್ನಗಳು ತೆರೆಮರೆಯಲ್ಲಿ ನಡೆದಿದ್ದವು ಎಂಬುದು ಇದರಿಂದ ಸ್ಪಷ್ಟವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ ಹಿಂಸಾಚಾರ | ಹತ್ಯೆಯಾಗಿ ಆರು ತಿಂಗಳ ಬಳಿಕ ಆರು ನಾಗಾ ಯುವಕರ ಅಂತ್ಯಕ್ರಿಯೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಕಳೆದ ಮೇ 13...

ಅಂಕಿತಾ ಭಂಡಾರಿ ಹತ್ಯೆ: ಸಂತ್ರಸ್ತೆಯ ಖಾಸಗಿ ಚಾಟ್ ಬಹಿರಂಗಪಡಿಸಿದ ಹಂತಕನ ತಂದೆ, ಬಿಜೆಪಿ ಮಾಜಿ ಮುಖಂಡ ವಿರುದ್ಧ ದೂರು

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ...

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ : ಔರಾದ್‌ ಬಂದ್‌ ಹಿಂಪಡೆಯಲು ಸಚಿವ ಈಶ್ವರ ಖಂಡ್ರೆ ಮನವಿ

ಔರಾದ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಲವು ತುರ್ತು ಕ್ರಮಗಳನ್ನು...

ನಾನು ಜೀವಂತವಾಗಿ ಮರಳದೇ ಇರಬಹುದು: ಜೈಲಿನಿಂದಲೇ ಪಾಕ್ ಸುಪ್ರೀಂ ನ್ಯಾಯಮೂರ್ತಿಗಳಿಗೆ ಇಮ್ರಾನ್ ಖಾನ್ ಪತ್ರ!

ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್...