ಬಂಗಾಳ ಚುನಾವಣೆ | ಬಂಗಾಳದ ನೆಲದಲ್ಲಿ BJPಗೆ ನೆಲೆ ಕೊಟ್ಟಿದ್ದೇ TMC!

Date:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿವೆ. ಏ. 23, ಏ. 29ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಟಿಎಂಸಿ ಮತ್ತು ಪ್ರಮುಖ ವಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದೊಂದಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷ ಪ್ರಚಾರದಲ್ಲಿ ತೊಡಗಿದ್ದರೆ, ಬಿಜೆಪಿ ಕೂಡ ಆಡಳಿತ ಕಸಿದುಕೊಳ್ಳಲು ಹವಣಿಸುತ್ತಿದೆ. ಸದ್ಯ, ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಬದ್ಧ ಪ್ರತಿಸ್ಪರ್ಧಿಗಳಾಗಿವೆ. ಆದರೆ, ಈ ಎರಡೂ ಪಕ್ಷಗಳು ಒಂದು ಕಾಲದಲ್ಲಿ ಮಿತ್ರ ಪಕ್ಷಗಳಾಗಿದ್ದವು ಎಂಬುದು ಕೂಡ ಇತಿಹಾಸ.

- Advertisement -

ಹಿಂದುತ್ವ, ಮನುವಾದವನ್ನೇ ಜೀವಾಳವಾಗಿಸಿಕೊಂಡಿರುವ ಬಿಜೆಪಿ ಹಲವು ರಾಜ್ಯಗಳಲ್ಲಿ ತನ್ನ ರಾಜಕೀಯ ಪ್ರವೇಶ ಪಡೆಯಲು ‘ರೆಡ್‌ ಕಾರ್ಪೆಟ್’ ಹಾಸಿದ್ದೇ ಪ್ರಾದೇಶಿಕ ಪಕ್ಷಗಳು. ಅಂತೆಯೇ, ಬಂಗಾಳದಲ್ಲಿಯೂ ಪ್ರವೇಶ ಪಡೆಯಲು ಬಿಜೆಪಿಗೆ ಟಿಎಂಸಿಯೇ ಹೆಗಲು ಕೊಟ್ಟಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

1998ರಲ್ಲಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನಿಂದ ಹೊರಬಂದು, ‘ಅಖಿಲ ಭಾರತ ತೃಣಮೂಲ್ ಕಾಂಗ್ರೆಸ್’ (TMC) ಸ್ಥಾಪಿಸಿದರು. ಆ ಸಮಯದಲ್ಲಿ ಬಂಗಾಳದಲ್ಲಿ ಎಡರಂಗ ಅಧಿಕಾರದಲ್ಲಿತ್ತು. ಎಡಪಕ್ಷಗಳ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಬೆಳೆಯುತ್ತಿತ್ತು. ಆಡಳಿತ ವಿರೋಧಿ ಅಲೆಯೂ ಹೆಚ್ಚಲಾರಂಭಿಸಿತ್ತು. ಜನರಲ್ಲಿ ಟಿಎಂಸಿ ಪರ ಒಲವು ಬೆಳೆಯಲಾರಂಭಿಸಿತ್ತು.

ಅದೇ ಸಮಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಮತಾ ಬಿಜೆಪಿ ಜೊತೆ ಕೈಜೋಡಿಸಿದರು. ಟಿಎಂಸಿ-ಬಿಜೆಪಿ ಮೈತ್ರಿ ಮಾಡಿಕೊಂಡು ಬಂಗಾಳದಲ್ಲಿ ಸ್ಪರ್ಧಿಸಿದವು. ಟಿಎಂಸಿಗಿದ್ದ ಜನ ಬೆಂಬಲವನ್ನು ಬಳಸಿಕೊಂಡ ಬಿಜೆಪಿ ಬಂಗಾಳದಲ್ಲಿ ಮೊದಲ ಬಾರಿಗೆ ‘ಲೋಕಸಭಾ ಸ್ಥಾನ’ ಗೆದ್ದುಕೊಂಡಿತು. ಮೈತ್ರಿಯಲ್ಲಿ ಬಿಜೆಪಿಯಿಂದ ದುಮ್ ದುಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತಪನ್ ಸಿಕ್ದಾರ್ ಗೆದ್ದು, ಸಂಸತ್ ಪ್ರವೇಶಿಸಿದ್ದರು. ಅವರ ಗೆಲುವು ಬಂಗಾಳದಲ್ಲಿ ಬಿಜೆಪಿಗೆ ನೆಲೆ ನಿರ್ಮಾಣ ಮಾಡಿಕೊಟ್ಟಿತು. ಆ ಚುನಾವಣೆಯಲ್ಲಿ ಟಿಎಂಸಿ 7 ಸ್ಥಾನಗಳನ್ನು ಗೆದ್ದು, ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು.

1999ರ ಲೋಕಸಭಾ ಚುನಾವಣೆಯಲ್ಲಿಯೂ ಟಿಎಂಸಿ-ಬಿಜೆಪಿ ಮೈತ್ರಿ ಮುಂದುವರೆಯಿತು. ಆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಎರಡಕ್ಕೆ (ದುಮ್ ದುಮ್ ಮತ್ತು ಕೃಷ್ಣನಗರ) ಹೆಚ್ಚಿಸಿಕೊಂಡಿತು. ಅಂತೆಯೇ, ಟಿಎಂಸಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಮಮತಾ ಬ್ಯಾನರ್ಜಿ ಅವರು ವಾಜಪೇಯಿ ಸರ್ಕಾರದಲ್ಲಿ ‘ರೈಲ್ವೇ ಮಂತ್ರಿ’ಗಿರಿ ಗಿಟ್ಟಿಸಿಕೊಂಡರು.

2000ರಲ್ಲಿ ನಡೆದ ಕೋಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ-ಬಿಜೆಪಿ ಮೈತ್ರಿಕೂಟವು ಎಡರಂಗವನ್ನು ಸೋಲಿಸಿ, ಅಧಿಕಾರಕ್ಕೇರಿದವು. ಟಿಎಂಸಿ ಕೃಪಾಕಟಾಕ್ಷದಿಂದ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯೊಂದರ ಆಡಳಿತದ ಭಾಗವಾಯಿತು. 2001ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 60 ಸ್ಥಾನಗಳನ್ನು ಗೆದ್ದು, ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿದರೆ, ಬಿಜೆಪಿ ಶೂನ್ಯ ಸಾಧನೆ ಮಾಡಿತು.

ಈ ಲೇಖನ ಓದಿದ್ದೀರಾ?: ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

2001ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಬಿಜೆಪಿಗೆ ಟಿಎಂಸಿ ಜೊತೆ ತಿಕ್ಕಾಟಕ್ಕಿಳಿಯಿತು. ಎನ್‌ಡಿಎಯನ್ನು ಮಮತಾ ತೊರೆದರು. ಟಿಎಂಸಿ ಮೈತ್ರಿ ತೊರೆದಿದ್ದರಿಂದ, ಬಿಜೆಪಿ ನೆಲೆ ಕಾಣಲು ಸಾಧ್ಯವಾಗಲೇ ಇಲ್ಲ. ಆದರೆ, ಟಿಎಂಸಿ 10 ವರ್ಷಗಳಲ್ಲಿ ಪ್ರಬಲ ಪಕ್ಷವಾಗಿ ಬೆಳೆಯಿತು, 2011ರಲ್ಲಿ ಎಡಪಕ್ಷಗಳನ್ನು ಸೋಲಿಸಿ, ಅಧಿಕಾರಕ್ಕೇರಿತು. ಮಮತಾ ಮುಖ್ಯಮಂತ್ರಿಯೂ ಆದರು. ಆದರೆ, ಬಿಜೆಪಿ ಇನ್ನೂ ನೆಲೆ ಹುಡುಕಾಟದಲ್ಲೇ ಇತ್ತು.

ಸ್ವಂತ ನೆಲೆ/ಬಲ ಪಡೆಯಲಾಗದ ಬಿಜೆಪಿ, ಆಪರೇಷನ್ ಕಮಲದ ತಂತ್ರ ಹೆಣೆಯಿತು. ತನ್ನನ್ನು ಬಂಗಾಳಕ್ಕೆ ಕರೆತಂದ ಟಿಎಂಸಿಗೆ ಆಪರೇಷನ್ ಮಾಡಿ, ಸುವೇಂದು ಅಧಿಕಾರಿ ನೇತೃತ್ವದಲ್ಲಿ ಟಿಎಂಸಿಯ ಹಲವು ಶಾಸಕರು ಮತ್ತು ನಾಯಕರನ್ನು ಹೊತ್ತೊಯ್ಯಿತು. 2021ರ ವಿಧಾನಸಭಾ ಚುನಾವಣೆಯಲ್ಲಿ 77 ಕ್ಷೇತ್ರಗಳಲ್ಲಿ ಗೆದ್ದು, ಪ್ರಮುಖ ವಿಪಕ್ಷವಾಗಿ ಬೆಳೆಯಿತು. ಈಗ ಟಿಎಂಸಿಯನ್ನು ಹೊಸಕಿಹಾಕಿ, ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...