‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು

Date:

ಮಧು ಪೂರ್ಣಿಮಾ ಕಿಶ್ವರ್, ಸುಬ್ರಮಣಿಯನ್ ಸ್ವಾಮಿ‌ ಅವರು ಮೋದಿ ಬಗ್ಗೆ ಹೊರಿಸಿರುವ ಗಂಭೀರ ಆರೋಪಗಳು ತಾನೊಬ್ಬ ʼನಿಷ್ಕಳಂಕ ಜೀವಿʼ ಎಂದು ತನ್ನನ್ನೇ ತಾನು ಬಿಂಬಿಸಿಕೊಳ್ಳುತ್ತಿದ್ದ ಆತ್ಮರತಿ ಮೋದಿಗೆ ಕಳಂಕ ಅಂಟಿಸಿದೆ. ಬಿಜೆಪಿಯ ಮಡಿಲ ಮಾಧ್ಯಮಗಳು ಈ ಬಗ್ಗೆ ಒಂದೇ ಒಂದು ವರದಿಯನ್ನೂ ಮಾಡಿಲ್ಲ. ಮೋದಿ ಮತ್ತು ಬಿಜೆಪಿಯ ಹಿತ ಕಾಯುವುದಕ್ಕೆ ಮಡಿಲ ಮಾಧ್ಯಮಗಳು ಮಾಡುತ್ತಿರುವ ಈ ಪರಿಯ ಸಾಹಸ ವ್ಯವಸ್ಥೆಯ ಕೊಳಕನ್ನು ಎತ್ತಿ ತೋರಿಸುತ್ತಿದೆ.

ಸ್ವಯಂಘೋಷಿತ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರ ಮತ್ತೊಂದು ಅಸಲಿ ಬಣ್ಣ ಬಟಾಬಯಲಾಗಿದೆ. ತಾನೊಬ್ಬ ʼನಿಷ್ಕಳಂಕ ಜೀವಿʼ ಎಂದು ತನ್ನನ್ನೇ ತಾನು ಬಿಂಬಿಸಿಕೊಳ್ಳುತ್ತಿದ್ದ ಆತ್ಮರತಿ ಮೋದಿಗೆ ಇನ್ನು ಮುಂದೆ ಸರಿಪಡಿಸಿಕೊಳ್ಳಲಾಗದ ಕಳಂಕವೊಂದು ಅಂಟಿದೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸುಬ್ರಮಣಿಯನ್‌ ಸ್ವಾಮಿ, ಮೋದಿಯ ಸ್ತ್ರೀಲೋಲುಪತೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗಿಯಾಗಿದ್ದ ಸ್ವಾಮಿ, ʼಮೋದಿಯೊಂದಿಗೆ ಹಾಸಿಗೆ ಹಂಚಿಕೊಂಡ ಕಾರಣ, ಮೂರು ಅಥವಾ ನಾಲ್ಕು ಮಂದಿ ಸಂಸದರಾಗಿದ್ದಾರೆ. ಒಬ್ಬ ಸಂಸದೆ ಸಂಪುಟದಲ್ಲಿ ಸ್ಥಾನ ಪಡೆದಿರುವುದನ್ನೂ ಕೂಡ ನಾನು ಯಾರೆಂದು ಹೇಳಬಲ್ಲೆʼ ಎಂದು  ಹೇಳಿಕೊಂಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಆ ಯೂಟ್ಯೂಬ್‌ ಕೊಂಡಿ(ಲಿಂಕ್‌)ಯನ್ನು ಹಂಚಿಕೊಂಡಿರುವ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದ, ಹಿಂದುತ್ವವಾದಿ ಮಧು ಪೂರ್ಣಿಮಾ ಕಿಶ್ವ‌ರ್, ಮೋದಿ ಬಗ್ಗೆ ಮತ್ತಿಷ್ಟು ಅಸಹನೀಯ ಭಾವ ಮೂಡುವಂತಹ ವಿಷಯಗಳನ್ನು ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ʼಎಕ್ಸ್‌ʼನಲ್ಲಿ ಹಂಚಿಕೊಂಡಿದ್ದಾರೆ.

“ಸಂಘ ಪರಿವಾರದ ವಲಯಗಳಲ್ಲಿ ಮೋದಿಯವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾರಣಕ್ಕಾಗಿ ಸಂಸದರು ಮತ್ತು ಮಂತ್ರಿಗಳಾಗಿ ಆಯ್ಕೆಯಾದ ಮಹಿಳೆಯರ ಹೆಸರುಗಳು ಪಿಸುಗುಟ್ಟಲಾಗುತ್ತಿತ್ತು. ಇದರಿಂದಲೇ ನಾನು ಮುಂಚಿತವಾಗಿಯೇ ಮೋದಿ ಅವರಿಂದ ಅಂತರ ಕಾಯ್ದುಕೊಂಡೆ” ಎಂದು ಕಿಶ್ವ‌ರ್ ಹೇಳಿದ್ದಾರೆ.

- Advertisement -

“ಮೇ 2014ರಲ್ಲಿ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಾನು ಅವರಿಂದ ದೂರ ಉಳಿದುಕೊಂಡೆ. ನಾನು ಅವರ ಬಗ್ಗೆ ಬರೆದ ಪುಸ್ತಕದ ಪ್ರತಿಯನ್ನು ಸಹಿಮಾಡದೆ ಅವರ ನೆಚ್ಚಿನ ಅಧಿಕಾರಿ ಭರತ್‌ ಲಾಲ್ ಮೂಲಕ ಕಳುಹಿಸಿದ್ದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಹಾಸನ ಮಣ್ಣಿನ ಹೆಣ್ಣು ದನಿಗಳು | ಲೇಖಕಿ, ವಾಗ್ಮಿ, ಸಂಘಟಕಿ- ಸುಶೀಲಾ ಸೋಮಶೇಖರ್

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

“ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ವಿಶೇಷ ಸೇವೆಗಳನ್ನು ಒದಗಿಸಿದವರ ಬಗ್ಗೆ ಹರ್ದೀಪ್ ಪುರಿ ಮತ್ತು ಎಸ್‌. ಜೈಶಂಕರ್‌ ಸಚಿವರಾದ ನಂತರ ಗೌಪ್ಯವಾಗಿ ಚರ್ಚೆಗಳು ನಡೆಯುತ್ತಿದ್ದವು,” ಎಂದು ಕೂಡ ಅವರು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ, “2014ರಲ್ಲಿ ಅಮೆರಿಕ ಪ್ರವಾಸದ ವೇಳೆ ಸಹ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ‘ಮಾತುಗಳು’ ಕೇಳಿಬಂದವು” ಎಂದು ತಿಳಿಸಿದ್ದಾರೆ.

ಇನ್ನು, “12ನೇ ತರಗತಿ ಪಾಸ್ ಆಗಿರುವ ಸ್ಮೃತಿ ಇರಾನಿ ಅವರನ್ನು ಶಿಕ್ಷಣ ಸಚಿವೆಯಾಗಿ ನೇಮಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾನಸಿ ಸೋನಿ ಸಂಬಂಧಿತ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿತ್ತು. ಮೋದಿಯ ಆಪ್ತರೊಬ್ಬರು ಅದರ ದಾಖಲೆಗಳ ಪ್ರತಿಗಳನ್ನು ನನಗೆ ಒದಗಿಸಿದ್ದರು ಎಂದು ಹೇಳಿದ್ದಾರೆ.

“ಗುಜರಾತ್‌ನ ಕೆಲವರು ಸೇರಿದಂತೆ ಮೋದಿಯ ಆಪ್ತರು, ಅವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರೊಂದಿಗೆ ಹೊಂದಿದ್ದ ಸಂಬಂಧಗಳ ಬಗ್ಗೆ ಅಸಹ್ಯಕರ ವಿಚಾರಗಳನ್ನು ಹೇಳಿಕೊಂಡಿದ್ದರು. ಮೋದಿ ಆರ್‌ಎಸ್‌ಎಸ್ ಪ್ರಚಾರಕ ಹಾಗೂ ಬಿಜೆಪಿ ಪದಾಧಿಕಾರಿಯಾಗಿದ್ದ ಕಾಲದಲ್ಲಿಯೂ ಇಂತಹ ವರದಿಗಳು ಕೇಳಿಬಂದಿದ್ದವು” ಎಂದು ಅವರು ಬರೆದುಕೊಂಡಿದ್ದಾರೆ. ಇದೇ ಕಾರಣದಿಂದ ಮೋದಿ ಭಾಗವಹಿಸುವ ಸಾಧ್ಯತೆಯಿದ್ದ ಕಾರ್ಯಕ್ರಮಗಳನ್ನು ಮದುವೆ ಸಮಾರಂಭಗಳಿಗೂ ನಾನು ಹಾಜರಾಗುತ್ತಿರಲಿಲ್ಲ. ಈ ವಿಚಾರಗಳು ನನಗೆ ಭಾರೀ ಆಘಾತ ನೀಡಿದವು. 2014ರಲ್ಲಿ ನನ್ನ ಆರೋಗ್ಯದ ಮೇಲೂ ಪರಿಣಾಮ ಬೀರಿತು. 2015ರಲ್ಲಿ ಚೇತರಿಸಿಕೊಳ್ಳಲು ಕೊಯಮತ್ತೂರಿನಲ್ಲಿ 21 ದಿನ ಆಯುರ್ವೇದ ಚಿಕಿತ್ಸೆ ಪಡೆದಿದ್ದೆ” ಎನ್ನುವುದನ್ನೂ ತಮ್ಮ ಪೋಸ್ಟ್‌ನಲ್ಲಿ ಕಿಶ್ವರ್ ಉಲ್ಲೇಖಿಸಿದ್ದಾರೆ.

ಇದೇ ವೇಳೆ, “ಈ ವಿಷಯಗಳನ್ನು ನಾನು ಹಿರಿಯ ಆರೆಸ್ಸೆಸ್ ಬುದ್ಧಿಜೀವಿಯೊಬ್ಬರೊಂದಿಗೆ ಹಂಚಿಕೊಂಡಾಗ, ಅವರ ವೈಯಕ್ತಿಕ ಜೀವನ ನಮಗೇಕೆ? ಎಂದು ಅವರು ಪ್ರಶ್ನಿಸಿದರು” ಎಂದು ಹೇಳಿದ್ದಲ್ಲದೆ, ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥರಾಗಿರುವ  ಅಮಿತ್ ಮಾಳವೀಯ ಅವರ ಬಗ್ಗೆ ಕೂಡ ಕಿಶ್ವರ್‌ ಪ್ರಸ್ತಾಪಿಸಿದ್ದು, “ಅಶ್ಲೀಲ ವಿಡಿಯೋ ಹರಡುವರನ್ನು ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಪಕ್ಷದ ಉನ್ನತ ನಾಯಕತ್ವದ ಪಕ್ಷಪಾತ ನಿಲುವಿನ ಉದಾಹರಣೆ” ಎಂದು ಅವರು ಟೀಕಿಸಿದ್ದಾರೆ.

“ನಾಯಕತ್ವದ ಕೆಲವು ನಡೆಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂಬ ಭಾವನೆ ನನಗೆ ಮೊದಲ ಅವಧಿಯಲ್ಲೇ ಮೂಡಿತ್ತು. ಲೈಂಗಿಕ ಭ್ರಷ್ಟಾಚಾರದಂತಹ ವಿಷಯಗಳಲ್ಲಿ ಮೋದಿಯೊಂದಿಗೆ ರಾಜಿ ಮಾಡಿಕೊಂಡವರು ಮುಂದೆ ಬ್ಲಾಕ್ ಮೇಲ್ ಗೆ ಒಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರದಲ್ಲೇ ಸಾಕ್ಷಿ ನೀಡುತ್ತೇನೆ” ಎಂದು ಮಧು ಪೂರ್ಣಿಮಾ ಕಿಶ್ವರ್ ಹೇಳಿರುವುದು, ಸ್ವಾಮಿ ಮೋದಿ ಬಗ್ಗೆ ಹೊರಿಸಿರುವ ಗಂಭೀರ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.

ಹಿಂದುತ್ವವಾದಿ ಚಿಂತಕಿ ಮಧು ಪೂರ್ಣಿಮಾ ಕಿಶ್ವರ್‌, ಮೋದಿ ಬಗ್ಗೆ ಮಾಡಿರುವ ಈ ಎಲ್ಲಾ ಆರೋಪಗಳು ರಾಷ್ಟ್ರೀಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಪ್ರಧಾನಿ ಪಟ್ಟಕ್ಕೆ ಏರಿಸುವುದಕ್ಕೆ ಮಾಡುತ್ತಿರುವ ಹುನ್ನಾರ ಎಂದೂ ಕೂಡ ಚರ್ಚೆಗಳು ನಡೆಯುತ್ತಿವೆ. ಏನೇ ಚರ್ಚೆಗಳು ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದರೂ ಅದಕ್ಕೆ ಮೂಲ ಕಾರಣ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಬಂಧ ಹೊಂದಿದವರಿಂದಲೇ ಎನ್ನುವುದು ಇಲ್ಲಿ ಮುಖ್ಯಾಂಶ.

ಸ್ವಾಮಿ ಮತ್ತು ಮಧು ಇಬ್ಬರೂ ಕೂಡ ಒಂದು ಕಾಲದ ಬಿಜೆಪಿಯ ಬಾಯಿಗಳಾಗಿಯೇ ಇದ್ದವರು. ಮೋದಿಯನ್ನು ಬಾಯ್ತುಂಬ ಹೊಗಳುತ್ತಿದ್ದವರು. ಈಗ ಇದ್ದಕ್ಕಿದ್ದಂತೆ ಮೋದಿ ವಿರುದ್ಧ ಟೀಕಾಪ್ರಹಾರ ಮಾಡುತ್ತಿರುವುದನ್ನು ಸಾರ್ವಜನಿಕ, ರಾಜಕೀಯ ವಲಯ ಅನುಮಾನದ ದೃಷ್ಟಿಯಲ್ಲಿ ನೋಡುತ್ತಿರುವುದರಲ್ಲಿ ತಪ್ಪಿಲ್ಲ. ದೇಶದ ವಿತ್ತ ಸಚಿವರಾಗುವುದಕ್ಕೆ ಬಯಸಿದ್ದ ಆರ್ಥಿಕ ತಜ್ಞ ಸುಬ್ರಮಣಿಯನ್ ಸ್ವಾಮಿ ಮತ್ತು ಕೇಂದ್ರ ಶಿಕ್ಷಣ ಸಚಿವರಾಗುವುದಕ್ಕೆ ಬಯಸಿದ್ದ, CSDS (center for the study of Developing Societies)ನಲ್ಲಿ ಪ್ರೊಫೆಸರ್ ಆಗಿದ್ದ ಡಾ. ಮಧು ಕಿಶ್ವರ್, ಈವರೆಗೆ ಸತ್ಯಗಳನ್ನು ಮುಚ್ಚಿಟ್ಟು, ಈಗ ಬಯಲುಗೊಳಿಸುತ್ತಿರುವುದು ಆಸೆ ಫಲಿಸದೆ ನಿರಾಸೆಯಾಗಿರುವ ಕಾರಣಕ್ಕಾಗಿಯೇ ಇರಬಹುದು ಎಂಬ ಅನುಮಾನ ವ್ಯಕ್ತವಾಗುವುದು ಸಹಜ.

ಇದನ್ನೂ ಓದಿ : ಸಾವೇ ಇಲ್ಲದ ‘ಜೆಲ್ಲಿಫಿಶ್‌’ ಎಂಬ ಜೈವಿಕ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು?

ಆದರೆ, ಮೋದಿ ಮತ್ತು ಬಿಜೆಪಿ ಸಾಕಿದ ಮಾಧ್ಯಮಗಳಲ್ಲಿ ಈ ಬಗ್ಗೆ ಒಂದೇ ಒಂದು ಸಣ್ಣ ವರದಿ ಕೂಡ ಪ್ರಕಟ/ಪ್ರಸಾರವಾಗದೆ ಇರುವುದು ಪ್ರಜಾಪ್ರಭುತ್ವದ ದುರಂತಗಳ ಸಾಲಿಗೆ ಸೇರಿದ ಮತ್ತೊಂದು ಸಂಗತಿ ಎಂದರೆ ತಪ್ಪಿಲ್ಲ.

ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಸುಬ್ರಮಣಿಯನ್‌ ಸ್ವಾಮಿ ಈ ಹಿಂದೊಮ್ಮೆ, ʼರಾಹುಲ್‌ ಗಾಂಧಿ ಕೊಕೇನ್‌ ಸೇವಿಸುತ್ತಾರೆ, ಸೋನಿಯಾಗಾಂಧಿ 1960ರ ದಶಕದಲ್ಲಿ ಪಾಕಿಸ್ತಾನಿ ಏಜೆನ್ಸಿಯೊಂದಕ್ಕೆ ಪ್ರಾಸ್ಟಿಟ್ಯೂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದರುʼ ಎಂದು ನೀಡಿದ್ದ ಹೇಳಿಕೆಗಳನ್ನು ಬಿಜೆಪಿ ಸಾಕಿದ ಮಾಧ್ಯಮಗಳು ವಾರಗಟ್ಟಲೆ ವರದಿ, ಸ್ಪೆಷಲ್‌ ಸ್ಟೋರಿ, ಸೆಗ್ಮೆಂಟ್‌, ಚರ್ಚಾ ಕಾರ್ಯಕ್ರಮಗಳನ್ನು ಮಾಡಿದ್ದವು. ಆದರೆ, ಈಗ ಸ್ವತಃ ಸುಬ್ರಮಣಿಯನ್‌ ಸ್ವಾಮಿ ಅವರೇ, ಪ್ರಧಾನಿ ಮೋದಿ ಅವರ ಸ್ತ್ರೀಲೋಲುಪತೆಯ ಬಗ್ಗೆ ಪ್ರಸ್ತಾಪಿಸಿರುವುದರ ಬಗ್ಗೆ ಒಂದು ಸಣ್ಣ ವರದಿಯೂ ಮಾಡದೆ ಇರುವುದು ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿರುವುದನ್ನು ಸ್ವತಃ ತಾವೇ ಸಾಬೀತು ಮಾಡಿಕೊಂಡಂತಿದೆ.  

ಇನ್ನು, “ನಾವು ಮಹಿಳೆಯರು, ರಾಹುಲ್ ಗಾಂಧಿ ನಡೆದುಕೊಳ್ಳುವ ರೀತಿ ನೋಡಿದರೆ, ನಮಗೆ ತುಂಬಾ ಇರುಸುಮುರುಸಾಗುತ್ತದೆ. ಅವರು ‘ಟಪೋರಿ’ಯಂತೆ ವರ್ತಿಸುತ್ತಾರೆ. ಆದರೆ ಅವರು ತಮ್ಮ ಸಹೋದರಿಯ ನಡವಳಿಕೆ ನೋಡಿ ಕಲಿಯಬೇಕು. ಇದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದ ಬಿಜೆಪಿ ನೇತೃತ್ವದ ಸರ್ಕಾರದಿಂದ ಪದ್ಮ ಪ್ರಶಸ್ತಿ ಪಡೆದ ನಟಿ, ಬಿಜೆಪಿಯ ಸಂಸದೆ, ಮೋದಿಯ ಪರಮ ಭಕ್ತೆ ಕಂಗನಾ ರಣಾವತ್‌, ಸುಬ್ರಮಣಿಯನ್‌ ಸ್ವಾಮಿ ನೀಡಿರುವ ಹೇಳಿಕೆಯ ಬಗ್ಗೆ ಈಗ ಏನು ಹೇಳುತ್ತಾರೆ?

ಬಹುಶಃ ಇವೆಲ್ಲಾ ಪ್ರಶ್ನೆಗಳು ಕಟುವಾಗಿ ಕಾಣಿಸಿದರೂ, ಚರ್ಚಾರ್ಹ ಸತ್ಯಾಂಶ. ಎಂದಿನಂತೆ ಬಿಜೆಪಿ ಮತ್ತು ಬಿಜೆಪಿಯ ಮಡಿಲ ಮಾಧ್ಯಮಗಳ ಧೋರಣೆಯ ಬಗ್ಗೆ ಅಸಹ್ಯವೆನ್ನಿಸದೆ ಇರುವುದಿಲ್ಲ. ದೇಶದ ಪ್ರಮುಖ ಎಲ್ಲಾ ಮಾಧ್ಯಮ ಸಂಸ್ಥೆಗಳು 2014ರಿಂದ ಬಿಜೆಪಿಯ ಸಿದ್ಧಾಂತಕ್ಕೆ ಮಾರಿಕೊಂಡಿವೆ ಎನ್ನುವ ಆರೋಪಗಳು ಇಂತಹ ಪ್ರಸಂಗಗಳು ಎದುರಾದಾಗ ಮತ್ತೆ ಮತ್ತೆ ಸಾಬೀತಾಗುತ್ತಿವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಸಂಸತ್‌ ಸದನಗಳಲ್ಲಿ ರಾಹುಲ್‌ ಗಾಂಧಿ ಜೆಫ್ರಿ ಎಪ್ಸ್ಟೀನ್ ಫೈಲ್‌ನಲ್ಲಿ ಮೋದಿ ಹೆಸರು ಇರುವ ಬಗ್ಗೆ ಪ್ರಸ್ತಾಪಿಸಿದಾಗ ಬಹುತೇಕ ಎಲ್ಲಾ ಮಾಧ್ಯಮಗಳು, ರಾಹುಲ್‌ ಗಾಂಧಿ ಮೋದಿ ಅವರ ಚಾರಿತ್ರ್ಯ ಹರಣ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟ/ಪ್ರಸಾರ ಮಾಡಿದ್ದವು.  ಆದರೆ, ಈಗ ಮೋದಿ ಬಗ್ಗೆ  ಸುಬ್ರಮಣಿಯನ್‌ ಸ್ವಾಮಿ ಮತ್ತು ಮಧು ಪೂರ್ಣಿಮಾ ಕಿಶ್ವರ ಅವರು ಮಾಡಿರುವ ಆರೋಪಗಳನ್ನು ಅದುಮಿಡುತ್ತಿರುವ ಬಿಜೆಪಿ ಮಾಧ್ಯಮಗಳ ಪ್ರಯತ್ನ ನಿಜಕ್ಕೂ ಅಸಹ್ಯಕರ. ಮುಂದೊಂದು ದಿನ ಬಿಜೆಪಿಯ ಕೊಳಕು ಈ ಎಲ್ಲಾ ಮಾಧ್ಯಮಗಳ ಮುಖಕ್ಕೆ ರಾಚದೆ ಇರುವುದಿಲ್ಲ. ಮತದಾರರ ರಕ್ಷಣೆಗಿಂತ ಈ ಮಡಿಲ ಮಾಧ್ಯಮಗಳ ರಕ್ಷಣೆಯಿಂದಲೇ ಬಿಜೆಪಿ ಉಸಿರಾಡುತ್ತಿದೆ. ಬಹುಶಃ ಮಾಧ್ಯಮಗಳ ಸಹಕಾರವಿಲ್ಲದೆ, ಬಿಜೆಪಿ ಮತ್ತು ಮೋದಿಯ ಅಸ್ತಿತ್ವವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

ಮೋದಿ ಮತ್ತು ಬಿಜೆಪಿಯ ಹಿತ ಕಾಯುವುದಕ್ಕೆ ಮಡಿಲ ಮಾಧ್ಯಮಗಳು ಮಾಡುತ್ತಿರುವ ಈ ಪರಿಯ ಸಾಹಸ ವ್ಯವಸ್ಥೆಯ ಕೊಳಕನ್ನು ಎತ್ತಿ ತೋರಿಸುತ್ತಿದೆ. ಬಿಜೆಪಿಯ ಮಡಿಲ ಮಾಧ್ಯಮಗಳು ಎಷ್ಟೇ ಸಾಹಸ ಮಾಡಿದರೂ ಸತ್ಯವನ್ನು ಅವಿತಿಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಪರಮ ಸತ್ಯ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು...