ನಿಂಬೆ ಹಣ್ಣು ಬೆಳೆಯಲು BJP ಸಂಸದನಿಗೆ 4.20 ಲಕ್ಷ ರೂ. ಸಬ್ಸಿಡಿ: ಲೋಕಸಭೆಯಲ್ಲಿ ಬಹಿರಂಗ

Date:

ರಾಜಸ್ಥಾನದ ಬಿಜೆಪಿ ಸಂಸದ ಲುಂಬಾರಾಮ್ ಚೌಧರಿ ಅವರು ನಿಂಬೆ ಹಣ್ಣು ಬೆಳೆ ಬೆಳೆಯಲು 4.20 ಲಕ್ಷ ರೂ,ಗಳ ಸಬ್ಸಿಡಿ ಪಡೆದಿರುವುದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಲಿಖಿತ ಉತ್ತರದಿಂದ ಬಹಿರಂಗವಾಗಿದೆ.

- Advertisement -

ರಾಜಸ್ಥಾನದ ಜಾಲೋರ್ ಕ್ಷೇತ್ರದ ಸಂಸರಾಗಿರುವ ಚೌಧರಿ ಅವರು ಕೇಂದ್ರ ಸರ್ಕಾರದ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಆರ್ಥಿಕ ನೆರವು ಪಡೆದಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದ ತೋಟಗಾರಿಕೆ ಯೋಜನೆಯಡಿ ಸಬ್ಸಿಡಿ ಪಡೆದ ಹಾಲಿ ಸಂಸದರಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಗೀರಥ್ ಚೌಧರಿ ಅವರ ನಂತರ, ಲುಂಬಾರಾಮ್ ಚೌಧರಿ ಅವರೂ ಸೇರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಸರ್ಕಾರದ ದಾಖಲೆಗಳ ಪ್ರಕಾರ, ರಾಜಸ್ಥಾನದ ಸಿರೋಹಿ ಜಿಲ್ಲೆಯ ವಾಡೇಲಿ ಗ್ರಾಮದಲ್ಲಿ ಲುಂಬಾರಾಮ್ ಚೌಧರಿ ಅವರು ಸುಮಾರು 6 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ನಿಂಬೆ ಬೆಳೆ ಬೆಳೆಯುವ ಯೋಜನೆಗಾಗಿ ಚೌಧರಿ ಅವರು 2021ರ ಏಪ್ರಿಲ್‌ನಲ್ಲಿ ಸಬ್ಸಿಡಿಗೆ ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯ ಒಟ್ಟು ವೆಚ್ಚ 16.92 ಲಕ್ಷ ರೂ.ಗಳಾಗಿದ್ದು, ಅದರಲ್ಲಿ 12.69 ಲಕ್ಷ ರೂ. ಸಾಲ ಪಡೆದಿರುವಾಗಿ ಹೇಳಿಕೊಂಡಿದ್ದರು. ಅವರ ಅರ್ಜಿಯನ್ನು 2024ರ ಡಿಸೆಂಬರ್‌ನಲ್ಲಿ ಅನುಮೋದಿಸಿದ ಕೃಷಿ ಸಚಿವಾಲಯವು, 2025ರ ಜನವರಿ 15ರಂದು 4.20 ಲಕ್ಷ ರೂ. ಸಬ್ಸಿಡಿಯನ್ನು ಚೌಧರಿ ಅವರ ಎಸ್‌ಬಿಐ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ.

ಲುಂಬಾರಾಮ್ ಚೌಧರಿ ಅವರು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಂಸದರಾಗಿರಲಿಲ್ಲ. ಆದರೆ, ಅರ್ಜಿಗೆ ಅನುಮೋದನೆ ದೊರೆಯುವ ವೇಳೆಗೆ, ಅಂದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಸಂಸದರಾಗಿ ಆಯ್ಕೆಯಾಗಿದ್ದರು. ಆದಾಗ್ಯೂ, ಸಂಸದರಾಗುವುದಕ್ಕೂ ಮುನ್ನ ಚೌಧರಿ ಅವರು ಸಿರೋಹಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಲೋಕಸಭೆ ವೆಬ್‌ಸೈಟ್‌ನಲ್ಲಿ ಅವರ ವೃತ್ತಿಯನ್ನು ಕೃಷಿಕ, ರೈತ ಹಾಗೂ ಎಲ್‌ಐಸಿ ಏಜೆಂಟ್ ಎಂದು ದಾಖಲಿಸಲಾಗಿದೆ.

ಈ ಲೇಖನ ಓದಿದ್ದೀರಾ?: ನೆಕ್ಕಿದ್ದನ್ನು ಕಕ್ಕಿದ ಕೇಂದ್ರ ಸಚಿವ: ‘ಕೋಟಿ’ ರು ಸೌತೆಕಾಯಿ ಸಬ್ಸಿಡಿ ವಾಪಸ್, ‘ನಾನೂ ರೈತನೇ’ ಎಂದ ಭಂಡತನಕ್ಕೆ ವಿಪಕ್ಷಗಳ ಚಾಟಿ

ಅಂದಹಾಗೆ, ಇದೇ ರಾಜಸ್ಥಾನದವರೇ ಆದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾಗಿರುವ ಭಗೀರಥ್ ಚೌಧರಿ ಅವರೂ ಕೂಡ ತಮ್ಮದೇ ಸಚಿವಾಲಯದ ಯೋಜನೆಯಡಿ ಸೌತೆಕಾಯಿ ಬೆಳೆಗೆ 99 ಲಕ್ಷ ರೂ. ಸಬ್ಸಿಡಿ ಪಡೆದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ, ರಾಜಕೀಯವಾಗಿಯೂ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಾವು ಸಬ್ಸಿಡಿ ಪಡೆದಿದ್ದನ್ನು ಸಮರ್ಥಿಸಿಕೊಂಡಿದ್ದ ಭಗೀರಥ್ ಚೌಧರಿ, “ನಾನೂ ರೈತ. ಕೃಷಿಕನಾಗಿ ಸರ್ಕಾರದಿಂದ ಸಬ್ಸಿಡಿ ಪಡೆಯಲು ಅರ್ಹನಾಗಿದ್ದೇನೆ” ಎಂದು ವಾದಿಸಿದ್ದರು. ಆದರೆ, ಇದೀಗ, ಅವರು ತಾವು ಪಡೆದಿದ್ದ ಸಬ್ಸಿಡಿ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ.

ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಇದೇ ಯೋಜನೆಯಡಿ ಕೇಂದ್ರದ ಉನ್ನತ ಶಿಕ್ಷಣ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಕಗೊಂಡ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರ ಕುಟುಂಬದ ಮೂವರು ಸದಸ್ಯರು ಐದು ವರ್ಷಗಳಲ್ಲಿ ಒಟ್ಟಾರೆ 1.16 ಕೋಟಿ ರೂ.ಗಳಿಗೂ ಹೆಚ್ಚು ತೋಟಗಾರಿಕೆ ಸಬ್ಸಿಡಿ ಪಡೆದಿದ್ದಾರೆ ಎಂಬುದನ್ನು ವರದಿಗಳು ಬಹಿರಂಗಪಡಿಸಿವೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...