ಮತದಾರರ ಪಟ್ಟಿಯ ಯಡವಟ್ಟು; ಉತ್ತರ ಪ್ರದೇಶ ಚುನಾವಣಾ ಆಯೋಗದಿಂದ ಕ್ಷಮೆಯಾಚನೆ

Date:

ಮತದಾರರ ಪಟ್ಟಿಯಲ್ಲಿ ಕಂಡುಬಂದ ವಿಚಿತ್ರ ದೋಷಗಳ ಕುರಿತು ವ್ಯಕ್ತವಾದ ಟೀಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ವಿವಾದಾತ್ಮಕ ಪ್ರತಿಕ್ರಿಯೆಗೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (CEO) ಅವರ ಕಚೇರಿ ಕ್ಷಮೆಯಾಚಿಸಿದೆ. ಅಧಿಕೃತ ಎಕ್ಸ್ ಖಾತೆಯಲ್ಲಿ ಬಳಸಲಾದ ಭಾಷೆ ಮತ್ತು ಶೈಲಿ ಸೂಕ್ತವಾಗಿರಲಿಲ್ಲ ಎಂದು ಒಪ್ಪಿಕೊಂಡಿರುವ ಆಯೋಗ, ಇನ್ಮುಂದೆ ತನ್ನ ಸಂವಹನವು ಗೌರವಾನ್ವಿತ ಹಾಗೂ ಅಧಿಕೃತವಾಗಿರಲಿದೆ ಎಂದು ಸ್ಪಷ್ಟಪಡಿಸಿದೆ.

- Advertisement -

ಏನಿದು ವಿವಾದ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

ಉತ್ತರ ಪ್ರದೇಶದ ವಿಧಾನ ಪರಿಷತ್ (MLC) ಚುನಾವಣೆಯ ಮತದಾರರ ಪಟ್ಟಿಯಲ್ಲಿ “ರಾಮ್ ನೇ ಯಾದವ್ ಕೋ ಮಾರಾ” (ರಾಮ್ ಯಾದವ್‌ಗೆ ಹೊಡೆದನು) ಎಂಬ ವಿಚಿತ್ರ ಹೆಸರು ಕಾಣಿಸಿಕೊಂಡಿತ್ತು. ಇದು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆಪ್ (AAP) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, “ರಾಮ್ ಕೇವಲ ಯಾದವ್‌ಗೆ ಮಾತ್ರ ಏಕೆ ಹೊಡೆದರು? ಯಾವುದೇ ಸಿಂಗ್, ಪಾಠಕ್, ಶರ್ಮಾ ಅಥವಾ ರೈ ಅವರಿಗೆ ಏಕೆ ಹೊಡೆಯಲಿಲ್ಲ? ನಿಮ್ಮ ಕಂಪ್ಯೂಟರ್ ಜಾತಿವಾದಿಯೇ?” ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದರು.

ಆಪ್‌ ಸೇರಿದಂತೆ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ್ದ ಯುಪಿ ಸಿಇಒ ಅಧಿಕೃತ ಖಾತೆಯು, “ಕಂಪ್ಯೂಟರ್ ಅಥವಾ ತಂತ್ರಾಂಶಗಳು ಜಾತಿವಾದಿಯಲ್ಲ. ತಪ್ಪು ನಡೆದಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ, ಆದರೆ ಅದೃಷ್ಟವಶಾತ್ ತಪ್ಪು ಮಾಡುವಾಗಲೂ ಯಾವುದೇ ಜಾತಿ ತಾರತಮ್ಯವಾಗಿಲ್ಲ. ರಾಮ್ ಯಾವುದೇ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಕೊಲ್ಲಲಿಲ್ಲ ಎಂದು ದೇವರಿಗೆ ಧನ್ಯವಾದ ಹೇಳಬೇಕು, ಇಲ್ಲದಿದ್ದರೆ ಜಾತಿವಾದದ ಜೊತೆಗೆ ಕೋಮುವಾದದ ಆರೋಪವನ್ನೂ ಹೊರಿಸಲಾಗುತ್ತಿತ್ತು” ಎಂದು ವ್ಯಂಗ್ಯಾತ್ಮಕವಾಗಿ ಪೋಸ್ಟ್ ಮಾಡಿತ್ತು.

ಸಂಸ್ಥೆಯ ಅಧಿಕೃತ ಖಾತೆಯಿಂದ ಬಂದ ಈ ಬೇಜವಾಬ್ದಾರಿ ಪೋಸ್ಟ್ ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಿಇಒ ಕಚೇರಿ, ತಕ್ಷಣವೇ ಪೋಸ್ಟ್ ಹಿಂಪಡೆದು ಕ್ಷಮೆಯಾಚಿಸಿದೆ.

“ಹಿಂದಿನ ಪೋಸ್ಟ್‌ನಲ್ಲಿ ಬಳಸಲಾದ ಭಾಷೆ, ಶೈಲಿ ಮತ್ತು ತೀಕ್ಷ್ಣತೆ ಅಧಿಕೃತ ಖಾತೆಗೆ ಶೋಭೆ ತರುವಂತಿರಲಿಲ್ಲ. ಪೋಸ್ಟ್‌ನಿಂದ ಸಾರ್ವಜನಿಕರಲ್ಲಿ ಉಂಟಾದ ಆಕ್ರೋಶವನ್ನು ಗಮನಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಪ್ರತಿಯೊಬ್ಬರಲ್ಲೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇನ್ಮುಂದೆ ನಮ್ಮ ಸಂವಹನವು ಶಾಂತ, ಗೌರವಾನ್ವಿತ ಮತ್ತು Formal ಆಗಿರಲಿದೆ” ಎಂದು ಸಿಇಒ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; 99.32 ಲಕ್ಷ ಹೆಸರುಗಳು ಔಟ್‌!

ಈ ಯಡವಟ್ಟಿನ ಕುರಿತು ವಿವರಣೆ ನೀಡಿರುವ ಯುಪಿ ಸಿಇಒ ನವದೀಪ್ ರಿನ್ವಾ, ಅನುವಾದ ತಂತ್ರಾಂಶದ ದೋಷ ಮತ್ತು ಮಾನವ ಸಹಜ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ರಾಮ್‌ಹಿತ್ ಯಾದವ್” ಎಂಬ ಹೆಸರನ್ನು ತಂತ್ರಾಂಶವು ತಪ್ಪಾಗಿ ಅನುವಾದಿಸಿದ್ದರಿಂದ ಈ ಸಮಸ್ಯೆ ಎದುರಾಗಿತ್ತು.

ಒಟ್ಟು 14.81 ಲಕ್ಷ ನೋಂದಾಯಿತ ಮತದಾರರ ಪೈಕಿ 158 ಹೆಸರುಗಳಲ್ಲಿ ಇಂತಹ ದೋಷಗಳು ಕಂಡುಬಂದಿದ್ದು, ಇದಕ್ಕೆ ಕಾರಣರಾದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನೊಟೀಸ್ ಜಾರಿಗೊಳಿಸಿ ವಿವರಣೆ ಕೇಳಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಿವೀಸ್ ಬಗ್ಗುಬಡಿದ ಭಾರತ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 3-0 ಅಂತರದಲ್ಲಿ ಸರಣಿ ಕೈವಶ

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿರುವ ಹೆನ್ರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 27ರಂದು ನಡೆದ ಆತಿಥೇಯ ನ್ಯೂಜಿಲೆಂಡ್...

ಬೀದರ್‌ | ಬಿಸಿಲಿನ ತಾಪ ಹೆಚ್ಚಳ: ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಲು ಸಿಇಒ ಸಲಹೆ

ಬೀದರ್ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ...

ಬೀದರ್‌ | ಎಣ್ಣೆಕಾಳು ಉತ್ಪಾದನೆ ಸ್ವಾವಲಂಬನೆ ಅಗತ್ಯ : ಡಿಸಿ ಶಿಲ್ಪಾ ಶರ್ಮಾ

ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಕುಸುಬೆ,...