‘ಜೆನ್ ಝೀ’ ಯುವಕರು ಫ್ರೆಂಡ್ಸ್ ಎನ್ನುತ್ತಲೇ ಎಫ್‌ಐಆರ್ ಅಸ್ತ್ರ: ಮೋದಿಯವರ ‘ಎಡಬಿಡಂಗಿ’ ನಿಲುವಿಗೆ ಸಾರ್ವಜನಿಕರ ಆಕ್ರೋಶ

Date:

ದೇಶದ ಯುವಜನತೆಯನ್ನು, ಅದರಲ್ಲೂ ‘ಜೆನ್ ಝೀ’ (Gen Z) ಪೀಳಿಗೆಯನ್ನು ‘ಗೆಳೆಯರು’ ಎಂದು ಪ್ರೀತಿಯಿಂದ ಕರೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಮತ್ತು ಆಡಳಿತ ಯಂತ್ರದ ವಾಸ್ತವಿಕ ಕ್ರಮಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. “ಅವರು ದಾರಿ ತಪ್ಪಿದ ಮಕ್ಕಳು, ಅವರನ್ನು ಕ್ಷಮಿಸಿದ್ದೇನೆ” ಎಂಬ ಪ್ರಧಾನಿಯವರ ಹೇಳಿಕೆಗಳ ನಡುವೆಯೇ, ಪ್ರತಿಭಟನಾನಿರತ ಯುವಜನರ ಬೆನ್ನಿಗೆ ಪೊಲೀಸರನ್ನು ಬಿಟ್ಟಿರುವುದು ಅವರ ಎಡಬಿಡಂಗಿ ನಿಲುವನ್ನು ಜಗಜ್ಜಾಹೀರು ಮಾಡಿದೆ.

- Advertisement -

ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಪ್ರಧಾನಿ ಮೋದಿಯವರು ಯುವಜನತೆಯನ್ನು ದೇಶದ ಭವಿಷ್ಯ ಎಂದು ಬಣ್ಣಿಸುತ್ತಾರೆ. ಯುವಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ, ಅವರನ್ನು ಪ್ರಬುದ್ಧತೆಯಿಂದ ಕಾಣುವ ಮತ್ತು ಕ್ಷಮಿಸುವ ದೊಡ್ಡತನ ತಮ್ಮದಾಗಿದೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಈ ‘ಸ್ನೇಹ’ ಮತ್ತು ‘ಕ್ಷಮೆ’ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಈಗ ದಟ್ಟವಾಗಿ ಕಾಡತೊಡಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಈ ದ್ವಂದ್ವ ನಿಲುವಿಗೆ ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ‘ನೀಟ್’ (NEET) ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಯೇ ತಾಜಾ ಉದಾಹರಣೆಯಾಗಿದೆ. ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡ ಯುವತಿಯೊಬ್ಬಳು ಪ್ರಧಾನಿ ವಿರುದ್ಧ ಕೆಲವು ಪದಗಳನ್ನು ಬಳಸಿದ್ದನ್ನೇ ನೆಪವಾಗಿಟ್ಟುಕೊಂಡು, ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (BNS) ಕ್ರಿಮಿನಲ್ ಮಾನನಷ್ಟ, ಶಾಂತಿ ಕದಡುವ ಯತ್ನದಂತಹ ಗಂಭೀರ ಸೆಕ್ಷನ್‌ಗಳಡಿ ‘ಝೀರೋ ಎಫ್‌ಐಆರ್’ ದಾಖಲಿಸಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಯುವತಿಯನ್ನು ‘ದಾರಿ ತಪ್ಪಿದ ಮಗು’ ಎಂದು ಭಾವಿಸಿ ನಿಜಕ್ಕೂ ಕ್ಷಮಿಸಿದ್ದರೆ, ಈ ಮಟ್ಟದ ಪೊಲೀಸ್ ಕಾರ್ಯಾಚರಣೆಯ ಅಗತ್ಯವೇನಿತ್ತು ಎಂಬುದು ಸಾರ್ವಜನಿಕರ ನೇರ ಪ್ರಶ್ನೆ. ಪ್ರಧಾನಿಯವರ ನಿಘಂಟಿನಲ್ಲಿ ‘ಫ್ರೆಂಡ್ಸ್’ ಮತ್ತು ‘ಕ್ಷಮೆ’ ಎಂಬ ಪದಗಳಿಗೆ ಬೇರೆಯದೇ ಅರ್ಥವಿದೆಯೇ? ಭಾಷಣದಲ್ಲಿ ಪ್ರಜಾಪ್ರಭುತ್ವದ ಸಹಿಷ್ಣುತೆ ಮೆರೆದು, ವಾಸ್ತವದಲ್ಲಿ ಪೊಲೀಸರ ಮೂಲಕ ದಮನಕಾರಿ ನೀತಿ ಅನುಸರಿಸುವುದು ಪ್ರಧಾನಿಯವರ ಅಸ್ಥಿರ ಹಾಗೂ ಎಡಬಿಡಂಗಿ ನಡೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಕೇವಲ ಎಫ್‌ಐಆರ್ ಮಾತ್ರವಲ್ಲದೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವತಿಯರ ವೈಯಕ್ತಿಕ ಮಾಹಿತಿಯನ್ನು ಜಾಲತಾಣಗಳಲ್ಲಿ ಹರಿಯಬಿಟ್ಟು ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ. ಆಡಳಿತದ ಈ ಇಬ್ಬಗೆಯ ನೀತಿಯಿಂದಾಗಿ ಯುವಜನತೆ ಕಂಗಾಲಾಗಿದ್ದಾರೆ. ಅತ್ತ ಪ್ರಧಾನಿ ‘ನಾನು ನಿಮ್ಮೊಂದಿಗಿದ್ದೇನೆ’ ಎನ್ನುತ್ತಾರೆ, ಇತ್ತ ಅವರದೇ ಆಡಳಿತ ಯಂತ್ರ ವಿದ್ಯಾರ್ಥಿಗಳನ್ನು ಹೆದರಿಸಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವುದು ಯುವಜನತೆಯ ಹಕ್ಕು. ಅವರನ್ನು ‘ಸ್ನೇಹಿತರು’ ಎಂದು ಕರೆದು ಬೆನ್ನು ತಟ್ಟುವ ನಾಯಕ, ಅವರ ಸಾತ್ವಿಕ ಸಿಟ್ಟನ್ನು ಅರ್ಥಮಾಡಿಕೊಳ್ಳಬೇಕೇ ವಿನಃ ಪೊಲೀಸರನ್ನು ಛೂ ಬಿಡುವುದಲ್ಲ. ಮಾತು ಮತ್ತು ಕೃತಿಯ ನಡುವಿನ ಈ ಕಂದಕವನ್ನು ಸರ್ಕಾರ ಸರಿಪಡಿಸಿಕೊಳ್ಳದಿದ್ದರೆ, ಪ್ರಧಾನಿಯವರ ‘ಕ್ಷಮೆ’ ಕೇವಲ ರಾಜಕೀಯ ಗಿಮಿಕ್ ಆಗಿ ಮಾತ್ರವೇ ಉಳಿಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಅಮೆರಿಕದ ಶೇ.100ರಷ್ಟು ಸುಂಕದ ಬೆದರಿಕೆ

ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಗೆ ತಿದ್ದುಪಡಿ ತಂದು, ಭಾರತ ಸೇರಿದಂತೆ ಹಲವು...

ಸಂಜೆ ಮಳೆಗೆ ಬೆಂಗಳೂರು ತತ್ತರ: ಟ್ರಾಫಿಕ್‌ನಲ್ಲಿ ಸಿಲುಕಿದ ಜನರು, 11 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ದಿಢೀರನೆ ಶುರುವಾದ ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನಜೀವನ...

ಪತಂಜಲಿ ಪ್ರಕರಣ: ಕಣ್ಣುಮುಚ್ಚಿಕೊಂಡು ಆದೇಶ ಹೊರಡಿಸಿದ ‘ಐಟಿಎಟಿ’ಗೆ ದೆಹಲಿ ಹೈಕೋರ್ಟ್ ತರಾಟೆ, 7 ಆದೇಶಗಳು ರದ್ದು

ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ ಸಂಬಂಧಿಸಿದಂತೆ 'ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ' (ITAT)...

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ದುಬೈಗೆ ತೆರಳಬೇಕಿದ್ದ ಸ್ಪೈಸ್‌ಜೆಟ್‌ನ ಎರಡು ವಿಮಾನಗಳು ಪದೇಪದೇ ವಿಳಂಬಗೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ...