ಕುಂಭಮೇಳದ ಹೊಸ್ತಿಲಲ್ಲಿ ಆತಂಕ: ನಾಸಿಕ್‌ ನೀರಿನಲ್ಲಿ ಸಾವಿರ ಪಟ್ಟು ಹೆಚ್ಚು ಕ್ಯಾನ್ಸರ್‌ಕಾರಕ ‘ಕ್ರೋಮಿಯಂ’ ಪತ್ತೆ

Date:

2027ರಲ್ಲಿ ಜರುಗಲಿರುವ ಕುಂಭಮೇಳಕ್ಕೆ ಸಜ್ಜಾಗುತ್ತಿರುವ ಮಹಾರಾಷ್ಟ್ರದ ನಾಸಿಕ್‌ ನಗರದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ವರದಿಯಾಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶದ ಬಳಿ ನದಿ ನೀರಿನಲ್ಲಿ ಕುಡಿಯುವ ನೀರಿನ ಮಿತಿಗಿಂತ ಬರೋಬ್ಬರಿ ಸಾವಿರ ಪಟ್ಟು ಹೆಚ್ಚು ಕ್ಯಾನ್ಸರ್‌ಕಾರಕ ‘ಕ್ರೋಮಿಯಂ’ ಅಂಶ ಪತ್ತೆಯಾಗಿದೆ. ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುವ ಗೋದಾವರಿ ನದಿಗೆ ಈ ವಿಷಕಾರಿ ರಾಸಾಯನಿಕ ಸೇರುತ್ತಿರುವುದು ಭಾರಿ ಆತಂಕ ಸೃಷ್ಟಿಸಿದ್ದು, ವರದಿ ಬೆನ್ನಲ್ಲೇ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

- Advertisement -

ನಾಸಿಕ್‌ನ ಅಂಬಡ್‌ ಕೈಗಾರಿಕಾ ಪ್ರದೇಶದ ಬಳಿ ಹರಿಯುವ, ಮುಂದೆ ಗೋದಾವರಿ ನದಿಯನ್ನು ಸೇರುವ ನಂದಿನಿ ನದಿಪಾತ್ರದಲ್ಲಿ ಸಂಗ್ರಹಿಸಲಾದ ನೀರಿನ ಮಾದರಿಗಳ ಪರೀಕ್ಷೆಯಿಂದ ಈ ಸತ್ಯ ಬಹಿರಂಗವಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಕಾರ ಕುಡಿಯುವ ನೀರಿನಲ್ಲಿ ಕ್ರೋಮಿಯಂ ಪ್ರಮಾಣ ಪ್ರತಿ ಲೀಟರ್‌ಗೆ 0.05 ಮಿಲಿಗ್ರಾಂ ಮಾತ್ರ ಇರಬೇಕು. ಆದರೆ, ಈ ನೀರಿನಲ್ಲಿ ಒಟ್ಟು ಕ್ರೋಮಿಯಂ ಪ್ರಮಾಣ ಲೀಟರ್‌ಗೆ 50.5 ಎಂ.ಜಿ. ಇದ್ದು, ಅದರಲ್ಲಿ ತೀವ್ರ ವಿಷಕಾರಿಯಾದ ‘ಹೆಕ್ಸಾವೆಲೆಂಟ್ ಕ್ರೋಮಿಯಂ’ ಅಂಶವೇ 50.3 ಎಂ.ಜಿ. ಇರುವುದು ದೃಢಪಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ ಕೆಲವು ಕಡೆ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ತಂದೆ, ಸಹೋದರ ಅಥವಾ ಕುಟುಂಬದ ಇತರ ಪುರುಷರು ಆಡಳಿತದಲ್ಲಿ ಹಸ್ತಕ್ಷೇಪ...

ಪ್ರಜಾಪ್ರಭುತ್ವದ ಪ್ರತಿಭಟನೆ ಮತ್ತು ಪೊಲೀಸ್ ವ್ಯವಸ್ಥೆ

ಭಾರತದಲ್ಲಿ ಪ್ರತಿಭಟನೆಗಳಿಗೆ ಶತಮಾನಗಳ ಸಂಪ್ರದಾಯವಿದೆ. ಬ್ಯಾರಿಕೇಡ್‌ಗಳನ್ನು ಹಾರುವುದು, ಮಾನವ ಸರಪಳಿ ರಚಿಸುವುದು ಅಥವಾ ಬಂಧನವನ್ನು ವಿರೋಧಿಸಿ ನೆಲದ ಮೇಲೆ ಮಲಗುವುದು ಪ್ರಜಾಪ್ರಭುತ್ವದ ಸಹಜ ಆಂದೋಲನದ ಭಾಗವೇ ಹೊರತು ಖಂಡಿಸಬೇಕಾದ ಅಪರಾಧಗಳಲ್ಲ. ಅಕ್ಟೋಬರ್ 10ರಂದು ದೆಹಲಿಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

ಕುಂಭಮೇಳದ ಸಂದರ್ಭದಲ್ಲಿ ಗೋದಾವರಿ ನದಿಯ ಘಾಟ್‌ಗಳಲ್ಲಿ ಲಕ್ಷೋಪಲಕ್ಷ ಶ್ರದ್ಧಾಳುಗಳು ಸ್ನಾನ ಮಾಡುವುದರಿಂದ, ನೀರಿನ ಗುಣಮಟ್ಟ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕುಂಭಮೇಳದ ಸಿದ್ಧತೆಗಳ ಉಸ್ತುವಾರಿ ಸಚಿವ ಗಿರೀಶ್ ಮಹಾಜನ್ ಗುರುವಾರ ಅಂಬಡ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪರಿಸರ ಸಚಿವೆ ಪಂಕಜಾ ಮುಂಡೆ ಅವರೊಂದಿಗೆ ಮಾತುಕತೆ ನಡೆಸಿದರು. ವರದಿಯ ಗಂಭೀರತೆಯನ್ನು ಅರಿತ ಸಚಿವೆ ಪಂಕಜಾ ಮುಂಡೆ, ಮಾಲಿನ್ಯ ಉಂಟುಮಾಡುತ್ತಿರುವ ಕೈಗಾರಿಕೆಗಳನ್ನು ಗುರುತಿಸಿ, ತಕ್ಷಣವೇ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ (MPCB) ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಜಲ ಮಾಲಿನ್ಯದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ನಾಸಿಕ್ ಮೂಲದ ಪರಿಸರ ಕಾರ್ಯಕರ್ತ ರಾಜೇಶ್ ಪಂಡಿತ್ ಈ ಆತಂಕಕಾರಿ ಮಾಹಿತಿಯನ್ನು ಹೊರತಂದಿದ್ದಾರೆ. ಅಂಬಡ್ ಪ್ರದೇಶದ ನಿವಾಸಿಗಳ ಬೋರ್‌ವೆಲ್‌ಗಳಲ್ಲಿ ಹಳದಿ ಬಣ್ಣದ ನೀರು ಬರುತ್ತಿರುವ ಬಗ್ಗೆ ಅವರಿಗೆ ದೂರುಗಳು ಬಂದಿದ್ದವು. ಹೀಗಾಗಿ ರಾಜೇಶ್ ಪಂಡಿತ್ ಹಾಗೂ ‘ಸ್ಯಾಂಡ್ರಪ್’ ಸಂಸ್ಥೆಯ ಪರಿಣಿತಾ ದಾಂಡೇಕರ್ ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಅಕ್ಟೋಬರ್ 3ರಂದು ‘ಅಶ್ವಮೇಧ್ ಎಂಜಿನಿಯರ್ಸ್ ಅಂಡ್ ಕನ್ಸಲ್ಟೆಂಟ್ಸ್’ ಎಂಬ ಖಾಸಗಿ ಪ್ರಯೋಗಾಲಯದಲ್ಲಿ ಈ ಮಾದರಿಗಳನ್ನು ಪರೀಕ್ಷಿಸಿದಾಗ ಈ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ನೀರಿನಲ್ಲಿ ಪತ್ತೆಯಾಗಿರುವ ‘ಹೆಕ್ಸಾವೆಲೆಂಟ್ ಕ್ರೋಮಿಯಂ’ ಮನುಷ್ಯರಲ್ಲಿ ಕ್ಯಾನ್ಸರ್ ಉಂಟುಮಾಡುವ ಅತ್ಯಂತ ಅಪಾಯಕಾರಿ ರಾಸಾಯನಿಕವಾಗಿದೆ. ಈ ವಿಷಪೂರಿತ ನೀರನ್ನು ದಿನನಿತ್ಯ ಬಳಸುವುದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗುತ್ತಿವೆ. ಕಲುಷಿತ ನೀರಿನ ಬಳಕೆಯಿಂದ ಚರ್ಮ ರೋಗಗಳು, ರಾಸಾಯನಿಕ ಹುಣ್ಣುಗಳು, ಗುಳ್ಳೆಗಳು, ದುಗ್ಧರಸ ಗ್ರಂಥಿಗಳ ಊತ ಸೇರಿದಂತೆ ಹಲವು ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಇದೇ ಮಾಲಿನ್ಯದಿಂದಾಗಿ ಬಾಧಿತ ಪ್ರದೇಶದ ಇಬ್ಬರು ಮಹಿಳೆಯರಿಗೆ ಗರ್ಭಪಾತವಾಗಿರುವ ಆಘಾತಕಾರಿ ಘಟನೆಗಳೂ ವರದಿಯಾಗಿವೆ.

ಮಾರಣಾಂತಿಕ ಕಾಯಿಲೆಗಳು ಆವರಿಸುತ್ತಿದ್ದರೂ, ಇಲ್ಲಿನ ಜನರು ಅನಿವಾರ್ಯವಾಗಿ ಇದೇ ವಿಷಪೂರಿತ ನೀರನ್ನು ಬಳಸುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ನಾಸಿಕ್ ಮಹಾನಗರ ಪಾಲಿಕೆಯ (NMC) ನಿರ್ಲಕ್ಷ್ಯ. ಪಾಲಿಕೆಯಿಂದ ಈ ಪ್ರದೇಶಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಕೊರತೆಯಿಂದಾಗಿ ಇಲ್ಲಿನ ಬಡ ಕುಟುಂಬಗಳು ಸ್ನಾನ ಮಾಡಲು, ಬಟ್ಟೆ ಒಗೆಯಲು ಮತ್ತು ಪಾತ್ರೆಗಳನ್ನು ತೊಳೆಯಲು ಬೇರೆ ದಾರಿಯಿಲ್ಲದೆ ಇದೇ ಕಲುಷಿತ ಬೋರ್‌ವೆಲ್ ನೀರನ್ನು ಆಶ್ರಯಿಸಿದ್ದಾರೆ. ಇದು ಜನರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತಿದೆ.

ಈ ಬೃಹತ್ ಜಲ ಮಾಲಿನ್ಯಕ್ಕೆ ಕೈಗಾರಿಕೆಗಳ ಬೇಜವಾಬ್ದಾರಿತನವೇ ನೇರ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಪ್ರದೇಶದಲ್ಲಿರುವ ಅಧಿಕೃತ ಕೈಗಾರಿಕಾ ಘಟಕಗಳು ಹಾಗೂ ಅಕ್ರಮ ಕಾರ್ಖಾನೆಗಳು ಎರಡೂ ಸಹ ನಿಯಮಗಳನ್ನು ಗಾಳಿಗೆ ತೂರಿವೆ. ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ಯಾವುದೇ ರೀತಿಯ ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸದೆ ನೇರವಾಗಿ ಕಾಲುವೆ ಮತ್ತು ಬಯಲಿಗೆ ಬಿಡಲಾಗುತ್ತಿದೆ ಎಂದು ರಾಜೇಶ್ ಪಂಡಿತ್ ಆರೋಪಿಸಿದ್ದಾರೆ. ಈ ರಾಸಾಯನಿಕ ತ್ಯಾಜ್ಯವು ನಿಧಾನವಾಗಿ ಭೂಮಿಯೊಳಗೆ ಇಂಗಿ, ಅಂತರ್ಜಲವನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತಿದೆ.

ಸದ್ಯದ ಮಟ್ಟಿಗೆ ಪರೀಕ್ಷೆಯಿಂದ ಕೇವಲ ಒಂದು ಭಾಗದ ಮಾಲಿನ್ಯದ ತೀವ್ರತೆ ಮಾತ್ರ ಬೆಳಕಿಗೆ ಬಂದಿದೆ. ಆದರೆ, ಸುತ್ತಮುತ್ತಲಿನ ಅಂತರ್ಜಲವು ಯಾವ ಮಟ್ಟಿಗೆ ಕಲುಷಿತಗೊಂಡಿದೆ ಮತ್ತು ಇದು ನಿವಾಸಿಗಳ ಮೇಲೆ ಬೀರುತ್ತಿರುವ ಪರಿಣಾಮಗಳೇನು ಎಂಬುದನ್ನು ಅರಿಯಲು ಉನ್ನತ ಮಟ್ಟದ ತನಿಖೆಯ ತುರ್ತು ಅಗತ್ಯವಿದೆ. ಈ ಮಾಲಿನ್ಯವು ಅಂತರ್ಜಲದಲ್ಲಿ ಎಷ್ಟು ದೂರದವರೆಗೆ ಹರಡಿದೆ ಎಂಬುದನ್ನು ಪತ್ತೆಹಚ್ಚಲು ಸಮಗ್ರ ಅಧ್ಯಯನ ನಡೆಸಬೇಕು ಹಾಗೂ ಮುಂಬರುವ ಕುಂಭಮೇಳದ ದೃಷ್ಟಿಯಿಂದ ಗೋದಾವರಿ ನದಿಯ ಪಾವಿತ್ರ್ಯತೆಯನ್ನು ಉಳಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್‌ ಅಪ್ರೂವರ್ ಆಗಿಬಿಡಿ; ಸುಪ್ರೀಂ ಕೋರ್ಟ್ ಅಂಗಳದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಶಕ್ತಿ ಪ್ರದರ್ಶನ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಎಸ್‌ಐಆರ್‌...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ ಪುರುಷರ ವಶ!

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ...

ಪ್ರಧಾನಿ ಮೋದಿ ‘ಕಳ್ಳ’ ಎಂಬ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಮಧ್ಯಂತರ ತಡೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ 2018-19ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ...

ಎಂಪಿ | ಆದಿವಾಸಿಗಳ ಮನೆಗಳ ನೆಲಸಮ ಹದ್ದು ಮೀರಿದ ಅನ್ಯಾಯ; ತಮ್ಮದೇ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಶಿವರಾಜ್ ಸಿಂಗ್ ಆಕ್ರೋಶ

ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಬುಡ್ನಿ ಕ್ಷೇತ್ರದ ಕೋಸ್ಮಿ ಗ್ರಾಮದಲ್ಲಿ ಬುಡಕಟ್ಟು ಕುಟುಂಬಗಳ...